ಮೈಸೂರು: ಬೆಂಗಳೂರು ದಂಡು ನಿಲ್ದಾಣದಲ್ಲಿ ರಸ್ತೆ ಮೇಲ್ಸೇತುವೆ ಹಾಗೂ ಏರ್ ಕನ್ಕೋರ್ಸ್ (ಭಾಗ–2) ಕಾಮಗಾರಿ ಕಾರಣದಿಂದಾಗಿ ಕೆಲವು ರೈಲುಗಳ ಸಂಚಾರದಲ್ಲಿ ಮಾರ್ಗ ಬದಲಾವಣೆ ಮತ್ತು ವಿಳಂಬ ಆಗಲಿದೆ.

ರೈಲುಗಳ ಮಾರ್ಗ ಬದಲಾವಣೆ: ರೈಲು ಸಂಖ್ಯೆ 06269 ಮೈಸೂರು–ಎಸ್ಎಂವಿಟಿ ಬೆಂಗಳೂರು ದೈನಂದಿನ ಪ್ಯಾಸೆಂಜರ್ ಸ್ಪೆಷಲ್ ಫೆ.17ರಿಂದ ಮಾರ್ಚ್ 16ರವರೆಗೆ ತನ್ನ ನಿಯಮಿತ ಮಾರ್ಗವಾದ ಬೆಂಗಳೂರು ದಂಡು ನಿಲ್ದಾಣದಲ್ಲಿ ನಿಲುಗಡೆ ನೀಡದೇ, ಕೆಎಸ್ಆರ್ ಬೆಂಗಳೂರು–ಯಶವಂತಪುರ– ಬಾನಸವಾಡಿ –ಎಸ್ಎಂವಿಟಿ ಬೆಂಗಳೂರು ಮಾರ್ಗದ ಮೂಲಕ ಸಂಚರಿಸಲಿದೆ.

ಅದೇ ರೀತಿ, ರೈಲು ಸಂಖ್ಯೆ 06270 ಎಸ್ಎಂವಿಟಿ ಬೆಂಗಳೂರು–ಮೈಸೂರು ದೈನಂದಿನ ಪ್ಯಾಸೆಂಜರ್ ಸ್ಪೆಷಲ್ ಫೆ.17ರಿಂದ ಮಾರ್ಚ್ 16ರವರೆಗೆ ತನ್ನ ನಿಯಮಿತ ಮಾರ್ಗವಾದ ಬೆಂಗಳೂರು ದಂಡು ನಿಲ್ದಾಣದಲ್ಲಿ ನಿಲುಗಡೆ ನೀಡದೇ, ಎಸ್ಎಂವಿಟಿ ಬೆಂಗಳೂರು– ಬಾನಸವಾಡಿ –ಯಶವಂತಪುರ–ಕೆಎಸ್ಆರ್ ಬೆಂಗಳೂರು ಮಾರ್ಗದ ಮೂಲಕ ಸಂಚರಿಸಲಿದೆ.

ರೈಲು ಸಂಖ್ಯೆ 16021 ಎಂ.ಜಿ.ಆರ್ ಚೆನ್ನೈ ಸೆಂಟ್ರಲ್–ಅಶೋಕಪುರಂ ದೈನಂದಿನ ಎಕ್ಸ್ಪ್ರೆಸ್ ಫೆ.17ರಿಂದ ಫೆ.19ರವರೆಗೆ ಹಾಗೂ ಮಾರ್ಚ್ 3 ಮತ್ತು 4ರಂದು ಮಾರ್ಗಮಧ್ಯೆ 30 ನಿಮಿಷಗಳ ಕಾಲ ವಿಳಂಬವಾಗಲಿದೆ ಎಂದು ನೈರುತ್ಯ ರೈಲ್ವೆ ಮೈಸೂರು ವಿಭಾಗದ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಹಾಗೂ ಸಾರ್ವಜನಿಕ ಸಂಪರ್ಕ ಅಧಿಕಾರಿ ಗಿರೀಶ ಧರ್ಮರಾಜ ಕಲಗೊಂಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.