ಮೈಸೂರು: ಅಂಬೇಡ್ಕರ್ ಅವರಂತೆಯೇ ಬಾಬು ಜಗಜೀವನ್ರಾಂ ಅವರು ಭಾರತದ ಸಾಮಾಜಿಕ ವ್ಯವಸ್ಥೆಯ ಆಳ ಅನುಭವದ ಜೊತೆಗೆ ನೋವನ್ನು ಅನುಭವಿಸಿದ್ದರು. ಅದಕ್ಕಾಗಿಯೇ ಅವರು ಆಡಳಿತಾತ್ಮಕವಾಗಿ ಹಾಗೂ ಜೀವನದುದ್ದಕ್ಕೂ ಜಾತಿ ವಿನಾಶಕ್ಕೆ ಹೆಚ್ಚು ಒತ್ತು ನೀಡಿದ್ದರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಡಾ.ಬಾಬು ಜಗಜೀವನರಾಂ ಅಧ್ಯಯನ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಭಾರತದ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಪ್ರಗತಿಗೆ ಬಾಬು ಜಗಜೀವನರಾಂ ಅವರ ಕೊಡುಗೆಗಳು’ ವಿಷಯ ಕುರಿತ ವಿಚಾರಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಒಗ್ಗಟ್ಟು ನಮಗೆ ಶಕ್ತಿ ಕೊಡುತ್ತದೆ. ಮತೀಯವಾದ ಹಾಗೂ ಜಾತೀವಾದ ಶೂದ್ರರನ್ನು ಒಡಕು ಮೂಡಿಸುವ ಮೂಲಕ ನಮ್ಮ ಅಸ್ತಿತ್ವ ಕಳೆದುಕೊಳ್ಳುತ್ತೇವೆ ಎಂಬ ಸಂಗತಿ ಅವರಿಗೆ ತಿಳಿದಿದ್ದರಿಂದಲೇ ಬಾಬು ಜಗಜೀವನರಾಂ ಅವರು ಶೋಷಿತ ವರ್ಗಗಳ ಒಗ್ಗಟ್ಟಿನ ಪರವಾಗಿ ಇದ್ದರು. ಅಂಬೇಡ್ಕರ್ ಹಾಗೂ ಬಾಬೂಜಿ ಅವರು ಪ್ರತ್ಯೇಕತೆಯ ಧ್ವನಿಗೆ ಆಸ್ಪದ ನೀಡಲಿಲ್ಲ’ ಎಂದು ವಿಶ್ಲೇಷಿಸಿದರು.

‘ಬಾಬು ಜಗಜೀವನರಾಂ ರಾಜಕೀಯ ಕ್ಷೇತ್ರದಲ್ಲಿ ಸಜ್ಜನ, ಸುಸಂಸ್ಕೃತ ರಾಜಕಾರಣಿ, ಆಡಳಿತ ಕೌಶಲ, ದೃಷ್ಟಿಕೋನ, ಮುಂದಾಲೋಚನೆಗಳು ಭಾರತದ ಭವಿಷ್ಯದ ಕಡೆಗೆ ಇದ್ದವು. ಕಾರ್ಮಿಕ ಸಚಿವರಾಗಿ ಕಾರ್ಮಿಕರಿಗೆ ಅನೇಕ ಸವಲತ್ತು ನೀಡಿದರು. ರೈಲ್ವೆ, ರಕ್ಷಣಾ ಸಚಿವರಾಗಿ ಉತ್ತಮ ಕೆಲಸ ಮಾಡಿದರು’ ಎಂದರು.

‘ಕ್ಷಾಮ, ಬಡತನ, ಅನಕ್ಷರತೆ, ಹಸಿವು ಇದ್ದ ಸಂದರ್ಭದಲ್ಲಿ ಕೃಷಿ ಸಚಿವರಾದರು. ಆಳವಾದ ಅಧ್ಯಯನದ ಮೂಲಕ ಹೊಸ ತಂತ್ರಜ್ಞಾನ ಅಳವಡಿಸಿ ಕಡಿಮೆ ವೆಚ್ಚದಲ್ಲಿ ಹೆಚ್ಚು ಆಹಾರ ಧಾನ್ಯವನ್ನು ಉತ್ಪಾದನೆ ಮಾಡುವ ಮೂಲಕ ಆಹಾರದಲ್ಲಿ ಸ್ವಾವಲಂಬನೆ ಸಾಧಿಸುವಂತೆ ಮಾಡಿದರು. ಹಸಿರುಕ್ರಾಂತಿಯ ಮೂಲಕ ರಾಷ್ಟ್ರವು ಆಹಾರದಲ್ಲಿ ಸ್ವಾವಲಂಬನೆ ಸಾಧಿಸಲು ಕಾರಣೀಭೂತರಾದರು’ ಎಂದು ಹೇಳಿದರು.

‘ಭಾರತದ ಸಂವಿಧಾನ, ಪ್ರಜಾಪ್ರಭುತ್ವ, ಆಡಳಿತ, ಸಂವಿಧಾನಗಳ ಚರ್ಚೆ ವಿಷಯಗಳಾಗಿದ್ದು, ಅವುಗಳ ಸಂಪೂರ್ಣ ಫಲವನ್ನು ಸಾಮಾನ್ಯ ಜನರಿಗೆ ತಲುಪಿಸಲು ಹೆಣಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನೈತಿಕತೆ ಹಾಗೂ ಸಾಂಸ್ಕೃತಿಕ ನಾಯಕತ್ವ ಕುಸಿದಿರುವುದೇ ಕಾರಣ. ಸಂವಿಧಾನ ಆಶಯಗಳನ್ನು ಜಾರಿಗೆ ತರುವ ಮೂಲಕ ಸಮಸಮಾಜ ನಿರ್ಮಿಸಲು ನಾವು ಪ್ರೇರಣಾ ಶಕ್ತಿಯಾಗಬೇಕಿದೆ’ ಎಂದರು.

ಆಹಾರ ನಾಗರೀಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, ‘ಬಾಬು ಜಗಜೀವನರಾಂ ಕಾರ್ಮಿಕ, ರೈಲ್ವೆ ಖಾತೆಗಳ ಸಚಿವರಾಗಿ ಎಲ್ಲಾ ಇಲಾಖೆಗಳಲ್ಲೂ ಶೋಷಿತ ಸಮುದಾಯಗಳಿಗೆ ಅವಕಾಶ ನೀಡಿದರು. ಬೀಳು ಜಮೀನನ್ನು ಬಡವರಿಗೆ ಕೊಟ್ಟು ತಾಂತ್ರಿಕ ಅಭಿವೃದ್ಧಿಗೆ ಕೃಷಿ ಸಂಶೋಧನಾ ಸಂಸ್ಥೆಗಳನ್ನು ಆರಂಭಿಸಿದರು, ನಮ್ಮ ದೇಶದ ಆಹಾರ ಬೆಳೆಗಳು ವಿದೇಶಗಳಿಗೆ ರಫ್ತಾಗುತ್ತಿದ್ದು, ಆಹಾರದಲ್ಲಿ ಸ್ವಾವಲಂಬನೆ ಸಾಧಿಸಲು ಬಾಬು ಜಗಜೀವನರಾಂ ಕಾರಣ’ ಎಂದು ಹೇಳಿದರು.

ಮಹಾರಾಜ ಕಾಲೇಜು ಪ್ರಾಧ್ಯಾಪಕ ಪ್ರೊ.ಆರ್.ತಿಮ್ಮರಾಯಪ್ಪ ಪ್ರಧಾನ ಭಾಷಣ ಮಾಡಿದರು. ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಅಧ್ಯಕ್ಷತೆ ವಹಿಸಿದ್ದರು. ಕುಲ ಸಚಿವ ಎಸ್.ಕೆ.ನವೀನ್ ಕುಮಾರ್, ರಾಮನಾಥನ್ ನಾಯ್ಡು, ಆನಂದ್ಕುಮಾರ್ ಹಾಜರಿದ್ದರು. ಕೇಂದ್ರದ ನಿರ್ದೇಶಕಿ ಆರ್.ಶರಣಮ್ಮ ಸ್ವಾಗತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.