ಹುಣಸೂರು: ತಾಲ್ಲೂಕಿನ ಗಾವಡಗೆರೆ ಗ್ರಾಮದ ಗಿರವಿ ಅಂಗಡಿಯಲ್ಲಿ ನಕಲಿ ಚಿನ್ನದ ಉಂಗುರ ಗಿರಿವಿ ಇಟ್ಟು ₹ 5 ಲಕ್ಷ ಸಾಲ ಪಡೆದ ಆರೋಪಿಯನ್ನು ಹುಣಸೂರು ಗ್ರಾಮಾಂತರ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಚಿಕ್ಕನಾಯಕನಹಳ್ಳಿ ಗ್ರಾಮದ ನಿವಾಸಿ ಮಂಜುನಾಥ ಬಂಧಿತ ಆರೋಪಿ. ಈತ ಗ್ರಾಮದ ಕಾವೇರಿ ಜ್ಯುವೆಲರಿ ಅಂಗಡಿಯಲ್ಲಿ ವಿವಿಧ ಹೆಸರಿನಲ್ಲಿ 11 ಚಿನ್ನದ ಉಂಗುರಗಳನ್ನು ಗಿರವಿ ಇಟ್ಟು ₹5 ಲಕ್ಷ ಸಾಲ ಪಡೆದಿದ್ದ, ಉಂಗುರಗಳನ್ನು ಪರಿಶೀಲಿಸಿ ನಕಲಿ ಚಿನ್ನ ಎಂದು ಖಾತ್ರಿಗೊಂಡ ಬಳಿಕ ಗಿರವಿ ಅಂಗಡಿ ಮಾಲಿಕ ಜೇಸಿಂಗ್ ದೂರು ದಾಖಲಿಸಿದ್ದರು.

ಜುಲೈ 6ರಂದು ಆರೋಪಿಯು ಸ್ನೇಹಿತರೊಂದಿಗೆ ಉಂಗುರ ಗಿರವಿ ಇಡಲು ಅಂಗಡಿಗೆ ಬಂದ ಸಮಯದಲ್ಲಿ ವಶಕ್ಕೆ ಪಡೆಯಲಾಗಿದೆ. ಕೃತ್ಯದಲ್ಲಿ ಈತನ ಇಬ್ಬರು ಸ್ನೇಹಿತರೂ ಭಾಗಿಯಾಗಿದ್ದು, ಅವರು ಕಾರಿನಲ್ಲಿ ನಾಪತ್ತೆಯಾಗಿದ್ದಾರೆ.

ಕಾರ್ಯಾಚರಣೆಯಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಮುನಿಯಪ್ಪ, ಪಿಎಸ್ಐ ರಾಮು, ಆಂತೋಣಿ ಕ್ರೂಸ್, ವಿಜಯರಾಘು, ಇಮ್ರಾನ್ ಶರೀಫ್, ಮಹದೇವ್ ರಮೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.