ಮೈಸೂರು: ಈ ಬಾರಿ ದಸರೆಗೆ ₹ 5.42 ಕೋಟಿ ವ್ಯಯ ಮಾಡಲಾಗಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

ಸರ್ಕಾರ ಒಟ್ಟು ₹ 6 ಕೋಟಿ ಹಣ ನೀಡಿತ್ತು. ಅದರಲ್ಲಿ ₹ 5.42 ಕೋಟಿ ಖರ್ಚು ಮಾಡಲಾಗಿದೆ. ₹57 ಲಕ್ಷ ಉಳಿತಾಯವಾಗಿದೆ ಎಂದು ಇಲ್ಲಿ ಸೋಮವಾರ ಸುದ್ದಿ ಗೋಷ್ಠಿಯಲ್ಲಿ ಹೇಳಿದರು.

ಮಂಡ್ಯ ಜಿಲ್ಲೆಯಲ್ಲಿನ ದಸರೆಗೆ ₹50 ಲಕ್ಷ, ಚಾಮರಾಜನಗರ ಜಿಲ್ಲೆಗೆ ₹ 50 ಲಕ್ಷ ಹಾಗೂ ಹಾಸನ ಜಿಲ್ಲೆಗೆ ₹20 ಲಕ್ಷ ನೀಡಲಾಗಿದೆ. ರಂಗಾಯಣಕ್ಕೆ ₹10 ಲಕ್ಷ, ಲೋಕೋಪಯೋಗಿ ಇಲಾಖೆಗೆ ₹ 93.80 ಲಕ್ಷ, ಅರಣ್ಯ ಇಲಾಖೆಗೆ ₹ 50 ಲಕ್ಷ ನೀಡಲಾಗಿದೆ ಎಂದರು.

ವರ್ಷಪೂರ್ತಿ ಮೈಸೂರಿನಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ನಡೆಸಲು ಮುಖ್ಯಮಂತ್ರಿ ಉತ್ಸುಕರಾಗಿದ್ದಾರೆ. ಸದ್ಯದಲ್ಲೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.