ಎಚ್.ಡಿ.ಕೋಟೆ: ತಡೆಗೋಡೆ ಕಾಣದಂತೆ ಬೆಳೆದು ನಿಂತಿರುವ ದೊಡ್ಡ ಗಿಡಗಳು, ಅಲ್ಲಲ್ಲಿ ರಾಶಿಬಿದ್ದ ಹೂಳು, ಕಾಂಕ್ರಿಟ್ ದುಸ್ಥಿತಿ.

–ಇದು ತಾಲ್ಲೂಕಿನ ಹೆಬ್ಬಾಳ್ಳ ನಾಲೆಯ ಸ್ಥಿತಿ.

ನಾಲೆ ಸ್ವಚ್ಛಗೊಳಿಸದ ಕಾರಣ ಕೊನೆ ಭಾಗದ ರೈತರಿಗೂ ನೀರು ತಲುಪುವುದು ಮರಿಚೀಕೆಯಾಗಿದೆ.

ನಾಲೆಗಳಲ್ಲಿ ಗಿಡಗಂಟೆಗಳು ಬೆಳೆದು ನಿಂತಿವೆ. ಹೂಳು ತುಂಬಿದೆ. ನೀರು ಸರಾಗವಾಗಿ ಹರಿಯುತ್ತಿಲ್ಲ. ಅಲ್ಲಲ್ಲಿಯೇ ನೀರು ನಿಲ್ಲುವಂತಾಗಿದ್ದು, ಜಲಾಶಯದಿಂದ ಹರಿಸಿದ ನೀರು ವ್ಯರ್ಥವಾಗಲಿದೆ. ಅಲ್ಲದೆ, ಹೈರಿಗೆ ಭಾಗದ ರೈತರಿಗೆ ಯಥೇಚ್ಛವಾಗಿ ನೀರು ಹರಿದು ಫಸಲು ಹಾಳಾಗುವ ಭೀತಿಯೂ ಎದುರಾಗಿದೆ.

ತಾಲ್ಲೂಕಿನ ಹೆಬ್ಬಾಳ್ಳ ಜಲಾಶಯ ಅತಿ ದೊಡ್ಡ ಕೆರೆಗಳಲ್ಲಿ ಒಂದಾಗಿದೆ. ಈ ಕೆರೆಯ ನೀರಿನಿಂದ ಸುಮಾರು 3.05 ಸಾವಿರ ಎಕರೆ ಪ್ರದೇಶದ ರೈತರು ಭತ್ತದ ಬೆಳೆ ಬೆಳೆಯುತ್ತಾರೆ. 28 ಕಿ.ಮೀ ಹರಿದು ರೈತರ ಜೀವನಾಡಿಯಾಗಿ ಪರಿಣಮಿಸಿದೆ.

‘ಕಾಲುವೆಗಳಲ್ಲಿ ನೀರು ಸರಾಗವಾಗಿ ಹರಿದು ಬಂದರೆ ಜಮೀನಿಗೆ ಹರಿಯುತ್ತದೆ. ಬೇಸಾಯ ಮಾಡಲು ಅನುಕೂಲವಾಗುತ್ತದೆ. ಉಪ ಕಾಲುವೆಗಳು ಮುಚ್ಚಿ ಹೋಗಿದೆ. ಇವುಗಳನ್ನು ದುರಸ್ತಿಪಡಿಸಿ ಕೊಡುವಂತೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಜಲಾಶಯದ ನೀರು ನಂಬಿರುವ ರೈತರಿಗೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ’ ಎಂದು ಹೈರಿಗೆ ರೈತ ಪ್ರಕಾಶ ಅಳಲು ತೋಡಿಕೊಂಡರು.

‘ಕಾಲುವೆಯಲ್ಲಿ ಹೂಳು ತೆಗೆಯದಿರುವುದರಿಂದ ಕೊನೆಯ ಭಾಗದ ರೈತರಿಗೆ ನೀರು ಬರುವುದಿಲ್ಲ ಎಂಬ ಆತಂಕ ಒಂದೆಡೆಯಾದರೆ, ನೀರು ಹರಿದು ಫಸಲು ಹಾಳಾಗುವ ಭೀತಿ ಇನ್ನೊಂದೆಡೆ. ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ರೈತರೆಲ್ಲರೂ ಸೇರಿ ಹೋರಾಟ ಮಾಡುತ್ತೇವೆ’ ಎಂದು ತಿಳಿಸಿದರು.

‘ಜೆಸಿಬಿ ಮೂಲಕ ಅಲ್ಲಲ್ಲಿ ಅಗೆದು ಬೇಕಾಬಿಟ್ಟಿ ಕೆಲಸ ಮಾಡಿ ಬಿಲ್ ಮಾಡಿಕೊಳ್ಳುತ್ತಾರೆ. ಅಧಿಕಾರಿಗಳು ನಿಂತು ಜವಾಬ್ದಾರಿಯಿಂದ ಕೆಲಸ ಮಾಡಿಸಬೇಕು’ ಎಂದು ತೋಟದ ಬೆಳೆಗಾರರ ಸಂಘದ ಮಾದಾಪುರ ನಂದೀಶ ಹೇಳಿದರು.

ನಾಲೆಯ ಸಾಕಷ್ಟು ಕಡೆಗಳಲ್ಲಿ ಹೂಳು ತೆಗೆಸಿಲ್ಲ. ಉಪ ಕಾಲುವೆಗಳಲ್ಲಿ ಮಣ್ಣು ತುಂಬಿಕೊಂಡು ಮುಚ್ಚಿಹೋಗಿದ್ದು ರೈತರ ಜಮೀನುಗಳಿಗೆ ನೀರು ಹರಿಯುತ್ತಿಲ್ಲ.
ಪ್ರಕಾಶ್ ರೈತ ಹೈರಿಗೆ ಗ್ರಾಮ

‘ಹೂಳು ತೆರವು ಶೀಘ್ರ’ ‘ಜಲಾಶಯದ ನಾಲೆಗೆ ಹೂಳು ತೆಗೆಯಲು ₹2 ಲಕ್ಷ ಟೆಂಡರ್ ಆಗಿದ್ದು ಟೆಂಡರ್‌ದಾರರು ಯಾವುದೇ ಅಗ್ರಿಮೆಂಟ್ ಮಾಡಿಕೊಳ್ಳದೆ ಇರುವುದರಿಂದ ಕೆಲಸ ಮಾಡಿಲ್ಲ. ಹಾಗಾಗಿ ಮೇಲಧಿಕಾರಿಗಳೊಂದಿಗೆ ಮಾತನಾಡಿದ್ದು ಆ.20ರಂದು ನೀರು ಬಿಡುವುದರಿಂದ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಹೂಳು ತೆಗೆಸುವ ಕೆಲಸ ಶೀಘ್ರವಾಗಿ ಮಾಡಲಾಗುತ್ತದೆ’ ಎಂದು ಹೆಬ್ಬಾಳ್ಳ ಜಲಾಶಯ ಎಇಇ ರಾಮೇಗೌಡ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.