ಮೈಸೂರು: ಅರಣ್ಯ ಇಲಾಖೆಯಲ್ಲಿ ಸಲ್ಲಿಸಿದ ಗಣನೀಯ ಸೇವೆಯನ್ನು ಗುರುತಿಸಿ ದಸರಾ ಆನೆ ‘ಅಭಿಮನ್ಯು’ವಿನ ಮಾವುತ ಜೆ.ಎಸ್.ವಸಂತ ಸಹಿತ ಮೈಸೂರು ವೃತ್ತ ವ್ಯಾಪ್ತಿಯ ನಾಲ್ವರು ಅಧಿಕಾರಿ ಹಾಗೂ ಸಿಬ್ಬಂದಿಗೆ 2022–23ನೇ ಸಾಲಿನ ಮುಖ್ಯಮಂತ್ರಿ ಪದಕ ದೊರೆತಿದೆ.
ಅರಣ್ಯ ಸಂರಕ್ಷಣೆ ವಿಭಾಗದಲ್ಲಿ ಉಪ ವಲಯ ಅರಣ್ಯಾಧಿಕಾರಿ ಎನ್.ಶ್ರೀನಿವಾಸ್ ಹಾಗೂ ಗಸ್ತು ಅರಣ್ಯಪಾಲಕ ಎ.ಎಂ.ಮಂಜುನಾಥ್. ವನ್ಯಜೀವಿ ಸಂರಕ್ಷಣೆ ವಿಭಾಗದಲ್ಲಿ ಉಪ ವಲಯ ಅರಣ್ಯಾಧಿಕಾರಿ ಎಸ್.ಎಂ.ಮಂಜು ನಾಥ್ ಹಾಗೂ ಜೆ.ಎಸ್.ವಸಂತ ಮುಖ್ಯಮಂತ್ರಿ ಪದಕ ಪಡೆದಿದ್ದಾರೆ.