ಶುಕ್ರವಾರ, ಜನವರಿ 27, 2023
17 °C
ಜೆಡಿಎಸ್ ವರಿಷ್ಠ, ಮಾಜಿ‌ ಪ್ರಧಾನಿ ಎಚ್.ಡಿ.ದೇವೇಗೌಡ

ನಂಜನಗೂಡು: ಶ್ರೀಕಂಠೇಶ್ವರ ದೇಗುಲದಲ್ಲಿ ದೇವೇಗೌಡ ದಂಪತಿ ಪೂಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

PV Photo

ನಂಜನಗೂಡು (ಮೈಸೂರು ಜಿಲ್ಲೆ): ಜೆಡಿಎಸ್ ವರಿಷ್ಠ, ಮಾಜಿ‌ ಪ್ರಧಾನಿ ಎಚ್.ಡಿ.ದೇವೇಗೌಡ ಪತ್ನಿ ಚನ್ನಮ್ಮ ಅವರೊಂದಿಗೆ ಇಲ್ಲಿನ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಗುರುವಾರ ವಿಶೇಷ ಪೂಜೆ ಸಲ್ಲಿಸಿದರು.

ರುದ್ರಾಭಿಷೇಕ ಮಾಡಿಸಿದರು. ತುಲಾಭಾರ ಸೇವೆ ಸಲ್ಲಿಸಿದರು. ಶಾಸಕರಾದ ಸಾ.ರಾ.ಮಹೇಶ್, ಅಶ್ವಿನ್ ಕುಮಾರ್, ವಿಧಾನಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಇದ್ದರು.

'ಮೂರು ವರ್ಷದ ನಂತರ ನಂಜುಂಡೇಶ್ವರನ ದರ್ಶನಕ್ಕೆ ಬಂದಿದ್ದೇನೆ. ದಿನ ಚೆನ್ನಾಗಿದೆ ಅಂತ ಗೊತ್ತು ಮಾಡಿದ್ದರು' ಎಂದರು.

'ನಾನು ಚಿಕ್ಕ ಹುಡುಗನಿಂದಲೂ ನಂಜನಗೂಡಿಗೆ ಬರುತ್ತಿದ್ದೇನೆ. ಚಿಕ್ಕ ವಯಸ್ಸಿನಲ್ಲಿ ಕಿವಿ ಸಮಸ್ಯೆಯಾಗಿತ್ತು. ಎಷ್ಟು ವೈದ್ಯರಿಗೆ ತೋರಿಸಿದರೂ ಪ್ರಯೋಜನ ಆಗಿರಲಿಲ್ಲ. ನಂಜುಂಡೇಶ್ವರಲ್ಲಿ ಪ್ರಾರ್ಥಿಸಿದ ನಂತರ, ಗುಣವಾಗಿತ್ತು. ಭಕ್ತಿಯಿಂದ ಪ್ರಾರ್ಥನೆ ಮಾಡಿದರೆ ದೇವರು ಫಲ ಕೊಡುತ್ತಾನೆ' ಎಂದು ದೇವೇಗೌಡ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು