ಹುಣಸೂರು: ‘ಸಹಕಾರ ಸಂಘಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ನಾಮನಿರ್ದೇಶನಕ್ಕೆ ಶಾಸಕ ಜಿ.ಟಿ.ದೇವೇಗೌಡರು ವಿರೋಧ ವ್ಯಕ್ತಪಡಿಸಿರುವುದು ಸರಿಯಲ್ಲ’ ಎಂದು ದಲಿತ ಸಂಘರ್ಷ ಸಮಿತಿ ಮುಖಂಡ ರತ್ನಾಪುರಿ ಪುಟ್ಟಸ್ವಾಮಿ ಹೇಳಿದರು.

ನಗರದ ಸಂವಿಧಾನ ವೃತ್ತದಲ್ಲಿ ಗುರುವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿ, ‘ಶಾಸಕರ ನಿಲುವಿನಿಂದ ಹಿಂದುಳಿದ ಸಮುದಾಯದವರಿಗೆ ಪ್ರಾತಿನಿತ್ಯ ಇಲ್ಲವಾಗುತ್ತದೆ’ ಎಂದರು.

ಮುಖಂಡರಾದ ರಾಮಕೃಷ್ಣ ಅತ್ತಿಕುಪ್ಪೆ, ಶಿವರಾಜ್ ಮುತ್ತುರಾಯನಹೊಸಹಳ್ಳಿ ಮಾತನಾಡಿ, ‘ಶೋಷಿತ ಸಮುದಾಯದವರು ಸಹಕಾರಿ ಕ್ಷೇತ್ರದಲ್ಲಿ ಪಾಲ್ಗೊಳ್ಳಲು ಅನುವಾಗುವಂತೆ ಸರ್ಕಾರ ತಿದ್ದುಪಡಿ ತರಲು ಮುಂದಾಗಿರುವುದು ಸ್ವಾಗತಾರ್ಹ’ ಎಂದರು.

ಕೃಷ್ಣ, ಸಿದ್ದೇಶ, ಪುಟ್ಟರಾಜು, ಚೆಲುವರಾಜು, ಜೆ.ಮಹದೇವ್,ಮುದಸ್ಸಿರ್, ಅಜೀಜ್, ಪ್ರಭಾಕರ್, ಮಹೇಶ್. ಕುಮಾರ್, ರಾಜು ಚಿಕ್ಕಹುಣಸೂರು, ರೇಣುಕ, ಮಹದೇವಮ್ಮ ಪಾಲ್ಗೊಂಡಿದ್ದರು.

ಸಹಕಾರಿ ಕ್ಷೇತ್ರದಲ್ಲಿ ನಾಮನಿರ್ದೇಶನ ಕಾಯ್ದೆ ತಿದ್ದುಪಡಿ ತರುವುದಕ್ಕೆ ತಮ್ಮ ವಿರೋಧವಿಲ್ಲ ಎಂದು ಜಿ.ಟಿ.ದೇವೇಗೌಡರು ಸ್ಪಷ್ಟನೆ ನೀಡಿದ್ದಾರೆ. ನಾನೂ ಸದನದಲ್ಲಿ ಪ್ರಸ್ತಾಪಿಸಿ ಸ್ವಾಗತಿಸಿದ್ದೇನೆ.
ಜಿ.ಡಿ.ಹರೀಶ್ ಗೌಡ ಶಾಸಕರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.