ಬುಧವಾರ, 30 ಜುಲೈ 2025
×
ADVERTISEMENT
ADVERTISEMENT

ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ | ಜನಸಂದಣಿ ನಿರ್ವಹಣೆ, ಪೂಜೆಗೆ ತಯಾರಿ: ಡಿ.ಸಿ

ಆಷಾಢ: ಚಾಮುಂಡಿ ಬೆಟ್ಟದಲ್ಲಿ ಅಗತ್ಯ ವ್ಯವಸ್ಥೆ– ಡಿ.ಸಿ ಲಕ್ಷ್ಮೀಕಾಂತ ರೆಡ್ಡಿ ಮಾಹಿತಿ
Published : 26 ಜೂನ್ 2025, 4:31 IST
Last Updated : 26 ಜೂನ್ 2025, 4:31 IST
ಫಾಲೋ ಮಾಡಿ
Comments
ಸಾವಿರ ಮೆಟ್ಟಿಲು ಹತ್ತಿ ಬರುವ ಭಕ್ತರಿಗೆ ನೇರ ದರ್ಶನದ ಅವಕಾಶ ಕಲ್ಪಿಸಲು ಪ್ರತ್ಯೇಕ ಸರದಿ ಸಾಲನ್ನು ಮಾಡಲಾಗಿದೆ
ಜಿ. ಲಕ್ಷ್ಮೀಕಾಂತರೆಡ್ಡಿ ಜಿಲ್ಲಾಧಿಕಾರಿ
ಆಷಾಢದ ನಾಲ್ಕು ಶುಕ್ರವಾರವೂ ಚಾಮುಂಡೇಶ್ವರಿ ಮೂರ್ತಿಗೆ ಲಕ್ಷ್ಮೀ ಅಲಂಕಾರ ಮಾಡಲಾಗುವುದು ವಿಶೇಷ ಪೂಜೆ ನೆರವೇರಿಸಲಾಗುವುದು
ಶಶಿಶೇಖರ್ ದೀಕ್ಷಿತ್, ಪ್ರಧಾನ ಅರ್ಚಕ ಚಾಮುಂಡೇಶ್ವರಿ ದೇವಸ್ಥಾನ
‘ರೀಲ್ಸ್‌’ ಮಾಡಿದರೆ ಫೋನ್‌ ವಶ!
ದೇವಾಲಯದಲ್ಲಿ ಉತ್ಸವಮೂರ್ತಿ ಸಮೀಪ ಗರ್ಭಗುಡಿ ಮತ್ತು ಪ್ರಾಂಗಣದಲ್ಲಿ ಮೊಬೈಲ್ ಫೋನ್‌ ಹಾಗೂ ಕ್ಯಾಮೆರಾದಲ್ಲಿ ಫೋಟೊ ತೆಗೆಯುವುದು ರೀಲ್ಸ್‌ ಮಾಡುವುದನ್ನು ನಿಷೇಧಿಸಲಾಗಿದೆ. ಇದನ್ನು ಉಲ್ಲಂಘಿಸಿದಲ್ಲಿ ಮೊಬೈಲ್ ಫೋನ್‌ ಮತ್ತು ಕ್ಯಾಮೆರಾಗಳನ್ನು ಶಾಶ್ವತವಾಗಿ ವಶಕ್ಕೆ ಪಡೆಯಲಾಗುವುದು. ಪ್ರಾಧಿಕಾರದಿಂದಲೇ ಉತ್ಸವ ಮೂರ್ತಿಯ ಫೋಟೊ ಹಾಗೂ ವಿಡಿಯೊ ಚಿತ್ರೀಕರಿಸಿ ಸಾರ್ವಜನಿಕವಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಲಕ್ಷ್ಮೀಕಾಂತರೆಡ್ಡಿ ತಿಳಿಸಿದರು.
ಪಾಸ್ ಇಲ್ಲ ಶಿಫಾರಸು ನಡೆಯಲ್ಲ
‘ಆಷಾಢ ಶುಕ್ರವಾರದಂದು ತಾಯಿಯ ದರ್ಶನ ಪಡೆಯಲು ಯಾವುದೇ ರೀತಿಯ ಪಾಸ್ ವ್ಯವಸ್ಥೆ ಇರುವುದಿಲ್ಲ. ಧರ್ಮದರ್ಶನ ₹ 300 ಹಾಗೂ ₹2ಸಾವಿರ ಟಿಕೆಟ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಯಾವುದೇ ಶಿಫಾರಸು ಪತ್ರಗಳನ್ನೂ ಪರಿಗಣಿಸುವುದಿಲ್ಲ. ಶಿಷ್ಟಾಚಾರದ ವ್ಯಾಪ್ತಿಗೆ ಬರುವವರಿಗೆ ಮಾತ್ರ ಸರ್ಕಾರಿ ವಾಹನದಲ್ಲಿ ಬರಲು ಅವಕಾಶವಿದೆ. ಬೆಟ್ಟದ ನಿವಾಸಿಗಳು ಗುರುತಿನಪತ್ರ ತೋರಿಸಿದರೆ ವಾಹನಕ್ಕೆ ಅವಕಾಶ ಕೊಡಲಾಗುವುದು’ ಎಂದು ಲಕ್ಷ್ಮೀಕಾಂತರೆಡ್ಡಿ ಸ್ಪಷ್ಟಪಡಿಸಿದರು. ‘ಬೆಟ್ಟದಲ್ಲಿ ದರ್ಶನದ ಟಿಕೆಟ್‌ಗಳನ್ನು ನೀಡುವುದಿಲ್ಲ. ಲಲಿತಮಹಲ್ ಮೈದಾನದ ಬಳಿ ಹಾಗೂ ನಗರ ಬಸ್‌ನಿಲ್ದಾಣದಲ್ಲೇ ಖರೀದಿಸಿ ನಿಗದಿಪಡಿಸಿದ ಬಸ್‌ಗಳಲ್ಲಿ ಪ್ರಯಾಣಿಸಬೇಕು. ಬೆಟ್ಟದಲ್ಲಿ ಪಾದರಕ್ಷೆಗಳನ್ನು ಬಿಡಲು ಸ್ಟ್ಯಾಂಡ್‌ ವ್ಯವಸ್ಥೆ ಇರುವುದಿಲ್ಲ. ಹೀಗಾಗಿ ವಾಹನದಲ್ಲೇ ಬಿಟ್ಟು ಬರಬೇಕು’ ಎಂದರು.
ವಿಶೇಷ ಗಿಫ್ಟ್‌ ಪ್ಯಾಕ್ ಮಾರಾಟ
‘ಪ್ರಾಧಿಕಾರದಿಂದ ಈ ಬಾರಿ ವಿಶೇಷ ಗಿಫ್ಟ್‌ಬಾಕ್ಸ್‌ ಮಾರಾಟವಿರಲಿದೆ. ಚಾಮುಂಡೇಶ್ವರಿ ವಿಗ್ರಹ ಗಂಢಭೇರುಂಡ ವಿಗ್ರಹ ಅಂಬಾರಿ ಹೊತ್ತಿರುವ ಆನೆಯ ವಿಗ್ರಹ ಕುಂಕುಮ ಭರಣಿ ಕೈಗೆ ಕಟ್ಟುವ ದಾರ ಸೇರಿದಂತೆ ಶ್ರೀಚಕ್ರವಿರುವ ಮರದ ಬಾಕ್ಸ್‌ ಇದಾಗಿದೆ. ₹ 2ಸಾವಿರ ಟಿಕೆಟ್‌ ಒಂದು ದಿನಕ್ಕೆ ಮಾತ್ರವೇ ಅನ್ವಯ. ಅದನ್ನು ‍ಪಡೆದರಿಗೆ ಒಂದು ವಿಗ್ರಹ ಲಡ್ಡುಪ್ರಸಾದ 500 ಎಂ.ಎಲ್. ಕುಡಿಯುವ ನೀರಿನ ಬಾಟಲಿ ಒಳಗೊಂಡ ವಿಶೇಷ ಬ್ಯಾಗ್‌ಗಳನ್ನು ನೀಡಲಾಗುವುದು’ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ತಿಳಿಸಿದರು. ‘ವಿಐಪಿಗಳು ಬೆಳಿಗ್ಗೆ 5ರಿಂದ 10ವರೆಗೆ ಮಾತ್ರವೇ ದರ್ಶನಕ್ಕೆ ಬರಬೇಕು’ ಎಂದು ಕೋರಿದರು. ‘ಬೆಳಿಗ್ಗೆ 5ಕ್ಕೇ ಬಸ್‌ಗಳು ಹೊರಡಲಿವೆ. ಬೆಳಿಗ್ಗೆ 5.30ರಿಂದ ರಾತ್ರಿ 10.30ರವರೆಗೆ ದರ್ಶನಕ್ಕೆ ಅವಕಾಶ ಇರಲಿದೆ (ಮಂಗಳಾರತಿ ಸಮಯ ಹೊರತುಪಡಿಸಿ)’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT