ಮೈಸೂರು: ಅಶೋಕಪುರಂನ ನೈರುತ್ಯ ರೈಲ್ವೆ ಕೇಂದ್ರೀಯ ಕಾರ್ಯಾಗಾರದಲ್ಲಿನ ನಾಲ್ವರು ಎಂಜಿನಿಯರ್ಗಳು ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಅಲ್ಲಿನ ಉದ್ಯೋಗಸ್ಥ ಮಹಿಳಾ ಸಿಬ್ಬಂದಿಯೊಬ್ಬರು ಅಶೋಕಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಆರೋಪಿಗಳಾದ ಝಡ್.ಥಾಮಸ್, ಗೀತೇಶ್ ಸಿಂಗ್, ಎಸ್.ಸುಜಿತ್ ಹಾಗೂ ಮಹಿಳೆಯೊಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.

‘ಝಡ್.ಥಾಮಸ್ ಅವರು ಲೈಂಗಿಕವಾಗಿ ಮಾತನಾಡುವ, ಅಶ್ಲೀಲ ಚಿತ್ರ ಬರೆದು ತೋರಿಸುವ, ಸಂಜ್ಞೆ ಮಾಡುತ್ತಿದ್ದರು. ಅವರಿಗೆ ಉಳಿದ ಮೂವರು ಆರೋಪಿಗಳು ಬೆಂಬಲವಾಗಿದ್ದರು. ಈ ಬಗ್ಗೆ ಆಂತರಿಕ ಸಮಿತಿಗೆ ಕಳೆದ ಆಗಸ್ಟ್ನಲ್ಲೇ ದೂರು ನೀಡಿದ್ದರೂ ಯಾವುದೇ ಪ್ರಯೋಜನ ಆಗಿರಲಿಲ್ಲ’ ಎಂದು ಸಂತ್ರಸ್ತ ಮಹಿಳೆಯು ಹೇಳಿದ್ದಾರೆ.

‘ಗೀತೇಶ್ ಹಾಗೂ ಸುಮನ್ ಅವರು ಕೆಲಸ ಮಾಡುವಾಗ ನನ್ನ ಚಿತ್ರ, ವಿಡಿಯೊ ತೆಗೆದು ಬೇರೆಡೆ ವರ್ಗಾವಣೆಯಾಗಿದ್ದ ಥಾಮಸ್ ಅವರಿಗೆ ಕಳುಹಿಸುತ್ತಿದ್ದರು. ಅದರಿಂದ ಮಾನಸಿಕ ಆಘಾತವಾಗಿತ್ತು. ಗೀತೇಶ್ ಅವರು ಬಿಹಾರದ ಹುಡುಗರನ್ನು ಕರೆತಂದು ಶೂಟ್ ಮಾಡುವುದಾಗಿ ಕೊಲೆ ಬೆದರಿಕೆ ಹಾಕಿದ್ದರು. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ದೂರುದಾರರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.