ಮೈಸೂರು: ಜಗತ್ ಪ್ರಸಿದ್ಧವಾದ ಕುತುಬ್ ಮಿನಾರ್, ಕೆಂಪು ಕೋಟೆ ಮತ್ತು ಲೋಟಸ್ ಕಟ್ಟಡಗಳನ್ನು ನೋಡಲು ಜನ ದೆಹಲಿಗೆ ಹೋಗಬೇಕಿಲ್ಲ!

ಇವುಗಳ ಪ್ರತಿಕೃತಿಯನ್ನು ಇಲ್ಲಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಗೃಹ ಶೋಭೆ ಅಂತರರಾಷ್ಟ್ರೀಯ ಲಿವಿಂಗ್ ಸ್ಟೈಲ್ ಮತ್ತು ಕೇಕ್ ಶೋ ಮೇಳದಲ್ಲಿ ನೋಡಬಹುದು. ಡಾಲ್ಫಿನ್ ಬೇಕರ್ಸ್ನವರು ಕೇಕ್ನಿಂದಲೇ ತಯಾರಿಸಿದ್ದು, ಗ್ರಾಹಕರ ಗಮನ ಸೆಳೆಯುತ್ತಿವೆ.

ಕ್ರಿಸ್ಮಸ್ ಮತ್ತು ಹೊಸ ವರ್ಷ ಆಚರಣೆ ಸಮೀಪದಲ್ಲಿರುವುದರಿಂದ ಕೇಕ್ನಿಂದ ವಿನೂತನ ಕಲಾಕೃತಿಗಳನ್ನು ರಚಿಸಿ ಗ್ರಾಹಕರ ಸಂಭ್ರಮವನ್ನು ಇಮ್ಮಡಿಗೊಳಿಸಲಾಗುತ್ತಿದೆ. ₹6.5 ಲಕ್ಷ ಮೌಲ್ಯದ ಒಟ್ಟು 13 ವಿಧದ ಕೇಕ್ ಮಾದರಿಗಳನ್ನು ಪ್ರದರ್ಶಿಸಲಾಗಿದೆ.

ಡಾಲ್ಪಿನ್ ಬೇಕರ್ಸ್ನ ಸಿಇಒ ಮೊಹಮದ್ ನಿಝಾರ್ ಮಾತನಾಡಿ, ‘ಇದು ನಮ್ಮ ಬೇಕರ್ಸ್ನ 13ನೇ ವಾರ್ಷಿಕ ಪ್ರದರ್ಶನವಾಗಿದ್ದು, ಪ್ಲಮ್ ಕೇಕ್, ಹಣ್ಣಿನ ಕೇಕ್, ಬನಾನಾ ಕೇಕ್, ತುಪ್ಪದ ಕೇಕ್, ಐರಿಶ್ ಕೇಕ್, ವಾಲ್ನಟ್ ಕೇಕ್ ಮತ್ತು ಬ್ರೌನಿಗಳಂತಹ ಸೀಸನ್ ವಿಶೇಷ ಕೇಕ್ಗಳನ್ನು ಸಂಸ್ಥೆಯಿಂದ ತಯಾರಿಸಲಾಗಿದೆ. ಪ್ರದರ್ಶನದಲ್ಲಿ ಕೇಕ್ಗಳ ಬುಕ್ಕಿಂಗ್ಗೂ ಅವಕಾಶವಿದ್ದು, ಗ್ರಾಹಕರ ಅನುಕೂಲಕ್ಕಾಗಿ ಉಚಿತ ಹೋಮ್ ಡೆಲಿವರಿಯನ್ನೂ ಏರ್ಪಡಿಸಲಾಗಿದೆ’ ಎಂದು ಮಾಹಿತಿ ನೀಡಿದರು.

100ಕ್ಕೂ ಹೆಚ್ಚು ಮಳಿಗೆ:

ಗೃಹಶೋಭೆಯಲ್ಲಿ ರಿಯಾಯಿತಿ ಮತ್ತು ಉಡುಗೊರೆಗಳ ಜೊತೆಗೆ ಎಲೆಕ್ಟ್ರಾನಿಕ್ಸ್ ಉಪಕರಣಗಳು, ಆಟೊಮೊಬೈಲ್ಸ್, ಪೀಠೋಪಕರಣ, ಪೇಂಟಿಂಗ್, ಕಾರ್ಪೆಟ್, ಮಾಡ್ಯುಲರ್ ಕಿಚನ್ನಂಥ ಬ್ರ್ಯಾಂಡ್ ಉತ್ಪನ್ನಗಳನ್ನು ಪ್ರದರ್ಶಿಸುವ 100ಕ್ಕೂ ಹೆಚ್ಚು ಮಳಿಗೆಗಳಿವೆ. ಪ್ರತ್ಯೇಕ ಆಹಾರ ಮಳಿಗೆಗಳನ್ನು ಹಾಕಲಾಗಿದೆ. ಮೇಳವು ಡಿ.25ರವರೆಗೆ ನಡೆಯಲಿದ್ದು,
ಬೆಳಿಗ್ಗೆ 11ರಿಂದ ರಾತ್ರಿ 9ರವರೆಗೆ ಭೇಟಿಗೆ ಲಭ್ಯವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.