ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಟ್ಟದಪುರ | ನಿರಂತರ ಮಳೆ: ತಂಬಾಕು ಹಾನಿ

Published 25 ಮೇ 2024, 4:37 IST
Last Updated 25 ಮೇ 2024, 4:37 IST
ಅಕ್ಷರ ಗಾತ್ರ

ಬೆಟ್ಟದಪುರ: ಸಮೀಪದ ಹಲಗನಹಳ್ಳಿಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ರೈತ ಅತ್ತರ್ ಮತಿನ್ ಅವರ ಜಮೀನಿನಲ್ಲಿ ನಾಟಿ ಮಾಡಿದ್ದ ತಂಬಾಕು ನಾಶವಾಗಿದೆ.

ತಮ್ಮ ನಾಲ್ಕು ಎಕರೆ ಜಮೀನಿನಲ್ಲಿ ಕಳೆದ 15 ದಿನಗಳ ಹಿಂದೆ ಸಸಿ ನಾಟಿ ಮಾಡಿ, ಬೆಳೆಗೆ ಗೊಬ್ಬರ ಹಾಕಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದರು. ಆದರೆ ನಿರಂತರವಾಗಿ ಬೀಳುತ್ತಿರುವ ಮಳೆಯಿಂದ ನಾಟಿ ಮಾಡಿದ ತಂಬಾಕು ಹಾನಿಯಾಗಿದೆ. ಬ್ಯಾಂಕಿನಿಂದ ಸಾಲ ಪಡೆದು ಬೇಸಾಯ ಮಾಡಲಾಗಿದ್ದು, ಅತಿಯಾದ ಮಳೆಯಿಂದ ಬೆಳೆಯು ಕೈಗೆ ಸಿಗದಂತಾಗಿದೆ. ಕೂಡಲೇ ತಂಬಾಕು ಮಂಡಳಿ ನಿರ್ದೇಶಕರು ಹಾಗೂ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಸೂಕ್ತ ಪರಿಹಾರ ಒದಗಿಸುವಂತೆ’ ರೈತ ಅತ್ತರ್ ಮತೀನ್ ಮನವಿ ಮಾಡಿದ್ದರು.

ತಂಬಾಕು ನಾಟಿ ನಾಶವಾದ ಸ್ಥಳಕ್ಕೆ ತಂಬಾಕು ಮಂಡಳಿ ಅಧಿಕಾರಿಗಳಾದ ದರ್ಶನ್ ಮತ್ತು ಅಭಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT