ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Mysuru Dasara | ದಸರಾ ಸ್ತಬ್ಧಚಿತ್ರ: ಪ್ರಶಸ್ತಿ ಪ್ರಕಟ

Published 28 ಅಕ್ಟೋಬರ್ 2023, 19:04 IST
Last Updated 28 ಅಕ್ಟೋಬರ್ 2023, 19:04 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿ ದಸರಾ ಅಂಗವಾಗಿ ನಡೆದ ವಿಜಯದಶಮಿ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಸ್ತಬ್ಧಚಿತ್ರಗಳಿಗೆ ಬಹುಮಾನ ಪ್ರಕಟಿಸಲಾಗಿದೆ.

ಜಿಲ್ಲೆಗಳ ವಿಭಾಗದಲ್ಲಿ ಧಾರವಾಡ, ಚಿಕ್ಕಮಗಳೂರು ಹಾಗೂ ಚಾಮರಾಜನಗರ ಜಿಲ್ಲೆಗಳ ಸ್ತಬ್ಧಚಿತ್ರಗಳು ಬಹುಮಾನ ಗಳಿಸಿವೆ. ಹಾಸನ, ಮಂಡ್ಯ ಹಾಗೂ ಶಿವಮೊಗ್ಗ ಪ್ರೋತ್ಸಾಹಕ ಬಹುಮಾನ ಪಡೆದಿವೆ.

ಇಲಾಖೆ ಹಾಗೂ ನಿಗಮಗಳ ವಿಭಾಗದಲ್ಲಿ ಪ್ರವಾಸೋದ್ಯಮ ಇಲಾಖೆ, ಕಾವೇರಿ ನೀರಾವರಿ ನಿಗಮ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ‘ಉತ್ತಮ ಸ್ತಬ್ಧಚಿತ್ರ’ ಬಹುಮಾನ ಗೆದ್ದಿವೆ. ಕರ್ನಾಟಕ ಸಹಕಾರಿ ಹಾಗೂ ಹಾಲು ಉತ್ಪಾದಕರ ಮಹಾಮಂಡಳ (ಕೆಎಂಎಫ್‌) ಪ್ರೋತ್ಸಾಹಕರ ಬಹುಮಾನ ಪಡೆದಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT