ಮೈಸೂರು: ಇಲ್ಲಿನ ಅರವಿಂದ ನಗರದ ಜೆಎಸ್ಎಸ್ ವೃದ್ಧಾಶ್ರಮದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅಭಿಮಾನಿ ಬಳಗ ಹಾಗೂ ಎಸ್.ಪ್ರಕಾಶ್ ಪ್ರಿಯದರ್ಶನ್ ಸ್ನೇಹ ಬಳಗದಿಂದ ಎಚ್.ಡಿ.ದೇವೇಗೌಡ ಅವರ 93ನೇ ಜನ್ಮದಿನಾಚರಣೆ ನಡೆಯಿತು.

ವೃದ್ಧಾಶ್ರಮದ ಹಿರಿಯ ನಾಗರಿಕರಿಗೆ ಸೀರೆ, ಪಂಚೆ ಮತ್ತು ದಿನಸಿ ಸಾಮಗ್ರಿ, ಹಣ್ಣುಗಳನ್ನು ವಿತರಿಸಲಾಯಿತು.

ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಮಾತನಾಡಿ, ‘ದೇವೇಗೌಡರು ದೇಶ ಕಂಡ ಅಪ್ರತಿಮ ರೈತ ನಾಯಕ. ರಾಜ್ಯದಿಂದ ಏಕ ಮಾತ್ರ ಪ್ರಧಾನಮಂತ್ರಿಯಾಗಿ ಆಡಳಿತ ಮಾಡಿದವರು. ಅವರ ಗರಡಿಯಲ್ಲಿ ಬೆಳೆದ ಸಾಕಷ್ಟು ಜನ ಮುಖ್ಯಮಂತ್ರಿಗಳಾಗಿ, ಸಚಿವರಾಗಿ, ಕೇಂದ್ರ ಮಂತ್ರಿಗಳಾಗಿ ಅಧಿಕಾರ ವಹಿಸಿದ್ದಾರೆ’ ಎಂದರು.

ಸಮಾಜಸೇವಕ ಕೆ.ರಘುರಾಮ ವಾಜಪೇಯಿ, ಕೆಪಿಸಿಸಿ ಸದಸ್ಯ ನಜರ್ಬಾದ್ ನಟರಾಜ್, ನಗರ ಜೆಡಿಎಸ್ ಕಾರ್ಯಾಧ್ಯಕ್ಷ ಎಸ್.ಪ್ರಕಾಶ್ ಪ್ರಿಯಾದರ್ಶನ್, ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೋಮದೇವ್, ಗಾಯಕ ಯಶವಂತ್ ಕುಮಾರ್, ಛಾಯಾ, ಪಿಂಕಿ ಕುಮಾರಿ ರಾಜೇಶ್ ಕುಮಾರ್ ವೀರಭದ್ರ ಸ್ವಾಮಿ ಸುಬ್ರಮಣಿ ರಮೇಶ್ ರಾಮಪ್ಪ, ಗಗನ್, ಶ್ರೀಧರ್, ಜೆಡಿಎಸ್ ಮುಖಂಡ ಹರ್ಷ, ಎಲ್ಐಸಿ ವೆಂಕಟೇಶ್, ಶ್ರೀಧರ್, ಎಸ್.ಪಿ.ಅಕ್ಷಯ್ ಪ್ರಿಯಾದರ್ಶನ್, ಹರ್ಷಿತ್ ಎಸ್.ನಾಗೇಶ್, ದತ್ತ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.