ಮೈಸೂರು: ಸಾವಯವ ಪದಾರ್ಥಗಳು, ನಾಟಿ ಬೀಜಗಳು, ವಿವಿಧ ತಳಿಯ ಮಾವು ಗ್ರಾಹಕರನ್ನು ಆಕರ್ಷಿಸಿತು.

ನಂಜರಾಜ ಬಹದ್ದೂರ್ ಛತ್ರದಲ್ಲಿ ಸಹಜ ಸಮೃದ್ಧ ಮತ್ತು ಸಹಜ ಸೀಡ್ಸ್ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ‘ದೇಸಿ ಬೀಜೋತ್ಸವ’ಕ್ಕೆ ನೂರಾರು ರೈತರು ಆಗಮಿಸಿದರು.

ಮುಂಗಾರಿನ ಬಿತ್ತನೆಗೆ ಅಗತ್ಯವಾದ ಸಣ್ಣ, ರತ್ನಚೂಡಿ, ಎಚ್ಎಮ್ಟಿ, ಸಿಂಧೂರ ಮಧುಸಾಲೆ, ನವರ, ದೊಡ್ಡ ಬೈರ ನೆಲ್ಲು, ಸೇಲಂ ಮೊದಲಾದ ಭತ್ತದ ಬೀಜ, ಜನಪ್ರಿಯ ರಾಗಿ ತಳಿಗಳು ಜನರನ್ನು ಆಕರ್ಷಿಸಿದವು. ಪಿರಿಯಾಪಟ್ಟಣ ತಾಲ್ಲೂಕಿನ ಕನಗಾಲ್ ಗ್ರಾಮದ ಪದ್ಮಮ್ಮ ಕಳೆದ 20 ವರ್ಷದಿಂದ ಸಂಗ್ರಹಿಸಿರುವ 150ಕ್ಕೂ ಹೆಚ್ಚು ನಾಟಿ ಬೀಜಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ಕುಂಬಳ, ಚಪ್ಪರದವರೆ, ಜೋಳ, ಅಳಸಂದೆ ಬೀಜಗಳನ್ನು ಖರೀದಿಸಲು ಗ್ರಾಹಕರು ಮುಗಿಬಿದ್ದರು.

ಹುರುಳಿ ಕಾಳಿನಿಂದ ಮಾಡಿದ ವೈವಿಧ್ಯಮಯ ತಿನಿಸು, ಉತ್ತರ ಕರ್ನಾಟಕದ ಜೋಳದ ರೊಟ್ಟಿ, ನಿರ್ಲಕ್ಷಿತ ಹಣ್ಣುಗಳ ಪಾನೀಯ, ರಾಗಿ ಮಾಲ್ಟ್ ಹೊಟ್ಟೆ ತಣಿಸಿತು. ಮೈಸೂರಿನ ‘ಕೃಷಿ ಕಲಾ’ ತಂಡದವರು ಸೋರೆಕಾಯಿಯಿಂದ ಮಾಡಿದ ಕಲಾತ್ಮಕ ಲ್ಯಾಂಪ್, ಹೂದಾನಿ, ಬೀಜದ ರಾಕಿ ಗಮನಸೆಳೆದವು. ಎಚ್.ಡಿ ಕೋಟೆಯ ಹುಲಿಕಾಡು ರೈತ ಉತ್ಪಾದಕರ ಕಂಪನಿಯವರು ಹಲಸು, ತರಕಾರಿ, ಅಪರೂಪದ ಬೀಜ ಮತ್ತು ವಿವಿಧ ಜಾತಿಯ ಬಾಳೆ ಕಂದುಗಳನ್ನು ಪ್ರದರ್ಶನಕ್ಕಿಟ್ಟಿದ್ದರು.

ಉದ್ಘಾಟನೆ: ಕಾರ್ಯಕ್ರಮವನ್ನು ಬೀಜಮಾತೆ ಪದ್ಮಮ್ಮ ಉದ್ಘಾಟಿಸಿದರು. ಕೃಷಿ ಇಲಾಖೆ ಉಪ ನಿರ್ದೇಶಕ ಬಿ.ಎನ್. ಧನಂಜಯ, ಸುತ್ತೂರಿನ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಜ್ಞಾನೇಶ್. ಬಿ.ಎನ್, ಹೊಳೆನರಸೀಪುರ ತಾಲ್ಲೂಕಿನ ಉಣ್ಣೇನಹಳ್ಳಿಯ ಅಪ್ಪಾಜಿ, ದೇಸಿ ಸೀಡ್ ಕಂಪನಿಯ ಕಾರ್ಯನಿರ್ವಹಣಾಧಿಕಾರಿ ರವಿ.ಕೆ.ಮಾಗಲ್, ಸಹಜ ಸಮೃದ್ಧದ ನಿರ್ದೇಶಕ ಜಿ. ಕೃಷ್ಣ ಪ್ರಸಾದ್, ಕೃಷಿ ತಜ್ಞ ಸಾಹಿಲ್ ವಾಸು ಇದ್ದರು.

ಭಾನುವಾರ ಮೇಳದ ಕೊನೆಯ ದಿನವಾಗಿದ್ದು 5 ರಿಂದ 12 ವರ್ಷದ ಒಳಗಿನ ಮಕ್ಕಳಿಗಾಗಿ ಬೀಜ ಸಂರಕ್ಷಣೆಯ ಅರಿವು ಮೂಡಿಸುವ ಚಿತ್ರಕಲಾ ಸ್ಪರ್ಧೆ ನಡೆಯಲಿದೆ. ಆಸಕ್ತರು ಮನೆಯಲ್ಲೇ ಚಿತ್ರ ಬರೆದು 12.30 ಕ್ಕೆ ಮೇಳಕ್ಕೆ ತರಬಹುದು ಎಂದು ಆಯೋಜಕರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.