ಹುಣಸೂರು: ನಗರದ ಟ್ಯಾಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ದಸರಾ ಬೊಂಬೆ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗಿದೆ. ದಸರಾ ಹಬ್ಬದ ಸೊಗಡನ್ನು ಶಾಲೆಯಲ್ಲಿಯೂ ಗೋಚರಿಸುವಂತೆ ವಿಶೇಷವಾಗಿ ಗೊಂಬೆಗಳನ್ನು ಕೂರಿಸಲಾಗಿತ್ತು.

ಸತತ ಐದನೇ ವರ್ಷ ಸಂಭ್ರಮವಾಗಿ ನಡೆಯುತ್ತಿರುವ ಈ ಬೊಂಬೆ ಉತ್ಸವದಲ್ಲಿ ನೂರಾರು ಬಗೆಯ ಗೊಂಬೆಗಳ ಪ್ರದರ್ಶನ ಗಮನ ಸೆಳೆಯಿತು. ರಾಜ ರಾಣಿಯರ ಗೊಂಬೆಗಳು, ಹಿಂದೂ ಸಂಪ್ರದಾಯದ ಮದುವೆಯ ಗೊಂಬೆಗಳು, ರಾಮಾಯಣ ಮತ್ತು ಮಹಾಭಾರತದ ಕಥೆಗಳ ಗೊಂಬೆಗಳು, ವಿಷ್ಣುವಿನ ಅವತಾರ, ಸಂಗೀತ ಉಪಕರಣ, ನವ ದುರ್ಗೆರ ಗೊಂಬೆಗಳು, ಮಾತೃ ವಾಸ್ತಲ್ಯವನ್ನು ಪ್ರತಿಬಿಂಬಿಸುವ ಗೊಂಬೆಗಳು, ಗ್ರಾಮೀಣ ಸಂಪ್ರದಾಯದ ಗೊಂಬೆ, ಪಕ್ಷಿಗಳು, ದೇವತೆಗಳ ಗೊಂಬೆ ಹಾಗೂ ಮಕ್ಕಳಿಗೆ ಇಷ್ಟವಾಗುವ ಟಿ.ವಿ ಪಾತ್ರಗಳ ಗೊಂಬೆಗಳು ಪ್ರದರ್ಶನ ವೈಶಿಷ್ಟ್ಯವಾಗಿ ಹೊರಹೊಮ್ಮಿವೆ.

ವಿದ್ಯಾರ್ಥಿಗಳು ಬಣ್ಣದ ಉಡುಪನ್ನು ಧರಿಸಿ ಪೂಜಾ ಕಾರ್ಯಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಇಂದು ನವರಾತ್ರಿಯ ಐದನೇ ದಿನ ಸ್ಕಂದಾಮಾತೆಯ ಪೂಜೆ ನೆರವೇರಿಸಿ, ಸಾಲ ಆವರಣಕ್ಕೆ ಆಗಮಿಸಿದ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಪ್ರಸಾದ ವಿತರಣೆ ಮಾಡಲಾಯಿತು.

ಈ ರೀತಿಯ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಸಾಂಸ್ಕೃತಿಕ ಮನೋಭಾವ ಬೆಳೆಸುವ ಜೊತೆಗೆ ಮೈಸೂರು ದಸರಾ ಹಬ್ಬದ ವೈಶಿಷ್ಟ್ಯವನ್ನು ಪರಿಚಯಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತಿವೆ. ಟ್ಯಾಲೆಂಟ್ ಶಿಕ್ಷಣ ಸಂಸ್ಥೆಯ ಈ ಪ್ರಯತ್ನವನ್ನು ಪೋಷಕರು ಹಾಗೂ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.