ಮೈಸೂರು: ‘ಪತ್ರಿಕೋದ್ಯಮಿ ದಿವಂಗತ ಬಿ.ಎಸ್. ನಾಗರಾಜರಾವ್ ಅವರು ಶಿಕ್ಷಣ ಹಾಗೂ ಸಹಕಾರಿ ಕ್ಷೇತ್ರಕ್ಕೆ ಅಪಾರ ಸೇವೆ ಸಲ್ಲಿಸಿದ್ದಾರೆ’ ಎಂದು ಜಿಲ್ಲಾ ಸಹಕಾರಿ ಒಕ್ಕೂಟದ ಅಧ್ಯಕ್ಷ ಅಧ್ಯಕ್ಷ ಎಚ್.ವಿ. ರಾಜೀವ್ ಸ್ಮರಿಸಿದರು.

ಇಲ್ಲಿನ ಸಪ್ತರ್ಷಿ ಸೌಹಾರ್ದ ಸಹಕಾರಿ ಸಂಘ ನಿಯಮಿತವು ಕೃಷ್ಣಮೂರ್ತಿಪುರಂ ಶಾರದವಿಲಾಸ ಶತಮಾನೋತ್ಸವ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಮುಖ್ಯಪ್ರವರ್ತಕ ಹಾಗೂ ಸಂಸ್ಥಾಪಕ ಅಧ್ಯಕ್ಷ ಬಿ.ಎಸ್. ನಾಗರಾಜರಾವ್ ಅವರ ಪುತ್ಥಳಿ ಅನಾವರಣ, ಮೊಬೈಲ್ ತಂತ್ರಾಂಶ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಸಪ್ತರ್ಷಿ ಸೌಹಾರ್ದ ಸಹಕಾರಿ ಸಂಘ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಆಡಳಿತ ಮಂಡಳಿಯ ಕಾರಣದಿಂದ ಠೇವಣಿ ಹೆಚ್ಚಿಸಿಕೊಂಡಿದೆ. ಕೋವಿಡ್ ಸಂದರ್ಭದಲ್ಲಿ ವಿಶೇಷ ಸಾಲ ನೀಡಿದೆ. ಹೊಸ ಯೋಜನೆಗಳ ಮೂಲಕ ಸದಸ್ಯರ ವಿಶ್ವಾಸ ಗಳಿಸಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪುತ್ಥಳಿ ಅನಾವರಣಗೊಳಿಸಿದ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಮೊಬೈಲ್ ತಂತ್ರಾಂಶ ಬಿಡುಗಡೆ ಮಾಡಿದ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ಪ್ರಾಂತೀಯ ಅಧಿಕಾರಿ ಗುರುಪ್ರಸಾದ್ ಬಂಗೇರ, ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎಂ.ಎಸ್. ಚಂದ್ರಶೇಖರ್, ಸಂಘದ ಮಾಜಿ ನಿರ್ದೇಶಕ ಟಿ.ವಿ. ಸತ್ಯನಾರಾಯಣ ಮಾತನಾಡಿದರು.

ಉಪಾಧ್ಯಕ್ಷೆ ಎಸ್. ಶ್ಯಾಮಲಾ, ಸಿಇಒ ಎಚ್.ಎ. ಪುರುಷೋತ್ತಮ, ನಿರ್ದೇಶಕರಾದ ಬಸವಣ್ಣ, ಎಂ.ಎಸ್. ಗುರುರಾಜ್, ಟಿ.ಎಸ್. ಶೇಷಾದ್ರಿ, ಎಚ್.ಬಿ. ಸುಬ್ಬಣ್ಣ, ಎಸ್. ಲಕ್ಷ್ಮೀದೇವಿ, ಎಸ್. ರಾಜಕುಮಾರ, ಎ.ಎಸ್. ರಂಗನಾಥನ್, ಮುತ್ತುರಾಜ್, ಜಿ. ಕೀರ್ತಿಪ್ರಕಾಶ್, ಎಂ. ಹನುಮಂತಯ್ಯ, ಎನ್. ನಾಗಚಂದ್ರ, ಬಿ.ಕೆ. ಶೇಷಾದ್ರಿ, ಕಾನೂನು ಸಲಹೆಗಾರ ಮುದ್ದುರಾಜ್, ಕುಮಾರಸ್ವಾಮಿ, ಬಿ.ಎನ್. ಚಂದ್ರಶೇಖರ್, ಗೌತಮ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.