ಮೈಸೂರು: ಆಲ್ ಇಂಡಿಯಾ ಭಾವಸಾರ ಕ್ಷತ್ರಿಯ ಮಹಾಸಭಾ ವತಿಯಿಂದ ಭಾನುವಾರ ಗುರುವಂದನಾ ಕಾರ್ಯಕ್ರಮದ ಏರ್ಪಡಿಸಲಾಯಿತು. ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಮುದಾಯದ ಹಲವರನ್ನು ಇದೇ ವೇಳೆ ಸನ್ಮಾನಿಸಲಾಯಿತು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸಮಾರಂಭದಲ್ಲಿ ಶಿಕ್ಷಕರಾದ ಅನಿಲ್ ಕುಮಾರ್ ರಾಂಪೊರೆ, ಸುಮನ್ ಟಿಕಾರೆ, ದಿವ್ಯಾ ಲೋಕರೆ, ಭವಾನಿ ರಾಂಪೊರೆ, ನಾಗಲಕ್ಷ್ಮಿ ವಾದೋನೆ, ಮಮತಾ ವಾದೋನೆ, ದೇವರಾಜು ಪಿಸ್ಸೆ, ಜಿ.ಸುಮತಿ, ವಿನಕ ಕೃಷ್ಣ, ವಿನಾಯಕ ಅವರನ್ನು ಗೌರವಿಸಲಾಯಿತು.

ಶಾಸಕ ಎಲ್.ನಾಗೇಂದ್ರ ಮಾತನಾಡಿ, ಬದುಕಿಗೆ ದಾರಿ ತೋರುವವರೆಲ್ಲರೂ ಗುರುಗಳೇ ಆಗಿದ್ದಾರೆ. ಇಂತಹ ಹಲವರು ನಮ್ಮ ಸುತ್ತುಮುತ್ತ ಇದ್ದಾರೆ. ಅವರನ್ನು ಗೌರವಿಸುವುದು ನಮ್ಮ ಕರ್ತವ್ಯ. ಭಾವಸಾರ ಕ್ಷತ್ರಿಯ ಸಮಾಜ ಈ ನಿಟ್ಟಿನಲ್ಲಿ ಒಳ್ಳೆಯ ಕೆಲಸ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಆಲ್ ಇಂಡಿಯಾ ಭಾವಸಾರ ಕ್ಷತ್ರಿಯ ಮಹಾಸಭಾದ ಯುವ ಪರಿಷತ್ ರಾಷ್ಟ್ರೀಯ ಅಧ್ಯಕ್ಷ ಡಾ.ಯೋಗೇಂದ್ರ ವರ್ಣಿ, ಭಾವಸಾರ ಕ್ಷತ್ರಿಯ ಸಮುದಾಯದಲ್ಲಿ ಒಗ್ಗಟ್ಟು ಪ್ರದರ್ಶನ ಆಗುತ್ತಿಲ್ಲ. ಜಾತಿ ಹೆಸರನ್ನು ಬಳಸಿಕೊಂಡು ಉನ್ನತ ಹುದ್ದೆಗಳನ್ನು ಅಲಂಕರಿಸುವರೇ ಹೊರತು, ಆ ಬಳಿಕ ಸಮುದಾಯದ ಏಳಿಗೆಗಾಗಿ ಯಾರೂ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದರು.

ರಾಜಸ್ತಾನ, ಮಧ್ಯಪ್ರದೇಶ ಮುಂತಾದ ರಾಜ್ಯಗಳಲ್ಲಿ ಸಮುದಾಯದವರು ತಮ್ಮ ಹೆಸರಿನ ಮುಂದೆ ಭಾವಸಾರ ಎಂದು ಸೇರಿಸಿಕೊಂಡು ಒಗ್ಗಟ್ಟು ಪ್ರದರ್ಶಿಸುವರು. ಆದರೆ ಕರ್ನಾಟಕದಲ್ಲಿ ಹಲವರು ಹೆಸರಿನ ಮುಂದೆ ಸಮುದಾಯದ ಹೆಸರು ಸೇರಿಸಲು ಮುಜುಗರಪಡುವರು ಎಂದರು.

ಒತ್ತಾಯ: ಭಾವಸಾರ ಕ್ಷತ್ರಿಯ ಸಮುದಾಯದ ಅಭಿವೃದ್ಧಿ ನಿಗಮ ಹಾಗೂ ಕರ್ನಾಟಕ ರಾಜ್ಯ ಟೈಲರ್ಸ್ ಫೆಡರೇಷನ್ ಸ್ಥಾಪಿಸುವ ಭರವಸೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನೀಡಿದ್ದರು. ಅದನ್ನು ಈಡೇರಿಸಲು ಸರ್ಕಾರ ಮುಂದಾಗಬೇಕು ಎಂದು ಶಾಸಕ ಎಲ್.ನಾಗೇಂದ್ರ ಮೂಲಕ ಒತ್ತಾಯಿಸಿದರು.

ಭಾವಸಾರ ಕ್ಷತ್ರಿಯ ಮಂಡಳಿಯ ಮೈಸೂರು ವಿಭಾಗದ ಅಧ್ಯಕ್ಷ ಆರ್.ವಿ.ಶಿವಾಜಿರಾವ್ ರಾಂಪೊರೆ, ಭಾವಸಾರ ಕ್ಷತ್ರಿಯ ಮಂಡಳಿಯ ನಿರ್ದೇಶಕ ರಮೇಶ್ ರಾಂಪೊರೆ, ದಿ.ಭಾವಸಾರ ಕ್ಷತ್ರಿಯ ಕೋ-ಆಪರೇಟಿವ್ ಸೊಸೈಟಿ ಉಪಾಧ್ಯಕ್ಷ ಸತ್ಯನಾರಾಯಣ್ ಸುಲಾಖೆ,ಎಐಬಿಕೆ ಮಹಾಸಭಾದ ಯುವಪರಿಷತ್‌ನ ರಾಜ್ಯಾಧ್ಯಕ್ಷ ಎನ್.ಗಣೇಶ್ ಲಾಳಿಗೆ, ನಗರಪಾಲಿಕೆ ಸದಸ್ಯರಾದ ಶೋಭಾ ಸುನಿಲ್, ರಂಗಸ್ವಾಮಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.