ಜಯಪುರ: ಹೋಬಳಿಯ ದೊಡ್ಡಕಾಟೂರು ಗ್ರಾಮದಲ್ಲಿ 77ನೇ ವರ್ಷದ ಗಣರಾಜ್ಯೋತ್ಸವ ಪ್ರಯುಕ್ತ ಫ್ರೆಂಡ್ಸ್ ಕ್ಲಬ್ ಮತ್ತು ಟಿಪ್ಪು ಟೈಗರ್ಸ್ ವತಿಯಿಂದ ಈಚೆಗೆ ಆಯೋಜಿಸಿದ್ದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಯಲ್ಲಿ ನಂಜನಗೂಡು ತಾಲ್ಲೂಕು ಕಲ್ಲಹಳ್ಳಿ ತಂಡ ವಿಜೇತರಾದರು. ಮೈಸೂರು ತಾಲ್ಲೂಕು ಉದ್ಬೂರು ತಂಡ ರನ್ನರ್ ಅಪ್ ಸ್ಥಾನ ಪಡೆದರು.

ವಿಜೇತ ತಂಡಕ್ಕೆ ಎಚ್ಎಂಐ ಫ್ರೂಟ್ಸ್ ಸಂಸ್ಥೆ ಮಾಲೀಕ ಮೋಹಿಯುದ್ದೀನ್ ಅವರು ವೈಯಕ್ತಿಕವಾಗಿ ₹30ಸಾವಿರ ನಗದು ಬಹುಮಾನ ಮತ್ತು ಟ್ರೋಪಿ ನೀಡಿದರು. ರನ್ನರ್ ಅಪ್ ತಂಡಕ್ಕೆ ಟೂರ್ನಿ ಆಯೋಜಕರು ₹15 ಸಾವಿರ ನಗದು ಮತ್ತು ಟ್ರೋಫಿ ನೀಡಿದರು. ಟೂರ್ನಿಯಲ್ಲಿ ಜಿಲ್ಲೆಯ 37 ತಂಡಗಳು ಭಾಗವಹಿಸಿದ್ದವು.

ಟ್ರೋಫಿ ವಿತರಣೆ ಕಾರ್ಯಕ್ರಮದಲ್ಲಿ ದೂರ ಗ್ರಾಮ ಪಂಚಾಯತಿ ಸದಸ್ಯರಾದ ಮಹದೇವಸ್ವಾಮಿ, ಜರೀನ ತಾಜ್, ರಾಜಮ್ಮ, ಪುಟ್ಟಮಾದಮ್ಮ, ಟೂರ್ನಿ ಆಯೋಜಕರಾದ ಸಲೀಂ, ಸುಹೈಲ್, ಅಜ್ಮಲ್, ಅಕ್ಮಲ್, ಫಾರೂಕ್ ಅಲಿ, ರಿಯಾಜ್ ಅಹಮದ್, ಮಹಮ್ಮದ್ ಅಜರುದ್ದೀನ್, ದೊಡ್ಡಕಾಟೂರು ಗ್ರಾಮದ ಮುಸಲ್ಮಾನ ಮುಖಂಡರಾದ ಮೌಲಾನಾ ಅಸ್ಲಾಂ ರಶೀದಿ, ಮಹಮ್ಮದ್ ಹತಿಂ ಷರೀಫ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.