ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಕ್ರಮ ಸಂಬಂಧ: ಪತಿ, ಪತ್ನಿಯ ಜಗಳ ಹತ್ಯೆಯಲ್ಲಿ ಅಂತ್ಯ

Published : 15 ಸೆಪ್ಟೆಂಬರ್ 2024, 14:00 IST
Last Updated : 15 ಸೆಪ್ಟೆಂಬರ್ 2024, 14:00 IST
ಫಾಲೋ ಮಾಡಿ
Comments

ಹುಣಸೂರು: ಅನೈತಿಕ ಸಂಬಂಧ ಪತಿ, ಪತ್ನಿಯ ನಡುವಿನ ವೈಮನಸ್ಸು ಹತ್ಯೆಯೊಂದಿಗೆ ಅಂತ್ಯವಾದ ಘಟನೆ ತಾಲ್ಲೂಕಿನ ಬೆಂಕಿಪುರ ಗ್ರಾಮದಲ್ಲಿ ನಡೆದಿದೆ.

ಬೆಂಕಿಪುರ ಗ್ರಾಮದ ನಿವಾಸಿ ಸ್ವಾಮಿನಾಯಕ ಅನೈತಿಕ ಸಂಬಂಧ ಹೊಂದಿದ್ದು ಈ ಸಂಬಂಧ ಮನೆಯಲ್ಲಿ ಪತಿ, ಪತ್ನಿಯರ ನಡುವೆ ಗಲಾಟೆ ನಡೆಯುತ್ತಿತ್ತು. ಇಂದು ಮಧ್ಯಾಹ್ನ ಮನೆಯಲ್ಲಿ ಗಲಾಟೆ ಆರಂಭವಾಗಿ ಪತ್ನಿ ರೋಜಾ (37)ಳನ್ನು ಮಾರಕಾಸ್ತ್ರದಿಂದ ಹತ್ಯೆಗೈದು ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ.

ಘಟನೆ ವಿವರಣೆ: ಬೆಂಕಿಪುರ ಗ್ರಾಮದ ನಿವಾಸಿ ಸ್ವಾಮಿನಾಯಕ 12 ವರ್ಷದ ಹಿಂದೆ ಅದೇ ಗ್ರಾಮದ ರೋಜಾ ಎಂಬುವವಳೊಂದಿಗೆ ವಿವಾಹವಾಗಿ ಎರಡು ಮಕ್ಕಳೊಂದಿಗೆ ಜೀವನ ನಡೆಸಿದ್ದನು. ಸ್ವಾಮಿನಾಯಕ ಅನ್ಯ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ವಿಷಯ ತಿಳಿದ ಪತ್ನಿ ರೋಜಾ ಮನೆಯಲ್ಲಿ ಗಲಾಟೆ ಆರಂಭಿಸಿದ್ದಳು. ಈ ಸಂಬಂಧ ರೋಜಾ ಕುಟುಂಬದವರು ಮನೆಯಲ್ಲಿ ನ್ಯಾಯ ಪಂಚಾಯಿತಿ ನಡೆಸಿ ಎಲ್ಲವನ್ನು ಇತ್ಯರ್ಥ ಮಾಡಿದ್ದರು ಅಕ್ರಮ ಸಂಬಂಧ ಸ್ವಾಮಿನಾಯಕ ಮುಂದುವರೆಸಿದ್ದ ಎಂದು ಬಿಳಿಕೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರಿನಲ್ಲಿ ದಾಖಲಿಸಲಾಗಿದೆ.

ಭಾನುವಾರ ಬೆಳಗ್ಗೆ 10 ಗಂಟೆ ಆಸುಪಾಸಿನಲ್ಲಿ ರೋಜ ಮನೆಗೆ ಕುಡಿಯುವ ನೀರು ತರಲು ತೆರಳುವ ಸಮಯದಲ್ಲಿ ಬೀದಿಯಲ್ಲೇ ಸ್ವಾಮಿನಾಯಕ ಪತ್ನಿಯನ್ನು ಮಾರಕಾಸ್ತ್ರದಿಂದ ಥಳಿಸಿ ಹತ್ಯೆ ಮಾಡಿರುವುದಾಗಿ ದೂರಿನಲ್ಲಿ ದಾಖಲಾಗಿದೆ.

ಬಂಧನ: ಹತ್ಯೆಗೈದ ಸ್ವಾಮಿನಾಯಕನ್ನು ಪೊಲೀಸ್ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ನೀಡಿದ್ದಾಗಿ ತಿಳಿಸಿದ್ದಾರೆ.

ಅಕ್ರಮ ಸಂಬಂಧ ಪತಿ ಪತ್ನಿಯರೊಂದಿಗೆ ಜಗಳ ಹತ್ಯೆಯಲ್ಲಿ ಅಂತ್ಯ
ಅಕ್ರಮ ಸಂಬಂಧ ಪತಿ ಪತ್ನಿಯರೊಂದಿಗೆ ಜಗಳ ಹತ್ಯೆಯಲ್ಲಿ ಅಂತ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT