ತಿ.ನರಸೀಪುರ: ಇಕೈವೈಸಿ ಮಾಡದ ತಾಲ್ಲೂಕಿನ ಎಲ್ಲಾ ಅಂತ್ಯೋದಯ ಅನ್ನ(ಎಎವೈ) ಹಾಗೂ ಆದ್ಯತಾ (ಬಿಪಿಎಲ್) ಪಡಿತರದಾರರಿಗೆ ಆಗಸ್ಟ್ 31 ಇಕೆವೈಸಿ ಮಾಡಲು ಕೊನೆಯ ದಿನವಾಗಿದ್ದು, ಕೂಡಲೇ ಮಾಡಿಸುವಂತೆ ತಾಲ್ಲೂಕು ತಹಶೀಲ್ದಾರ್ ಸೂಚಿಸಿದ್ದಾರೆ.

ತಾಲ್ಲೂಕಿನ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಚೀಟಿಯಲ್ಲಿರುವ ಎಲ್ಲಾ ಸದಸ್ಯರ ಇ-ಕೆವೈಸಿ ಸಂಗ್ರಹಣೆ ಮಾಡಲಾಗುತ್ತಿದ್ದು, ಇದುವರೆಗೆ ತಾಲ್ಲೂಕಿನ 82,002 ಪಡಿತರ ಚೀಟಿಗಳಲ್ಲಿ 2,60,334 ಸದಸ್ಯರ ಪೈಕಿ 2,51,486 ಪಡಿತರ ಚೀಟಿ ಸದಸ್ಯರ ಇ-ಕೆವೈಸಿ ಸಂಗ್ರಹಿಸಲಾಗಿದೆ. ಉಳಿಕೆ 8,848 ಸದಸ್ಯರು ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ಮಾಡಿಸುವುದು ಬಾಕಿ ಇದ್ದು, ಆಗಸ್ಟ್ 31, 2024 ಕೊನೆಯ ದಿನದ ಒಳಗೆ ಮಾಡಿಸುವಂತೆ ತಿಳಿಸಲಾಗಿದೆ.

ಬಾಕಿ ಇರುವ ಸದಸ್ಯರು ಕೂಡಲೇ ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ಪಟ್ಟಿಯಲ್ಲಿ ನಿಮ್ಮ ಹೆಸರು ಪರಿಶೀಲಿಸಿಕೊಂಡು ಇ-ಕೆವೈಸಿ ಧೃಡೀಕರಣ ಮಾಡುವಂತೆ ಸೂಚಿಸಲಾಗಿದೆ. ನಿಗದಿತ ದಿನಾಂಕದೊಳಗೆ ಮಾಡದಿದ್ದಲ್ಲಿ ಪಡಿತರ ಚೀಟಿಯಲ್ಲಿ ಅಂತಹ ಸದಸ್ಯರ ಹೆಸರನ್ನು ಕೈ ಬಿಡಲಾಗುವುದು ಎಂದು ತಹಶೀಲ್ದಾರ್ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.