ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೋರಂಜನ್‌ ಪೋಷಕರ ವಿಚಾರಣೆ ಬಹುತೇಕ ಪೂರ್ಣ

Published 28 ಡಿಸೆಂಬರ್ 2023, 7:40 IST
Last Updated 28 ಡಿಸೆಂಬರ್ 2023, 7:40 IST
ಅಕ್ಷರ ಗಾತ್ರ

ಮೈಸೂರು: ಸಂಸತ್ತಿನಲ್ಲಿ ಭದ್ರತಾ ಲೋಪ ಪ್ರಕರಣದ ಸಂಬಂಧ ಮೈಸೂರಿನಲ್ಲಿ ಬೀಡು ಬಿಟ್ಟಿರುವ ದೆಹಲಿ ಪೊಲೀಸರು ಆರೋಪಿ ಡಿ.ಮನೋರಂಜನ್‌ ಅವರ ಪೋಷಕರು ಹಾಗೂ ಸ್ನೇಹಿತರ ವಿಚಾರಣೆಯನ್ನು ಬಹುತೇಕ ಪೂರ್ಣಗೊಳಿಸಿದ್ದಾರೆ.

ಪೋಷಕರಾದ ದೇವರಾಜೇಗೌಡ ಮತ್ತು ಶೈಲಜಾ ಅವರನ್ನು ಪೊಲೀಸರು ಭಾಷಾಂತರಕಾರರನ್ನು ಜೊತೆಗಿರಿಸಿಕೊಂಡು ಮಂಗಳವಾರ ಹಲವು ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿದರು. ವಿಚಾರಣೆ ಬಹುತೇಕ ಮುಕ್ತಾಯಗೊಂಡಿದ್ದು, ಒಂದೆರಡು ದಿನದಲ್ಲಿ ದೆಹಲಿಗೆ ಮರಳಲಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ಡಿ.16ರಂದು ಕೇಂದ್ರ ಕೇಂದ್ರ ಗುಪ್ತಚರ ಇಲಾಖೆಯ ಅಧಿಕಾರಿಗಳೊಂದಿಗೆ ಮೈಸೂರಿಗೆ ಬಂದಿರುವ ದೆಹಲಿ ಪೊಲೀಸರು, ಸತತ ವಿಚಾರಣೆ ನಡೆಸಿದ್ದರು. ಈ ವೇಳೆ ಮನೋರಂಜನ್ ಡೈರಿಯಲ್ಲಿ ಸಿಕ್ಕ ಮಾಹಿತಿ ಮೇರೆಗೆ ಸಲೂನ್ ಮಾಲೀಕ ಸೂರಪ್ಪ ಸೇರಿದಂತೆ ಮನೋರಂಜನ್‌ ಅವರ ಕೆಲ ಸ್ನೇಹಿತರನ್ನು ವಶಕ್ಕೆ ಪಡೆದು ಮಾಹಿತಿ ಸಂಗ್ರಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT