ಬುಧವಾರ, 6 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌತಮ್‌, ನವಮಿ ವೇಗದ ಓಟಗಾರರು

ರಾಜ್ಯ ಮಟ್ಟದ ಪ್ರತಿಭಾನ್ವೇಷಣ ದಸರಾ ಕ್ರೀಡಾಕೂಟ: ಆತಿಥೇಯ ಮೈಸೂರು ವಿಭಾಗ ಮೇಲುಗೈ
Published 12 ಅಕ್ಟೋಬರ್ 2023, 21:22 IST
Last Updated 12 ಅಕ್ಟೋಬರ್ 2023, 21:22 IST
ಅಕ್ಷರ ಗಾತ್ರ

ಮೈಸೂರು: ಬೆಂಗಳೂರು ಗ್ರಾಮಾಂತರ ವಿಭಾಗದ ಎಂ. ಗೌತಮ್‌ ಹಾಗೂ ಮೈಸೂರು ವಿಭಾಗದ ಎಚ್‌.ಆರ್. ನವಮಿ ಅವರು ಗುರುವಾರ ಇಲ್ಲಿ ಆರಂಭವಾದ ರಾಜ್ಯ ಮಟ್ಟದ ಸಿ.ಎಂ. ಕಪ್‌ ಪ್ರತಿಭಾನ್ವೇಷಣ ದಸರಾ ಕ್ರೀಡಾಕೂಟದಲ್ಲಿ ಕ್ರಮವಾಗಿ ವೇಗದ ಓಟಗಾರ–ಓಟಗಾರ್ತಿಯಾಗಿ ಹೊರಹೊಮ್ಮಿದರು.

ಪುರುಷರ 100 ಮೀಟರ್ಸ್ ಓಟವನ್ನು ಗೌತಮ್‌ 10.86 ಸೆಕೆಂಡುಗಳಲ್ಲಿ ಕ್ರಮಿಸಿ ಅಗ್ರಸ್ಥಾನ ತಮ್ಮದಾಗಿಸಿಕೊಂಡರು. ಮಹಿಳೆಯರ ವಿಭಾಗದಲ್ಲಿ ನವಮಿ 12.58 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಬಂಗಾರದ ಪದಕಕ್ಕೆ ಕೊರಳೊಡ್ಡಿದರು. ನವಮಿ ಅವರನ್ನು ಒಳಗೊಂಡ ಮೈಸೂರು ವಿಭಾಗದ ರಿಲೆ ತಂಡವು 4X100 ರಿಲೆನಲ್ಲಿಯೂ ಪ್ರಶಸ್ತಿ ಎತ್ತಿ ಹಿಡಿಯಿತು.

ಈಜು ವಿಭಾಗದಲ್ಲಿ ಬೆಂಗಳೂರು ನಗರ ವಿಭಾಗದ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ತೋರಿದರು. ಬಿ. ಜತಿನ್‌ 100 ಮೀಟರ್ಸ್ ಬಟರ್‌ಫ್ಲೈ ಹಾಗೂ 200 ಮೀ ಬ್ಯಾಕ್‌ಸ್ಟ್ರೋಕ್‌ನಲ್ಲಿ ಚಿನ್ನ ಹಾಗೂ ಇದೇ ವಿಭಾಗದ ಎಲ್. ಮಣಿಕಂಠ 100 ಮೀ. ಬ್ರೆಸ್ಟ್‌ಸ್ಟ್ರೋಕ್‌ ಹಾಗೂ 200 ಮೀ ಮೆಡ್ಲೆನಲ್ಲಿ ಚಿನ್ನದ ಪದಕ ಪಡೆದರು. ಮೈಸೂರು ವಿಭಾಗದ ಚಿಂತನ್‌ ಶೆಟ್ಟಿ 400 ಮೀ.ಫ್ರೀ ಸ್ಟೈಲ್‌ನಲ್ಲಿ ಬಂಗಾರಕ್ಕೆ ಕೊರಳೊಡ್ಡಿದರು. ಮಹಿಳೆಯರ 100 ಮೀಟರ್ಸ್ ಬ್ರೆಸ್ಟ್‌ ಸ್ಟ್ರೋಕ್ ನಲ್ಲಿ ಬೆಂಗಳೂರು ವಿಭಾಗದ 1ನಿ, 25.48 ಸೆಕೆಂಡುಗಳಲ್ಲಿ ಗುರಿ ತಲುಪಿ ಅಗ್ರಸ್ಥಾನ ಪಡೆದರು.

ಇದೇ ವೇಳೆ, ಗುಂಪು ವಿಭಾಗದಲ್ಲಿ ವಿವಿಧ ಸ್ಪರ್ಧೆಗಳು ನಡೆದವು.

ಅ.14ರವರೆಗೆ ರಾಜ್ಯ ಮಟ್ಟದ ಪ್ರತಿಭಾನ್ವಷೇಣಾ ಕ್ರೀಡಾಕೂಟವು ನಡೆಯಲಿದ್ದು, ಆತಿಥೇಯ ಮೈಸೂರು ವಿಭಾಗದ ಜೊತೆಗೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬೆಳಗಾವಿ ಹಾಗೂ ಕಲಬುರಗಿ ವಿಭಾಗದಿಂದ 4 ಸಾವಿರ ಸ್ಪರ್ಧಿಗಳು ಪಾಲ್ಗೊಂಡಿದ್ದಾರೆ. ಅ.16ರಿಂದ 21ರವರೆಗೆ ಎರಡನೇ ಹಂತದಲ್ಲಿ ಸಿ.ಎಂ. ಕಪ್‌ ಎಲೈಟ್‌ ಗುಂಪಿನ ಸ್ಪರ್ಧೆಗಳು ನಡೆಯಲಿವೆ.

ಮೊದಲ ದಿನದ ಅಥ್ಲೆಟಿಕ್ಸ್‌ ಫಲಿತಾಂಶ:
ಪುರುಷರ ವಿಭಾಗ:

100 ಮೀಟರ್ಸ್ ಓಟ: ಎಂ. ಗೌತಮ್‌ (ಬೆಂ.ಗ್ರಾ. 10.86 ಸೆ. )–1, ಮಾರ್ಕ್‌ ಡಿಕೋಸ್ಟ (ಮೈಸೂರು)–2, ಈರಯ್ಯ ಹಿರೇಮಠ (ಬೆಂ. ನಗರ)–3
400 ಮೀಟರ್ಸ್‌ ಓಟ: ಮಹೇಂದ್ರ (ಬೆಳಗಾವಿ, 48.90 ಸೆ)–1, ಅಜಯ್‌ ನೀಲಿಚಂದ್ರ (ಬೆಂ. ನಗರ)–2, ಎಂ. ನಿತಿನ್‌ ಗೌಡ (ಬೆಂ. ಗ್ರಾಮಾಂತರ)–3
1500 ಮೀಟರ್ಸ್ ಓಟ: ಗುರುಪ್ರಸಾದ್‌ ( ಬೆಂಗಳೂರು ಗ್ರಾ. 4ನಿ, 02.28 ಸೆ)–1, ರಾಹುಲ್‌ (ಮೈಸೂರು)–2, ಈರಪ್ಪ ಹನಗಣ್ಣವರ (ಬೆಳಗಾವಿ)–3
4X100 ರಿಲೆ: ಜಿ.ಪಿ. ಗೌತಮ್, ವಿ. ಪ್ರಸನ್ನಕುಮಾರ್, ವಿಜಯ್‌ಕುಮಾರ್ ಮುದಕವಿ, ಕಾರ್ತೀಕ್ ಅಬ್ಬಿಗೇರಿ (ಬೆಳಗಾವಿ, 43.21 ಸೆ)–1, ಎಸ್. ಸಾತ್ವಿಕ್‌, ಸೃಜನ್‌ ಪೂಜಾರಿ, ವಿಖ್ಯಾತ್‌ ಶೆಟ್ಟಿ, ಮಾರ್ಕ್ ಡಿಕೋಸ್ಟ (ಮೈಸೂರು), ಎಂ.ವಿ. ಅಭಿ, ಡಿ.ವಿ. ಅಭಯ್‌, ನಿತೇಶ್‌, ಎಂ. ಗೌತಮ್‌ (ಬೆಂ. ಗ್ರಾ)–3
ಡಿಸ್ಕಸ್‌ ಥ್ರೋ: ವೈ. ಭರತ್ (ಮೈಸೂರು. 40.41 ಮೀ)–1, ಬಿ.ಎಂ. ಗುತ್ತಲ್ (ಬೆಂ. ನಗರ)–2, ಪಿ. ಶ್ರೀಸತ್ಯ (ಬೆಂ. ನಗರ)
ಹೈಜಂಪ್‌: ಎ. ರವಿ (ಮೈಸೂರು. 1.8ಮೀ)– ಆದಿತ್‌ ಕೊಟ್ಯಾನ್ (ಮೈ)–2, ಸುನಿಲ್‌ (ಬೆಳಗಾವಿ)–3
ಜಾವೆಲಿನ್ ಥ್ರೋ: ಸಂದೇಶ್ ನಾಯಕ್‌ (ಬೆಂ.ನಗರ. 59.05 ಮೀ)–1, ಅಭಿನಂದನ್‌ ನಾಯಕ್‌ ( ಬೆಳಗಾವಿ)–2, ಯುವರಾಜು (ಬೆಳಗಾವಿ)–3

ಮಹಿಳೆಯರ ವಿಭಾಗ:
100 ಮೀಟರ್ಸ್ ಓಟ: ಎಚ್‌.ಆರ್. ನವಮಿ (ಮೈಸೂರು, 12.58 ಸೆ.)–1, ಮೋನಿಕಾ ರುಕ್ಮಯ್ಯ (ಬೆಂ. ಗ್ರಾ)–2, ಜೆ. ಲಕ್ಷ್ಯ (ಬೆಂ. ಗ್ರಾ)–3
400 ಮೀಟರ್ಸ್ ಓಟ: ಮೇಘಾ ಮುನವಳ್ಳಿ (ಬೆಳಗಾವಿ, 57.29 ಸೆ)–1, ಆರ್. ಉಷಾ (ಬೆಂ. ನಗರ)–2, ಜ್ಯೋತಿ ಕಟ್ಟಿಮನಿ (ಬೆಳಗಾವಿ)–3
ಟ್ರಿಪಲ್ ಜಂಪ್‌: ಐಶ್ವರ್ಯ (ಬೆಳಗಾವಿ. 12.06 ಮೀ.)–1, ಕೃತಿ ಶೆಟ್ಟಿ (ಮೈಸೂರು)–2, ಕೆ.ಎನ್. ಭೂಮಿಕಾ (ಬೆಂ. ಗ್ರಾ.)–3
1500 ಮೀಟರ್ಸ್ ಓಟ: ಕೆ.ಎಂ. ಅರ್ಚನಾ ( ಬೆಂ. ನಗರ. 4 ನಿ, 45.68 ಸೆ. )–1, ರೂಪಶ್ರೀ (ಮೈಸೂರು)–2, ಶಿಲ್ಪಾ ಹೊಸಮನಿ (ಬೆಳಗಾವಿ)–3
4X100 ರಿಲೆ: ವಿ. ವರ್ಷ, ನವಮಿ, ಕೆ. ಪ್ರಜ್ಞಾ, ಆರ್. ಸಿಂಧು (ಮೈಸೂರು. 50.61 ಸೆ), ಶಿವಾನಿ ರೈ, ಟಿ.ಪಿ. ಯುಕ್ತ, ಕೆ.ಪಿ. ಅಮೃತಾ, ಆರ್. ಭೂಮಿಕಾ (ಬೆಂ. ಗ್ರಾ)–2, ಎನ್. ಐಶ್ವರ್ಯ, ಕೆ. ಶುಭಾಂಗಿ, ಎಂ. ನತಾಶ, ಪಿ. ಕಾವೇರಿ (ಬೆಳಗಾವಿ)–3
ಡಿಸ್ಕಸ್ ಥ್ರೋ: ಮಾಧುರ್ಯ ( ಮೈಸೂರು, 37.03 ಮೀ.)–1,ಯು. ಸೃಷ್ಟಿ (ಬೆಳಗಾವಿ)–2, ಸ್ವರ್ಣಾ ನಾಯಕ್‌ (ಮೈಸೂರು)–3
ಹೈಜಂಪ್: ಜಾಯ್‌ಲಿನ್‌ ಲೊಬೊ (ಬೆಂ.ನಗರ. 1.44 ಮೀ)–1, ಬಿ. ವೈಷ್ಣವಿ (ಬೆಳಗಾವಿ)–2, ರಶ್ಮಿ (ಮೈಸೂರು)–3
ಜಾವೆಲಿನ್‌ ಥ್ರೋ: ಷಹಜಹಾನಿ ( ಮೈಸೂರು. 33.18 ಮೀ)–1, ಕೆ. ದೀಪಾ (ಬೆಳಗಾವಿ)–2, ಎಂ.ಎಸ್. ಅರ್ಚನಾ (ಬೆಳಗಾವಿ–3

ಈಜು ಸ್ಪರ್ಧೆಯ 100 ಮೀಟರ್ಸ್ ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ಬಂಗಾರದ ಪದಕ ಗಳಿಸಿದ ಬೆಂಗಳೂರಿನ ಎಲ್.ಮಣಿಕಂಠ ಈಜಿದ ಪರಿ
ಪ್ರಜಾವಾಣಿ ಚಿತ್ರ: ಅನೂಪ್ ರಾಘ್. ಟಿ.
ಈಜು ಸ್ಪರ್ಧೆಯ 100 ಮೀಟರ್ಸ್ ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ಬಂಗಾರದ ಪದಕ ಗಳಿಸಿದ ಬೆಂಗಳೂರಿನ ಎಲ್.ಮಣಿಕಂಠ ಈಜಿದ ಪರಿ ಪ್ರಜಾವಾಣಿ ಚಿತ್ರ: ಅನೂಪ್ ರಾಘ್. ಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT