ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಣಸೂರು | ಕೆಎಸ್ಆರ್‌ಟಿಸಿ ಬಸ್, ಜೀಪ್ ನಡುವೆ ಅಪಘಾತ: ನಾಲ್ವರು ಕಾರ್ಮಿಕರ ಸಾವು

Published 2 ಜನವರಿ 2024, 6:03 IST
Last Updated 2 ಜನವರಿ 2024, 6:03 IST
ಅಕ್ಷರ ಗಾತ್ರ

ಹುಣಸೂರು(ಮೈಸೂರು ಜಿಲ್ಲೆ): ಹುಣಸೂರಿನ ಆರ್‌ಟಿಒ ಕಚೇರಿ ಬಳಿ ಕೆಎಸ್ಆರ್‌ಟಿಸಿ ಎಲೆಕ್ಟ್ರಿಕ್ ಬಸ್ ಹಾಗೂ ಜೀಪ್ ನಡುವೆ ಮಂಗಳವಾರ ಬೆಳಿಗ್ಗೆ ಡಿಕ್ಕಿಯಾಗಿ ಜೀಪ್‌ನಲ್ಲಿದ್ದ ನಾಲ್ವರು ಕಾರ್ಮಿಕರು ಮೃತಪಟ್ಟಿದ್ದಾರೆ.

ಎಚ್.ಡಿ ಕೋಟೆ ತಾಲ್ಲೂಕಿನ ಚಿಲ್ಲರಮರದ ತಿಟ್ಟು ಗ್ರಾಮದ ನಿವಾಸಿಗಳಾದ ಸೋಮೇಶ (30), ಲೋಕೇಶ (35), ರಾಜು (35) ಹಾಗೂ ದಮ್ಮನಕಟ್ಟೆ ನಿವಾಸಿ ಜೀಪ್ ಚಾಲಕ ಮೃತಪಟ್ಟಿದ್ದಾರೆ.

ವಿರಾಜಪೇಟೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್ ಹಾಗೂ ಹುಣಸೂರಿನಿಂದ ಪಿರಿಯಾಪಟ್ಟಣಕ್ಕೆ ತೆರಳುತ್ತಿದ್ದ ಜೀಪ್ ಡಿಕ್ಕಿ ಆಗಿವೆ. ಡಿಕ್ಕಿಯ ರಭಸಕ್ಕೆ ಜೀಪ್‌ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಒಬ್ಬರು ಆಸ್ಪತ್ರೆಗೆ ಚಿಕಿತ್ಸೆಗೆ ರವಾನಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇಬ್ಬರು ಗಂಭೀರ ಗಾಯಗೊಂಡಿದ್ದಾರೆ.

ಹುಣಸೂರು ಪಟ್ಟಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT