ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾ ಆನೆ ಬಲರಾಮನ ಅಂತ್ಯ ಸಂಸ್ಕಾರ

Published 8 ಮೇ 2023, 14:32 IST
Last Updated 8 ಮೇ 2023, 14:32 IST
ಅಕ್ಷರ ಗಾತ್ರ

ಹುಣಸೂರು: ಮೈಸೂರು ದಸರಾ ಅಂಬಾರಿ ಹೊತ್ತಿದ್ದ ಹೆಗ್ಗಳಿಕೆಯ ‘ಬಲರಾಮ’ ಆನೆ (65) ಅಂತ್ಯ ಸಂಸ್ಕಾರ ಸೋಮವಾರ ನಾಗರಹೊಳೆ ಸಂರಕ್ಷಿತ ಅರಣ್ಯ ಪ್ರದೇಶ ಕಾರೆಕಟ್ಟೆಯಲ್ಲಿ ಅರಮನೆ ಪುರೋಹಿತರ ನೇತೃತ್ವದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ನಡೆಯಿತು.

ಕಳೆದ ಕೆಲವು ದಿನಗಳಿಂದ ಬಲರಾಮ ಆನೆ ಅನಾರೋಗ್ಯದಿಂದ ಬಳಲುತ್ತಿದ್ದು, ಇಲಾಖೆ ಪಶು ವೈದ್ಯಾಧಿಕಾರಿಗಳು ಚಿಕಿತ್ಸೆ ನೀಡಿದ್ದರು. ಚಿಕ್ಸಿತೆ ಸ್ಪಂದಿಸದೆ ಭಾನುವಾರ ಆನೆ ಮೃತಪಟ್ಟಿತು.

ಇಲಾಖೆಯ ಅಧಿಕಾರಿಗಳು ಮತ್ತು ಮೈಸೂರು ಅರಮನೆಯ ಪ್ರತಿನಿಧಿಯಾಗಿ ರಾಜಮನೆತನದ ಶೃತಿಕೀರ್ತಿ ದೇವಿ ಅರಸು ಇದ್ದರು ಎಂದು ನಾಗರಹೊಳೆ ಹುಲಿ ಯೋಜನಾ ನಿರ್ದೇಶಕ ಹರ್ಷ ಕುಮಾರ್ ಚಿಕ್ಕನರಗುಂದ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT