ನಾಪೋಕ್ಲು: ‘ನಾಪೋಕ್ಲು ಲಯನ್ಸ್ ಕ್ಲಬ್ ವತಿಯಿಂದ ಜ. 4 ರಂದು ಲಯನ್ಸ್ ವಲಯ ಸಮ್ಮೇಳನವು ‘ಬೆಸುಗೆ’ ಶೀರ್ಷಿಕೆಯಲ್ಲಿ ಕೊಡವ ಸಮಾಜದಲ್ಲಿ ಆಯೋಜಿಸಲಾಗಿದೆ’ ಎಂದು ಕೊಡಗು ಮತ್ತು ಪಿರಿಯಾಪಟ್ಟಣ ವಲಯಕ್ಕೆ ಒಳಪಟ್ಟ 12 ಲಯನ್ಸ್ ಕ್ಲಬ್ಗಳ ಪ್ರಾಂತೀಯ ಅಧ್ಯಕ್ಷ ಲಯನ್ ಡಾ. ಕೋಟೆರ ಪಂಚಮ್ ತಿಮ್ಮಯ್ಯ ಹೇಳಿದರು.

ಕೊಡವ ಸಮಾಜದಲ್ಲಿ ಬುಧವಾರ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಲಯನ್ಸ್ ಕ್ಲಬ್ ಕೊಡಗು ನಾಲ್ಕು ರೆವಿನ್ಯೂ ಜಿಲ್ಲೆಗಳನ್ನು ಹೊಂದಿದ್ದು ಇದರಲ್ಲಿ ಜಿಲ್ಲೆಯ ಲಯನ್ಸ್ ಕ್ಲಬ್ಗಳು ಭಾಗವಹಿಸುವುದರೊಂದಿಗೆ ಸಂಜೆ 4 ಗಂಟೆಯಿಂದ 9 ಗಂಟೆವರೆಗೆ ಅದ್ದೂರಿ ಸಮ್ಮೇಳನವನ್ನು ಆಯೋಜಿಸಲಾಗಿದೆ. ಈ ಸಂದರ್ಭ 12 ಕ್ಲಬ್ ವೈವಿಧ್ಯಮಯ ಕಾರ್ಯಕ್ರಮ ಆಯೋಜಿಸಲಾಗಿದೆ. ಸಮ್ಮೇಳನದಲ್ಲಿ ಲಿಯೋ ಕ್ಲಬ್ ನಾಪೋಕ್ಲು, ಲಯನ್ಸ್ ವಲಯ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಲಿದ್ದಾರೆ. ಲಯನ್ಸ್ ಜಿಲ್ಲಾ ಗವರ್ನರ್ ಅಭಿನಂದನ್ ಎ . ಶೆಟ್ಟಿ ಮುಖ್ಯ ಭಾಷಣಕಾರರಾಗಿರುವರು. ಕಾರ್ಯಕ್ರಮದಲ್ಲಿ 12 ಕ್ಲಬ್ ಗಳ ಸೇವೆಯನ್ನು ಪರಿಗಣಿಸಿ ಪುರಸ್ಕರಿಸಲಾಗುವುದು’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಮ್ಮೇಳನ ಅಧ್ಯಕ್ಷೆ ಕೇಟೋಳಿರ ರತ್ನ ಚರ್ಮಣ್ಣ, ಕಾರ್ಯದರ್ಶಿ ಮುಕ್ಕಾಟಿರ ವಿನಯ್, ಖಜಾಂಚಿ ಎಳ್ತಂಡ ಬಿ. ಬೋಪಣ್ಣ, ನಾಪೋಕು ಲಯನ್ಸ್ ಕ್ಲಬ್ ಅಧ್ಯಕ್ಷ ಮಾದೇಯಂಡ .ಬಿ. ಕುಟ್ಟಪ್ಪ, ಕಾರ್ಯದರ್ಶಿ ಅಪ್ಪುಮಣಿಯ೦ಡ ಬನ್ಸಿ ಭೀಮಯ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.