ಮೈಸೂರು: ‘ಮಳೆ ಇರಲಿ, ಬಿಸಿಲಿರಲಿ, ಚಳಿ ಇರಲಿ ಸರ್ಕಾರಿ ಹಾಗೂ ಖಾಸಗಿ ಉದ್ಯೋಗಿಗಳಿಗೆ ಪ್ರತಿ ತಿಂಗಳ ವೇತನ ಸಿಗುತ್ತಿರುತ್ತದೆ. ಇಂಥವರಿಗೆ ರೈತರ ಸಮಸ್ಯೆ ಗೊತ್ತಿರಲು ಸಾಧ್ಯವಿಲ್ಲ’ ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ಕೃಷಿ ವಿಜ್ಞಾನಿ ಡಾ.ವಸಂತಕುಮಾರ್ ತಿಮಕಾಪುರ ಅವರ ‘ಕೃಷಿ ಲೋಕ ದೊಳಗೆ’ ಹಾಗೂ ‘ಪ್ಲಾಂಟ್ ಡಾಕ್ಟರ್’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಿಲ್ಲಾ ಕನ್ನಡ ಸಾಹಿತ್ತ ಪರಿಷತ್ತು, ಕೃಷಿ ಜ್ಞಾನ ವೇದಿಕೆ ಈ ಕಾರ್ಯಕ್ರಮ ಆಯೋಜಿಸಿದ್ದವು.

‘ವೇತನದಲ್ಲಿ ತಾರತಮ್ಯವಾದರೆ ಮುಷ್ಕರ ನಡೆಸುತ್ತಾರೆ. ಅವರ ಒತ್ತಡಕ್ಕೆ ಸರ್ಕಾರ ಮಣಿಯಲೇಬೇಕಾದ ಪರಿಸ್ಥಿತಿ ಬರುತ್ತದೆ. ಆದರೆ, ಕೃಷಿಕರು ಸಂಘಟಿತ ವಾಗಿ, ಸಾಮೂಹಿಕ ವಾಗಿಒತ್ತಡ ಹಾಕಲುಪ್ರಯತ್ನ ನಡೆಸಿದರೂ ಪ್ರಯೋಜನವಾಗುತ್ತಿಲ್ಲ’ ಎಂದರು.

‘ರೈತರು ಹಲವಾರು ಸಮಸ್ಯೆ ಎದುರಿಸುತ್ತಿದ್ದಾರೆ. ಪ್ರೀತಿಯಿಂದ ಒಕ್ಕಲುತನ ಮಾಡಿ ಬೆಳೆ ಬೆಳೆದಿ ರುತ್ತಾರೆ. ಇನ್ನೇನು ಫಸಲು ತೆಗೆಯಬೇಕು ಎನ್ನುವಷ್ಟರಲ್ಲಿ ಪ್ರವಾಹ ಬಂದು ಬಿಡುತ್ತದೆ. ಉತ್ತರ ಕರ್ನಾಟಕದ ಪರಿಸ್ಥಿತಿ ನಮ್ಮೆದುರೇಇದೆ. ಇಡೀ ಫಸಲು ಕೊಚ್ಚಿ ಹೋಗುವ ಸಂದರ್ಭ ಬಂದಾಗ ರೈತರ ಪರಿಸ್ಥಿತಿ ಎಷ್ಟು ಕರುಣಾಜನಕವಾಗಿರುತ್ತದೆ ಎಂಬುದನ್ನು ಆಲೋಚನೆ ಮಾಡಬೇಕು’ ಎಂದುನುಡಿದರು.

‘ವಸಂತಕುಮಾರ್ ಅವರು ನಿರಂತರವಾಗಿ ಕೃಷಿಕರ ಪರವಾದ ಲೇಖನ ಬರೆಯುತ್ತಾ ಬಂದಿದ್ದಾರೆ. ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಹುದ್ದೆ ತೊರೆದು ಕೃಷಿಯಲ್ಲಿ ಸಂಶೋಧನೆ ನಡೆಸಲು ಮುಂದಾದರು’ ಎಂದು ಶ್ಲಾಘಿಸಿದರು.

ಮಾಜಿ ಶಾಸಕ ವಾಸು ಮಾತನಾಡಿ, ‘ಸರಿಯಾದ ಬೆಲೆ ಸಿಗುವ ವ್ಯವಸ್ಥೆ ಬಾರದಿದ್ದರೆ ಉತ್ಪಾದನಾ ವೆಚ್ಚ ಸರಿದೂಗಿಸುವುದು ರೈತರಿಗೆಕಷ್ಟಕರ ವಾಗುತ್ತದೆ. ಈಗಾಗಲೇ ನಗರೀಕರಣದ ಭರಾಟೆಯಲ್ಲಿ ಕೃಷಿ ಜಮೀನು ಕಡಿಮೆ ಆಗುತ್ತಿದೆ’ ಎಂದರು.

ಮೈಸೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಜಿ.ಹೇಮಂತಕುಮಾರ್, ‘ಹಲವು ಸಂಶೋಧನೆಗಳು ನಡೆಯುತ್ತಿದ್ದು, ರೈತರನ್ನು ತಲುಪುತ್ತಿಲ್ಲ. ನಾವು ನಡೆಸುವ ಸಂಶೋಧನೆಯಿಂದ ಸಮಾಜಕ್ಕೆ ಯಾವ ರೀತಿ ಉಪಯೋಗವಾಗಿದೆ ಎಂಬುದನ್ನು ಅರಿಯಬೇಕು. ಹೊಸ ಹೊಸ ಸಂಶೋಧನೆ, ತಂತ್ರಜ್ಞಾನದ ಮೂಲಕ ರೈತರಿಗೆ ನೆರವು ನೀಡಲು ಮುಂದಾಗಬೇಕು’ ಎಂದು ಕರೆ ನೀಡಿದರು.

ರಂಗಪ್ಪಗೆ ಸನ್ಮಾನ: ಅಮೆರಿಕದ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ ಪ್ರಕಟಿಸಿರುವ ವಿಶ್ವದ ಅತ್ಯುನ್ನತ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಪ್ರೊ.ರಂಗಪ್ಪ ಅವರನ್ನು ಮೈಸೂರು ವಿಶ್ವವಿದ್ಯಾಲಯ ವತಿಯಿಂದ ಸನ್ಮಾನಿಸಲಾಯಿತು.

ಹೈದರಾಬಾದ್‌ನ ಐಸಿಆರ್‌ಐ ಎಸ್‌ಎಟಿ ಉಪನಿರ್ದೇಶಕ ಡಾ.ಸಿ.ಎಲ್.ಲಕ್ಷ್ಮೀಪತಿಗೌಡ, ಮೈಸೂರು ವಿಶ್ವವಿದ್ಯಾಲಯ ಕುಲಸಚಿವ ಪ್ರೊ.ಆರ್.ಶಿವಪ್ಪ, ಗುಲ್ಬರ್ಗ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಎಸ್.ಆರ್.ನಿರಂಜನ, ಜಿಲ್ಲಾ ಕಸಾಪ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಲೇಖಕ ಡಾ.ವಸಂತಕುಮಾರ್ ತಿಮಕಾಪುರ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಗುಬ್ಬಿಗೂಡು ರಮೇಶ್ ಇದ್ದರು.

ಔಷಧೀಯ ಸಸ್ಯ–ಸಂಶೋಧನೆ ನಡೆಯಲಿ

‘ಔಷಧೀಯ ಸಸ್ಯ ಕ್ಷೇತ್ರಗಳಲ್ಲಿ ಹೆಚ್ಚು ಸಂಶೋಧನೆ ನಡೆಸಬೇಕಾದ ಅಗತ್ಯವಿದೆ. ಈ ಮೂಲಕ ನಮಗೆ ಬೇಕಿರುವ ಔಷಧಗಳನ್ನು ನಾವೇ ತಯಾರಿಸಿಕೊಳ್ಳುವಂತಾಗಬೇಕು. ಏಕೆಂದರೆ ಬೇರೆ ದೇಶಗಳಿಂದ
ದುಬಾರಿ ದರ ತೆತ್ತು ಔಷಧ, ಚುಚ್ಚುಮದ್ದು ತರುವುದು ಕಷ್ಟ’ ಎಂದುಮೈಸೂರು ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪಹೇಳಿದರು.

‘ಈಗಾಗಲೇ ದಕ್ಷಿಣ ಕೊರಿಯಾ, ಜಪಾನ್, ಚೀನಾ ದೇಶಗಳಲ್ಲಿ ಈ ಸಂಬಂಧ ಸಂಶೋಧನೆಗಳು ನಡೆಯುತ್ತಿವೆ’ ಎಂದೂಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.