ಭಾನುವಾರ, ನವೆಂಬರ್ 27, 2022
20 °C
‘ಜೆಎಸ್ಎಸ್ ರಂಗೋತ್ಸವ–2022’ ಸಮಾರೋಪ

ರಂಗಭೂಮಿಯಿಂದ ಮನೋವಿಕಾಸ: ಡಾ.ಲತಾ ರಾಜಶೇಖರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ರಂಗ ಚಟುವಟಿಕೆಗಳು ಮನರಂಜನೆಯ ಜೊತೆಗೆ ಮನೋವಿಕಾಸಕ್ಕೂ ಸಹಕಾರಿಯಾಗಿವೆ’ ಎಂದು ಸಾಹಿತಿ ಡಾ.ಲತಾ ರಾಜಶೇಖರ್‌ ಹೇಳಿದರು.

ಇಲ್ಲಿನ ಸರಸ್ವತಿಪುರಂನ ಜೆಎಸ್‌ಎಸ್‌ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ‘ಜೆಎಸ್ಎಸ್ ರಂಗೋತ್ಸವ–2022’ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಸಮೂಹ ಮಾಧ್ಯಮಗಳು ಮಕ್ಕಳ ಮೇಲೆ ಬಹಳ ವೇಗವಾಗಿ ಪ್ರಭಾವ ಬೀರುತ್ತವೆ. ನಾಟಕ, ನೃತ್ಯ, ಸಂಗೀತಗಳು ಮಕ್ಕಳಲ್ಲಿ ಸಕಾರಾತ್ಮಕ ಚಿಂತನೆಗಳನ್ನು ಬೆಳೆಸುತ್ತವೆ. ಅವರಲ್ಲಿ ವೈಚಾರಿಕ ಶಕ್ತಿ ಜಾಗೃತಗೊಳಿಸುತ್ತವೆ’ ಎಂದರು.

ರಂಗಕರ್ಮಿ ಡಾ.ಸುಜಾತಾ ಅಕ್ಕಿ ಮಾತನಾಡಿ, ‘ಮೈಸೂರು ಸೀಮೆಯು ಕನ್ನಡ ಸಂಸ್ಕೃತಿ, ಕಲೆ, ಪರಂಪರೆಗಳಿಗೆ ವಿಶಿಷ್ಟವಾದ ನೆಲೆಯನ್ನು ಹೊಂದಿದೆ. ಉತ್ತರದಿಂದ ಬಂದ ಮಹದೇಶ್ವರರು, ಮಂಟೇಸ್ವಾಮಿ, ಸಿದ್ದಪ್ಪಾಜಿ, ರಾಚಪ್ಪಾಜಿ ಕತ್ತಲೆಯ ರಾಜ್ಯದಲ್ಲಿ ಜ್ಞಾನದ ಬೆಳಕನ್ನು ಪಸರಿಸಿದರು’ ಎಂದು ಸ್ಮರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು