ತಿ.ನರಸೀಪುರ: ಪಟ್ಟಣದ ಮೈಸೂರು ರಸ್ತೆ ಸಮೀಪದಲ್ಲಿ ನಿಯಮ ಬಾಹಿರವಾಗಿ ಜೂಜಾಟ ನಡೆಸುತ್ತಿದ್ದ ತ್ರಿವೇಣಿ ಸ್ಪೋರ್ಟ್ಸ್ ರಿಕ್ರಿಯೇಶನ್ ಕ್ಲಬ್ ಮೇಲೆ ಶನಿವಾರ ರಾತ್ರಿ ದಾಳಿ ನಡೆಸಿದ ಪೊಲೀಸರು, 36 ಮಂದಿಯನ್ನು ಬಂಧಿಸಿ, ಪಣಕ್ಕಿಟ್ಟಿದ್ದ ₹1.07 ಲಕ್ಷ ನಗದನ್ನು ವಶಕ್ಕೆ ಪಡೆದಿದ್ದಾರೆ.

ಜೂಜಾಟದ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಪಟ್ಟಣ ಠಾಣೆಯ ಸಿಪಿಐ ಧನಂಜಯ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದರು. ಪಾಯಿಂಟ್ ರಮ್ಮಿ ಆಟದಲ್ಲಿ ನಿರತರಾಗಿದ್ದ 36 ಮಂದಿಯನ್ನು ವಶಕ್ಕೆ ಪಡೆದು, ಕ್ಲಬ್ ಅಧ್ಯಕ್ಷರು, ಕಾರ್ಯದರ್ಶಿ, ಸದಸ್ಯರು ಹಾಗು ಸಿಬ್ಬಂದಿ ಸೇರಿದಂತೆ ಒಟ್ಟು 42 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ದಾಳಿ ವೇಳೆ ₹1,07,048 ಲಕ್ಷ ನಗದಿನೊಂದಿಗೆ ₹500 ಮೌಲ್ಯದ 5, ₹200 ಮೌಲ್ಯದ 21, ₹100 ಮೌಲ್ಯದ 29 ಹಾಗೂ ₹20 ಮೌಲ್ಯದ 13 ಟೋಕನ್ಗಳನ್ನು,ಜೂಜಾಟಕ್ಕೆ ಬಳಸಿಕೊಂಡಿದ್ದ 5 ರೌಂಡ್ ಟೇಬಲ್, 70 ಚೇರ್, ಇಸ್ಟೀಟ್ಗಳನ್ನು ತುಂಬಿಟ್ಟಿದ್ದ 96 ಬಾಕ್ಸ್ಗಳು ಹಾಗೂ ಸಿಸಿಟಿವಿ ಕ್ಯಾಮರಾಗಳಿಗೆ ಅಳವಡಿಸಿದ್ದ ಡಿವಿಆರ್ ಅನ್ನು ವಶಕ್ಕೆ ಪಡೆಯಲಾಗಿದೆ.

ದಾಳಿಯಲ್ಲಿ ಪಿಎಸ್ಐ ಜಗದೀಶ್ ದೂಳ್ಶೆಟ್ಟಿ, ಎಎಸ್ಐ ಚೆಲುವರಾಜು ಹಾಗೂ ಸಿಬ್ಬಂದಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.