ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಾಲಿಗ್ರಾಮ | ಗ್ಯಾಸ್ ಸಿಲಿಂಡರ್ ಸೋರಿಕೆ; ಮನೆ ಬೆಂಕಿಗಾಹುತಿ

Published 1 ಜೂನ್ 2024, 15:08 IST
Last Updated 1 ಜೂನ್ 2024, 15:08 IST
ಅಕ್ಷರ ಗಾತ್ರ

ಸಾಲಿಗ್ರಾಮ: ತಾಲ್ಲೂಕಿನ ಗಡಿಭಾಗದ ಮುಂಜನಹಳ್ಳಿ ಗ್ರಾಮದ ಮನೆಯೊಂದರಲ್ಲಿ ಗುರುವಾರ ತಡರಾತ್ರಿ ಮನೆ ಬಳಕೆಯ ಸಿಲಿಂಡರ್ ಸೋರಿಕೆಯಿಂದ ಬೆಂಕಿ ಅವಘಡ ಉಂಟಾಗಿ ಮನೆ ಹಾಗೂ ಮನೆಯಲ್ಲಿದ್ದ ವಸ್ತುಗಳು ಬೆಂಕಿಗೆ ಆಹುತಿಯಾಗಿದೆ.

ಮುಂಜನಹಳ್ಳಿ ಗ್ರಾಮದ ಈರಣ್ಣ ನಾಯಕ ಎಂಬವರ ಮನೆ ಹಾನಿಗೊಳಗಾಗಿರುವುದು. ಮೇ 30ರಂದು ತಡರಾತ್ರಿ ಎಚ್ಚರ ಗೊಂಡ ‍ಪತ್ನಿ ಶಾರದಮ್ಮ ಅವರಿಗೆ ಬೆಂಕಿ ಅವಘಡ ಕಾಣಿಸುತ್ತಿದ್ದಂತೆ ಗಾಬರಿಯಿಂದ ಗಂಡ ಹಾಗೂ ಮಕ್ಕಳನ್ನು ಎಚ್ಚರ ಮಾಡಿ ಮನೆಯಿಂದ ಹೊರ ಬಂದಿದ್ದಾರೆ. ಯಾವುದೇ ಪ್ರಾಣಾಪಾಯವಾಗಿಲ್ಲ.

‘ಕೆ.ಆರ್.ನಗರದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸುವ ಮುನ್ನವೇ ಮನೆ ಸಂಪೂರ್ಣ ಬೆಂಕಿಗೆ ಆಹುತಿಯಾಗಿತ್ತು. ಅಲ್ಲದೆ ಮನೆಯಲ್ಲಿದ್ದ ₹ 1.45 ಲಕ್ಷ ನಗದು, 60 ಗ್ರಾಂ ಚಿನ್ನ ಹಾಗೂ ಟಿ.ವಿ. ಸೇರಿದಂತೆ ಇತರೆ ಎಲೆಕ್ಟ್ರಾನಿಕ್ ಪರಿಕರಗಳು, ದವಸ– ಧಾನ್ಯಗಳು, ಬಟ್ಟೆಗಳು ಬೆಂಕಿಗಾಹುತಿಯಾಗಿದೆ’ ಎಂದು ಶಾರದಮ್ಮ ಸಾಲಿಗ್ರಾಮ ಠಾಣೆಗೆ ದೂರು ನೀಡಿದ್ದಾರೆ.

ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸಿಪಿಐ ಕೃಷ್ಣರಾಜು ತನಿಖೆ ಕೈಗೊಂಡಿದ್ದಾರೆ.

ಸಾಲಿಗ್ರಾಮ ಸಮೀಪ ಮುಂಜನಹಳ್ಳಿ ಗ್ರಾಮದ ಶಾರದಮ್ಮ ಅವರ ಮನೆ ಸಿಲಿಂಡರ್‌ ಬೆಂಕಿಗಾಹುತಿಯಾಗಿರುವುದು
ಸಾಲಿಗ್ರಾಮ ಸಮೀಪ ಮುಂಜನಹಳ್ಳಿ ಗ್ರಾಮದ ಶಾರದಮ್ಮ ಅವರ ಮನೆ ಸಿಲಿಂಡರ್‌ ಬೆಂಕಿಗಾಹುತಿಯಾಗಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT