‘ಅಂಬೇಡ್ಕರ್ ಬುದ್ಧಿಸಂ ಶಕ್ತಿಯುತ’
ಬೌದ್ಧ ಧರ್ಮದಲ್ಲಿ ಯಾವುದೆಲ್ಲ ಉತ್ತಮ ಅಂಶವಿದೆಯೋ ಅಂತಹ ಅಂಶಗಳನ್ನು ತಮ್ಮದಾಗಿಸಿಕೊಳ್ಳಬೇಕು ಎಂದ ಅಂಬೇಡ್ಕರ್ ಬುದ್ಧಿಸಂ ಅನ್ನು ವರ್ತಮಾನಕ್ಕೆ ತಕ್ಕಂತೆ ಮರುಹುಟ್ಟಿಸಿದವರು. ಭಾರತದಲ್ಲಿ ನೇರ ಬುದ್ಧಿಸಂಗೆ ಇಲ್ಲದ ಶಕ್ತಿ ಮರುಹುಟ್ಟುವಿಗೆ ಇದೆ. ಬಂತೇಜಿಗಳ ಜತೆ ಎಷ್ಟೇ ಆಳವಾಗಿ ಚರ್ಚಿಸಿದರೂ ಅವರು ಮೂಲ ತತ್ವಗಳನ್ನೇ ಹೇಳುತ್ತಾರೆ. ಆದರೆ ಅಂಬೇಡ್ಕರ್ ಭಿನ್ನವಾಗಿ ನಿಲ್ಲುತ್ತಾರೆ ಎಂದು ಚಿಂತಕ ಪ್ರೊ.ರಹಮತ್ ತರೀಕರೆ ಹೇಳಿದರು.