ಮೈಸೂರು: ಇಲ್ಲಿನ ಚಾಮುಂಡಿಬೆಟ್ಟ ತಪ್ಪಲಿನಲ್ಲಿರುವ ಮೈಸೂರು ವಿಶ್ವವಿದ್ಯಾಲಯದ ಜಯಚಾಮರಾಜ ಒಡೆಯರ್ ಉನ್ನತ ಕಲಿಕಾ ಕೇಂದ್ರದ ಆವರಣದಲ್ಲಿ ನಿರ್ಮಾಣಗೊಳ್ಳುತ್ತಿರುವ ‘ವಿಶ್ವದ ಮೊಟ್ಟಮೊದಲ ಎಲ್ಇಡಿ ಬಾಗಿದ ಗುಮ್ಮಟ ತಾರಾಲಯ’ (ಹೈಟೆಕ್ ತಾರಾಲಯ) ಕಾಮಗಾರಿ ಶೇ 70ರಷ್ಟು ಪೂರ್ಣಗೊಂಡಿದೆ. ಈ ವರ್ಷದೊಳಗೆ ಸಿದ್ಧಗೊಳಿಸುವ ಉದ್ದೇಶವನ್ನು ಹೊಂದಲಾಗಿದೆ.

ಭಾರತೀಯ ಖಗೋಳ ಭೌತವಿಜ್ಞಾನ ಸಂಸ್ಥೆ (ಐಐಎ) ಹಾಗೂ ಮೈಸೂರಿನ ‘ಕಾಸ್ಮಾಲಜಿ’ ಶಿಕ್ಷಣ ಮತ್ತು ತರಬೇತಿ ಕೇಂದ್ರ ನಿರ್ಮಾಣಗೊಳ್ಳುತ್ತಿರುವ ಈ ತಾರಾಲಯದಲ್ಲಿ, ಖಗೋಳ ವಿಜ್ಞಾನದ ಬಗ್ಗೆ ಹೆಚ್ಚಿನ ಜಾಗೃತಿ ಹಾಗೂ ಪ್ರಚಾರದ ಉದ್ದೇಶವನ್ನು ಹೊಂದಲಾಗಿದೆ.

ತಾರಾಲಯದ ಕಾರ್ಯನಿರ್ವಹಣೆಗಾಗಿ ತಂತ್ರಜ್ಞಾನದ ವಿಷಯದಲ್ಲಿ ಜಪಾನ್ ಹಾಗೂ ಫ್ರಾನ್ಸ್ನ ಸಂಸ್ಥೆಗಳಿಂದ ತಾಂತ್ರಿಕ ನೆರವು ಪಡೆಯಲಾಗುತ್ತಿದೆ. ‘8ಕೆ ರೆಸಲ್ಯೂಶನ್’ ಹೊಂದಿರುವ ಅತ್ಯಾಧುನಿಕ 15-ಮೀಟರ್ ಎಲ್ಇಡಿ ಗುಮ್ಮಟದ ಈ ತಾರಾಲಯವು, ವಿಶ್ವದ ಮೊದಲ ಗುಮ್ಮಟ ತಾರಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದ್ದು, ಕರ್ನಾಟಕ ಹಾಗೂ ಮೈಸೂರಿಗೆ ಹೆಮ್ಮೆಯ ಗರಿ ಮೂಡಿಸಲಿದೆ. ಈ ಯೋಜನೆ ಅನುಷ್ಠಾನಕ್ಕಾಗಿ ಒಟ್ಟು ₹ 81 ಕೋಟಿ ವಿನಿಯೋಗಿಸಲಾಗುತ್ತಿದ್ದು, ರಾಜ್ಯಸಭಾ ಸದಸ್ಯರಾಗಿರುವ ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಸಂಸದರ ನಿಧಿಯಿಂದ₹ 5 ಕೋಟಿ ಒದಗಿಸಿದ್ದಾರೆ.

ಆಸಕ್ತಿ ಬೆಳೆಸಲು: ನಿರೀಕ್ಷೆಯಂತೆಯೇ ಎಲ್ಲವೂ ನಡೆದಲ್ಲಿ, ಇದೇ ವರ್ಷದಲ್ಲಿ ಕಾಮಗಾರಿ ಮುಗಿಯಲಿದೆ. ಬಳಿಕ, ಈ ಭಾಗದ ಶಾಲಾ–ಕಾಲೇಜುಗಳ ಮಕ್ಕಳು, ಆಸಕ್ತರು ಹಾಗೂ ಪ್ರವಾಸಿಗರು ಚಾಮುಂಡಿಬೆಟ್ಟದ ತಪ್ಪಲಿನಿಂದ ಇಡೀ ತಾರಾಮಂಡಲವನ್ನೇ ಕಣ್ತುಂಬಿಕೊಳ್ಳುವ ಅವಕಾಶ ಸಿಗಲಿದೆ. ಧೂಮಕೇತುಗಳು, ಗ್ರಹಣದಂತಹ ಖಗೋಳದಲ್ಲಿನ ಕೌತುಕಗಳನ್ನು ಅತ್ಯಾಧುನಿಕ ಟೆಲಿಸ್ಕೋಪ್ಗಳ ಮೂಲಕ ವೀಕ್ಷಿಸಲು ಇಲ್ಲಿ ಅವಕಾಶ ದೊರೆಯಲಿದೆ. ಭಾರತೀಯ ಖಗೋಳ ಭೌತವಿಜ್ಞಾನ ಸಂಸ್ಥೆಯು ನಿರ್ಮಿಸುತ್ತಿರುವ ತಾರಾಲಯವಿದು. ಜೊತೆಗೆ ಕಾಸ್ಮೊಲಜಿ ಶಿಕ್ಷಣ ಮತ್ತು ಸಂಶೋಧನಾ ತರಬೇತಿ ಕೇಂದ್ರ (ಕಾಸ್ಮಸ್)ದ ಕಟ್ಟಡವನ್ನೂ ನಿರ್ಮಿಸಲಾಗುತ್ತಿದೆ. ಆಕಾಶ, ನಕ್ಷತ್ರ ವೀಕ್ಷಣೆ ಮೊದಲಾದ ಕಾರ್ಯಕ್ರಮಗಳು ನಿಯಮಿತವಾಗಿ ನಡೆಯಲಿವೆ.

ನಿರ್ಮಾಣಕ್ಕೆ 2022ರ ಮಾರ್ಚ್ನಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಈಗ, ಕಾಮಗಾರಿ ಗಮನಾರ್ಹ ಪ್ರಗತಿ ಕಂಡಿದೆ.

ಮೈಸೂರು ವಿವಿ ಜೊತೆ ಒಪ್ಪಂದ: ರಾಜ್ಯದ ಯುವಜನರಲ್ಲಿ ಬಾಹ್ಯಾಕಾಶ ಮತ್ತು ಖಗೋಳವಿಜ್ಞಾನದ ಬಗ್ಗೆ ಆಸಕ್ತಿ ಬೆಳೆಸುವ ಉದ್ದೇಶದಿಂದ ‘ಡಿಜಿಸ್ಟಾರ್ 7 ತಾರಾಲಯ’ವನ್ನು ಸ್ಥಾಪಿಸಲಾಗುತ್ತಿದೆ. ಎಲ್ಇಡಿ ಗುಮ್ಮಟವನ್ನು ಕೊನಿಕಾ-ಮಿನೋಲ್ಟಾ (ಜಪಾನ್), ಆರ್ಎಸ್ಎ-ಕಾಸ್ಮೊಸ್ (ಫ್ರಾನ್ಸ್) ಮತ್ತು ಮೆಸರ್ಸ್ ಆರ್ಬಿಟ್-ಅನಿಮೇಟ್ (ಇಂಡಿಯಾ) ಕನ್ಸೋರ್ಟಿಯಂ ಅಭಿವೃದ್ಧಿಪಡಿಸುತ್ತಿವೆ. ಎಲ್ಇಡಿ ಡೋಮ್ನ ಅಭಿವೃದ್ಧಿ ಮತ್ತು ಸಿವಿಲ್ ನಿರ್ಮಾಣ ಪ್ರಗತಿಯಲ್ಲಿದೆ.

ನಿರ್ಮಾಣ ಮತ್ತು ಕಾರ್ಯಾಚರಣೆಗಾಗಿ ಮೈಸೂರು ವಿಶ್ವವಿದ್ಯಾಲಯದೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಐಐಎ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ಕಾಸ್ಮೋಸ್ ಶಿಕ್ಷಣ ಮತ್ತು ಸಂಶೋಧನಾ-ತರಬೇತಿ ಕೇಂದ್ರ ಯೋಜನೆಯ ಅನುಷ್ಠಾನವನ್ನು ಸಚಿವಾಲಯದ ಕಾರ್ಯದರ್ಶಿ ಮಾರ್ಗದರ್ಶನದ ಸಲಹಾ ಮಂಡಳಿಯ ಅಡಿಯಲ್ಲಿ ಕೈಗೊಳ್ಳಲಾಗುತ್ತಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಅನುದಾನ ಒದಗಿಸಿದ್ದು, ಸುಧಾರಿತ ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನು ಇಲ್ಲಿ ಬಳಸಲಾಗುತ್ತಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

₹ 81 ಕೋಟಿ ಮೊತ್ತದ ಯೋಜನೆ ₹ 5 ಕೋಟಿ ನೀಡಿರುವ ನಿರ್ಮಲಾ ಸೀತಾರಾಮನ್ 2022ರ ಮಾರ್ಚ್ನಲ್ಲಿ ನೆರವೇರಿದ್ದ ಶಂಕುಸ್ಥಾಪನೆ

ಮೈಸೂರಿನಲ್ಲಿ ನಿರ್ಮಾಣಗೊಳ್ಳುತ್ತಿರುವುದು ವಿಶ್ವದರ್ಜೆಯ ಉತ್ಕೃಷ್ಟಮಟ್ಟದ ತಾರಾಲಯ ಎನಿಸಲಿದೆ. ಇದನ್ನು ವೀಕ್ಷಿಸಿದ್ದು ಕಟ್ಟಡದ ಕಾಮಗಾರಿ ಶೇ 70–80ರಷ್ಟು ಪೂರ್ಣಗೊಂಡಿದೆ
ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಂಸದ

ಖಗೋಳ ವಿಜ್ಞಾನದ ಅಧ್ಯಯನಕ್ಕೆ... ಮೈಸೂರು ಮತ್ತು ಸುತ್ತಮುತ್ತಲಿನ ಖಗೋಳವಿಜ್ಞಾನದ ಶ್ರೀಮಂತ ಪರಂಪರೆಯನ್ನು ವಿಶೇಷವಾಗಿ ಕನ್ನಡದಲ್ಲಿ ಹಸ್ತಪ್ರತಿಗಳು ಮತ್ತು ಉಪಕರಣಗಳನ್ನು ಅಧ್ಯಯನ ನಡೆಸುವುದು ‘ಕಾಸ್ಮೋಸ್’ ಯೋಜನೆಯ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ. ಇದಕ್ಕಾಗಿ ಮೈಸೂರು ವಿಶ್ವವಿದ್ಯಾಲಯದ ಪ್ರಾಚ್ಯವಿದ್ಯಾ ಸಂಶೋಧನಾಲಯದ (ಒಆರ್ಐ) ತಾಳೆಗರಿ ಮತ್ತು ಕಾಗದದ ಹಸ್ತಪ್ರತಿಗಳ ಸಮೃದ್ಧ ಸಂಗ್ರಹದೊಂದಿಗೆ ಕೆಲಸ ಮಾಡಲಾಗುತ್ತಿದೆ. ಆರ್ಯಭಟಿಯಂ (6ನೇ ಶತಮಾನ) ಸಿದ್ಧಾಂತ ಶಿರೋಮಣಿ ಹಾಗೂ ಹಳೆಯ ಗ್ರಂಥಗಳ ವ್ಯಾಖ್ಯಾನಗಳನ್ನು ಒಳಗೊಂಡಂತೆ ಖಗೋಳವಿಜ್ಞಾನಕ್ಕೆ ಸಂಬಂಧಿಸಿದ 100ಕ್ಕೂ ಹೆಚ್ಚು ಹಸ್ತಪ್ರತಿಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ ಕರಣಕುತೂಹಲ (12ನೇ ಶತಮಾನ) 19ನೇ ಶತಮಾನದಲ್ಲಿ ಮೈಸೂರು ಮಹಾರಾಜರ ಆಶ್ರಯದಲ್ಲಿ ನಡೆದ ಗ್ರಹಣಗಳ ಸಂಕಲನಗಳು ಪ್ರಮುಖವಾದವು. ಸಮಗ್ರ ವಿಶ್ಲೇಷಣೆಗಾಗಿ 50 ಹಸ್ತಪ್ರತಿಗಳನ್ನು ಆಯ್ಕೆ ಮಾಡಲಾಗಿದೆ. ಅಂತಹ ಒಂದು ದಾಖಲೆ 9ನೇ ಶತಮಾನದ ಮೂಲ ಗ್ರಂಥದ 17ನೇ ಶತಮಾನದ ಕನ್ನಡ ವ್ಯಾಖ್ಯಾನವಾದ ‘ಲಘು ಮಾನಸ ವ್ಯಾಖ್ಯ’ವನ್ನು ವಿವರವಾಗಿ ವಿಶ್ಲೇಷಿಸಲಾಗಿದೆ. ಈ ಸಂಶೋಧನೆಯನ್ನು ಖಗೋಳವಿಜ್ಞಾನ ಮತ್ತು ಖಗೋಳ ಭೌತವಿಜ್ಞಾನದ ಸಂಶೋಧನಾ ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ. ಇದೇ ರೀತಿ ಹಲವು ಭಾಷೆ ಮತ್ತು ಲಿಪಿಗಳಲ್ಲಿರುವ ಹಸ್ತಪ್ರತಿಗಳಲ್ಲಿರುವ ಗ್ರಹಣಗಳು ಗ್ರಹಗಳ ಸಂಯೋಗಗಳು ಮೊದಲಾದವುಗಳ ಕುರಿತು ಹೆಚ್ಚಿನ ಅಧ್ಯಯನಗಳನ್ನು ನಡೆಸಲಾಗುತ್ತಿದೆ.

ತರಬೇತಿಯೂ ದೊರೆಯಲಿದೆ ಈ ಅತ್ಯಾಧುನಿಕ ತಾರಾಲಯವು ‘ಪ್ಲೇಬ್ಯಾಕ್’ ಎಂಜಿನ್ ಹೊಂದಿರಲಿದೆ. ಅನನ್ಯ ನೈಜ ಸಮಯದ (ರಿಯಲ್ ಟೈಂ) ತಾರಾಲಯವು ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಶಿಕ್ಷಣ ಮತ್ತು ತರಬೇತಿಗೆ ಸಹಕಾರಿಯಾಗಲಿದೆ. ಖಗೋಳವಿಜ್ಞಾನದ ವ್ಯವಸ್ಥಿತ ದಾಖಲಾತಿಯೊಂದಿಗೆ ದತ್ತಾಂಶ ಕೋಡಿಂಗ್ ಪ್ರಾಯೋಗಿಕ ಅನುಭವವನ್ನು ಸಂಸ್ಕರಿಸುವ ಕುರಿತು ತರಬೇತಿಯನ್ನೂ ಇಲ್ಲಿ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ. ಅತ್ಯಾಧುನಿಕ ಸೌಲಭ್ಯಗಳು ಒಳಗೊಂಡ ಕಾಸ್ಮೋಸ್ ಕೇಂದ್ರವನ್ನು ಶಿಕ್ಷಣ ಮತ್ತು ತರಬೇತಿಯ ಉದ್ದೇಶಕ್ಕಾಗಿ ನಿರ್ಮಿಸಲಾಗುತ್ತಿದೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಜ್ಞಾನಾರ್ಜನೆ ಕಾರ್ಯಕ್ರಮಗಳನ್ನು ನಡೆಸುವ ಯೋಜನೆ ಇದೆ. ಕೇಂದ್ರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಪರಮಾಣುಶಕ್ತಿ ಇಲಾಖೆ ಮತ್ತು ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿಯಿಂದ ಹಣಕಾಸಿನ ಬೆಂಬಲವನ್ನು ಪಡೆದುಕೊಳ್ಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.