ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಒಳಿತು ಮಾಡುವುದು ಸದಾ ಒಳ್ಳೆಯದು: ಮಧುಸೂದನ ಸಾಯಿ

Published : 24 ಆಗಸ್ಟ್ 2024, 16:17 IST
Last Updated : 24 ಆಗಸ್ಟ್ 2024, 16:17 IST
ಫಾಲೋ ಮಾಡಿ
Comments

ಮೈಸೂರು: ‘ಪರರಿಗೆ ಒಳಿತು ಮಾಡುವುದು ಹಾಗೂ ನೆರವಾಗುವುದು ಸದಾ ಒಳ್ಳೆಯದನ್ನೇ ತರುತ್ತದೆ’ ಎಂದು ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದ ಅಧ್ಯಾತ್ಮ ನೇತಾರ ಮಧುಸೂದನ ಸಾಯಿ ಹೇಳಿದರು.

ನಗರದ ಜೆಎಸ್‌ಎಸ್ ಆಸ್ಪತ್ರೆಯ ರಾಜೇಂದ್ರ ಶತಮಾನೋತ್ಸವ ಸಭಾಂಗಣದಲ್ಲಿ ಜೆಎಸ್‌ಎಸ್ ಮಹಾವಿದ್ಯಾಪೀಠದಿಂದ ಸುವರ್ಣ ಮಹೋತ್ಸವ ವಿಶೇಷ ಉಪನ್ಯಾಸ-14 ಹಾಗೂ ವಿಶೇಷ ಉಪನ್ಯಾಸ ಮಾಲೆಯ ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ‘ಆತ್ಮಾನೋ ಮೋಕ್ಷಾರ್ಥಂ ಜಗತ್ ಹಿತಾಯ ಚ’ ವಿಷಯದ ಕುರಿತು ಅವರು ಮಾತನಾಡಿದರು.

‘ಭಗವಂತ ಮತ್ತು ಆತನ ಪ್ರೀತಿಗಾಗಿ ಹಂಬಲಿಸುವವರು ತಮ್ಮದೇ ದಾರಿ ಕಂಡುಕೊಳ್ಳುತ್ತಾರೆ. ಅಸ್ತಿತ್ವದ ಪರಮ ಸತ್ಯವನ್ನು ತಿಳಿದುಕೊಂಡವರು ಸಂತೋಷದಿಂದ ಜೀವನ ನಡೆಸಬಹುದು’ ಎಂದರು.

‘ಪ್ರತಿ ಕ್ರಿಯೆಯೂ ಸಂತೋಷ ಅಥವಾ ನೋವನ್ನು ತರುವುದಿಲ್ಲ. ಪ್ರೀತಿಯು ವಿಶ್ವದಲ್ಲಿರುವ ಎಲ್ಲವನ್ನೂ ಬದಲಾಯಿಸುವ ಶಕ್ತಿಯನ್ನು ಹೊಂದಿದೆ. ದೇವರು ನಿಜವಾಗಿಯೂ ಹೇಗಿದ್ದಾನೆಂದು ತಿಳಿದುಕೊಳ್ಳಬೇಕಾದರೆ, ಯಾವುದೇ ಷರತ್ತುಗಳಿಲ್ಲದೆ ಆತನನ್ನು ನಿರ್ಮಲ ಮನಸ್ಸಿನಿಂದ ಪ್ರೀತಿಸಬೇಕು. ಮಾಡುವ ಒಳ್ಳೆಯ ಕೆಲಸಗಳು ಫಲ ನೀಡುತ್ತವೆ. ಇತರರಿಗೆ ಒಳ್ಳೆಯದನ್ನು ಮಾಡುವುದು ನಿಮಗೆ ಅಗತ್ಯವಿರುವಾಗ ಸಹಾಯ ದೊರೆಯುತ್ತದೆ’ ಎಂದು ತಿಳಿಸಿದರು.

‘ಈಸ್‌ ಚಾರಿಟಿ ಎಸೆನ್ಷಿಯಲ್‌’ (ಅನುವಾದಿತ ಕೃತಿ– ಸುಧಾ ಮೂರ್ತಿ), ‘ಲೀಡರ್‌ಶಿಪ್ ಆಫ್‌ ಜಿ–20 ಅಪರ್ಚ್ಯುನಿಟೀಸ್ ಫಾರ್ ಭಾರತ್’ (ತಿರು ಆರ್‌.ಎನ್.ರವಿ) ಹಾಗೂ ‘ಟುಮಾರೋಸ್ ಇಂಡಿಯಾ ಬಿಗಿನ್ಸ್‌ ಟುಡೆ’ (ಅನೂಪ್ ಎನ್.ಮೆಹ್ತಾ) ಕೃತಿಗಳನ್ನು ಬಿಡುಗಡೆ ಮಾಡಿದ ವಿಶ್ರಾಂತ ಕುಲಪತಿ ಪ್ರೊ.ಜೆ.ಶಶಿಧರ ಪ್ರಸಾದ್, ‘ದಾನ ಬಹಳ ಮುಖ್ಯವಾದುದು. ಸಮಾಜಕ್ಕೆ ಸಹಾಯ ಮಾಡುವ ಕೈಗಳಿಗೆ ನೆರವಾದರೆ ಸಾಕಷ್ಟು ಜನರಿಗೆ ಅನುಕೂಲ ಆಗುತ್ತದೆ’ ಎಂದರು.

‘ಅಧ್ಯಾತ್ಮದ ಪ್ರಭಾವದಿಂದ ಸಾಧನೆ ಮಾಡಬಹುದು’ ಎಂದು ಹೇಳಿದರು.

‘ವಿಶ್ವವಿದ್ಯಾಲಯಗಳಲ್ಲಿ ಪುಸ್ತಕ ಹೊರತರುವ ಕೆಲಸ ನಿಂತು ಹೋಗಿದೆ. ಆದರೆ, ಜೆಎಸ್‌ಎಸ್ ಮಹಾವಿದ್ಯಾಪೀಠದ ಪ್ರಸಾರಾಂಗ ಪುಸ್ತಕಗಳನ್ನು ಹೊರತರುವ ಜೊತೆಗೆ ವಿಶೇಷ ಉಪನ್ಯಾಸ ಮಾಲಿಕೆಗಳನ್ನು ಆಯೋಜಿಸುವುದು–ಪುಸ್ತಕ ಪ್ರಕಟಿಸುತ್ತಿರುವುದು ಒಳ್ಳೆಯ ಸಂಗತಿ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಅಧ್ಯಕ್ಷತೆ ವಹಿಸಿದ್ದ ಪ್ರಾದೇಶಿಕ ಆಯುಕ್ತ ಡಿ.ಎಸ್. ರಮೇಶ್ ಮಾತನಾಡಿದರು. ಜೆಎಸ್‌ಎಸ್ ತಾಂತ್ರಿಕ ಶಿಕ್ಷಣ ವಿಭಾಗದ ನಿರ್ದೇಶಕ ಬಿ.ಸುರೇಶ್, ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿಗಳಾದ ಎಸ್.ಪಿ.ಮಂಜುನಾಥ್, ಶಿವಕುಮಾರಸ್ವಾಮಿ, ಕಾರ್ಯನಿರ್ವಾಹಕ ಕಾರ್ಯದರ್ಶಿ ಸಿ.ಜಿ.ಬೆಟಸೂರಮಠ, ಹೊಸಮಠದ ಚಿದಾನಂದ ಸ್ವಾಮೀಜಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT