ಜಯಪುರ: ಗ್ರಾಮೀಣ ಭಾಗದಲ್ಲಿ ಸರ್ಕಾರಿ ಕೆರೆಗಳ ಒತ್ತುವರಿ ತೆರವುಗೊಳಿಸಿದಾಗ ಮಾತ್ರ ಕೆರೆಗಳ ಸರ್ವತೋಮುಖ ಅಭಿವೃದ್ಧಿ ಮಾಡಲು ಸಾಧ್ಯ ಎಂದು ಶಾಸಕ ಜಿ.ಟಿ. ದೇವೇಗೌಡ ಹೇಳಿದರು.

ಮೈಸೂರು ತಾಲ್ಲೂಕು ದೊಡ್ಡಮಾರಗೌಡನಹಳ್ಳಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಗ್ರಾಮದ ಸಂಗಾತಿ ಕಟ್ಟೆ ಕೆರೆ ಅಭಿವೃದ್ಧಿಪಡಿಸಿದ್ದು, ಕೆರೆ ಹಸ್ತಾಂತರ ಮತ್ತು ನಾಮಫಲಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಮತ್ತು ಅವರ ಧರ್ಮಪತ್ನಿ ಹೇಮಾವತಿ ಅಮ್ಮನವರು, ನಮ್ಮ ಊರು ನಮ್ಮ ಕೆರೆ ಯೋಜನೆಯಡಿ ಈ ನಾಡಿನ ಸರ್ವತೋಮುಖ ಅಭಿವೃದ್ಧಿಗೆ ಕೆರೆಗಳನ್ನು ಅಭಿವೃದ್ಧಿಪಡಿಸಲು ಮುಂದಾಗಿದ್ದಾರೆ. ಸಂಗಾತಿ ಕಟ್ಟೆ ಕೆರೆ ಸೇರಿ ಪ್ರಸ್ತುತ 787 ಕೆರೆಗಳನ್ನು ರಾಜ್ಯದಾದ್ಯಂತ ಅಭಿವೃದ್ಧಿಪಡಿಸಿ ಜನ ಜಾನುವಾರುಗಳಿಗೆ ಕುಡಿಯುವ ನೀರು ಸಿಗುವಂತೆ ಮಾಡಿದ್ದಾರೆ. ಕೆರೆಯಲ್ಲಿ ನೀರು ನಿಲ್ಲುವ ಮೂಲಕ ಅಂತರ್ಜಲ ಮಟ್ಟ ಹೆಚ್ಚುತ್ತದೆ. ರೈತರ ಕೊಳವೆ ಬಾವಿಗಳು ಮರುಪೂರಣಗೊಳ್ಳುತ್ತವೆ. ಈ ಯೋಜನೆ ನಾಡಿನ ರೈತರಿಗೆ ಹೆಚ್ಚು ಅನುಕೂಲವಾಗುತ್ತದೆ ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯನಿರ್ವಹಣಾಧಿಕಾರಿ ವಿ.ವಿಜಯ್ ಕುಮಾರ್ ನಾಗನಾಳ ಹಾಗೂ ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಿವನಂಜೇಗೌಡ ಮಾತನಾಡಿದರು.

ತಹಶೀಲ್ದಾರ್ ಕೆ.ಎಂ ಮಹೇಶ್ ಕುಮಾರ್, ಮೈಸೂರು ತಾಲ್ಲೂಕು ಪಂಚಾಯಿತಿ ಇಒ ಕೃಷ್ಣ, ಕೋಟೆಹುಂಡಿ ಮಹದೇವು, ಡಿಎಂಜಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲತಾ ಪ್ರಸನ್ನಚಾರಿ, ಉಪಾಧ್ಯಕ್ಷ ದಾಸಯ್ಯ, ಗ್ರಾಮ ಪಂಚಾಯಿತಿ ಸದಸ್ಯರಾದ ಡಿ.ಬಿ. ಶಂಕರ್, ಟಿ. ಕೃಷ್ಣಪ್ಪ, ನಾಗರಾಜು, ಬಿ. ಬಸವರಾಜು, ಭಗವಂತಸ್ವಾಮಿ, ಪುಟ್ಟ ಲಕ್ಷಮ್ಮ, ದೇವಮ್ಮ, ಬಸವರಾಜು, ಪುಟ್ಟೇಗೌಡ, ದೊಡ್ಡೇಗೌಡ, ಡಿ.ಸಿ. ಕುಮಾರ್, ಡಿ. ರವಿ, ಡಿ.ಪಿ ಶಂಕರ, ಮಹಾದೇವ, ಮಹೇಶ್, ಪಿಡಿಒ ರುಕ್ಮಾಂಗದ, ಎಂಜಿನಿಯರ್ ಪುಷ್ಪರಾಜ್, ಪ್ರಗತಿ ಬಂಧು ಸ್ವ ಸಹಾಯ ಸಂಘ ಒಕ್ಕೂಟ ಅಧ್ಯಕ್ಷೆ ಗೀತಾ, ಧರ್ಮಸ್ಥಳ ಸಂಸ್ಥೆಯ ಕುವೆಂಪುನಗರ ವಿಭಾಗ ಯೋಜನಾಧಿಕಾರಿ ಎ.ಜಿ ಪ್ರವೀಣ್, ಕೃಷಿ ಮೇಲ್ವಿಚಾರಕ ದಿನೇಶ್, ವಲಯ ಮೇಲ್ವಿಚಾರಕಿ ರೂಪ, ಸೇವಾ ಪ್ರತಿನಿಧಿ ಸುಮ ಮತ್ತು ನೇತ್ರಾವತಿ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.