ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬನ್ನೂರು | ಮಾಂಸಕ್ಕಾಗಿ ಕಾದಾಟ: ವ್ಯಕ್ತಿ ಸಾವು

Published 14 ಏಪ್ರಿಲ್ 2024, 13:36 IST
Last Updated 14 ಏಪ್ರಿಲ್ 2024, 13:36 IST
ಅಕ್ಷರ ಗಾತ್ರ

ಬನ್ನೂರು: ಇಲ್ಲಿನ ಹನುಮನಾಳು ಗ್ರಾಮದಲ್ಲಿ ವರ್ಷತ್ತೊಡಕಿಗೆ ಮಾಂಸ ನೀಡುವ ವಿಚಾರದಲ್ಲಿ ಎರಡು ಕುಟುಂಬಗಳ ನಡುವೆ ಏ.11ರಂದು ಜಗಳ ನಡೆದು, ಗಾಯಗೊಂಡಿದ್ದ ಕೃಷ್ಣಪ್ಪ ಶನಿವಾರ ಮೃತಪಟ್ಟರು.

‘ಯುಗಾದಿಯ ಮಾರನೇ ದಿನ ಗುಡ್ಡೆ ಮಾಂಸಕ್ಕಾಗಿ ಮಹಾದೇವ ಅವರು ರಾಜು ಅವರಿಗೆ ಹಣ ನೀಡಿದ್ದರು. ಆದರೆ ಬುಧವಾರ ಬೆಳಿಗ್ಗೆ ರಾಜು ಮಾಂಸ ನೀಡದಿದ್ದಾಗ ಎರಡೂ ಕುಟುಂಬಗಳ ನಡುವೆ ಜಗಳವಾಗಿದ್ದು, ಪರಸ್ಪರ ಹಲ್ಲೆ ನಡೆದಿತ್ತು. ಘಟನೆಯಲ್ಲಿ ಮಹಾದೇವ ಅವರ ಮಾವ ಕೃಷ್ಣಪ್ಪ ಅವರಿಗೆ ಗಂಭೀರ ಗಾಯವಾಗಿತ್ತು. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು’ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಾದೇವ ನೀಡಿದ ದೂರಿನಂತೆ ರಾಜು ಕುಟುಂಬದ ಏಳು ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT