ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಸ್‌ಸಿಎ ಲೀಗ್‌; 336 ರನ್ ಸಿಡಿಸಿದ ವರುಣ್‌

Published 16 ಆಗಸ್ಟ್ 2023, 19:58 IST
Last Updated 16 ಆಗಸ್ಟ್ 2023, 19:58 IST
ಅಕ್ಷರ ಗಾತ್ರ

ಮೈಸೂರು: ನ್ಯಾಷನಲ್‌ ಕ್ರಿಕೆಟ್‌ ಕ್ಲಬ್‌ ಆಟಗಾರ ವರುಣ್‌ ಪಟೇಲ್‌ ಲೋಕೇಶ, ಬುಧವಾರ ಇಲ್ಲಿನ ಎಸ್‌ಜೆಸಿಎ ಕ್ರಿಕೆಟ್ ಮೈದಾನದಲ್ಲಿ ನಡೆದ ಕೆಎಸ್‌ಸಿಎ ಮೈಸೂರು ವಲಯ 16 ವರ್ಷದ ಒಳಗಿನವರ ಲೀಗ್‌ ಟೂರ್ನಿಯಲ್ಲಿ 336 ರನ್‌ ಗಳಿಸಿ ದಾಖಲೆ ಬರೆದರು.

ತಂಡದ ಆರಂಭಿಕ ಬ್ಯಾಟರ್‌ ವರುಣ್‌ 179 ಎಸೆತಗಳಲ್ಲಿ ಈ ದಾಖಲೆಯ ಮೊತ್ತ ಪೇರಿಸಿದರು. ಅದರಲ್ಲಿ 51 ಬೌಂಡರಿ ಹಾಗೂ 6 ಸಿಕ್ಸರ್ ದಾಖಲಿಸಿ ಅಜೇಯರಾಗಿ ಉಳಿದರು. ಕ್ರೀಸ್‌ನ ಮತ್ತೊಂದು ತುದಿಯಲ್ಲಿ ಇವರಿಗೆ ಸಾಥ್‌ ನೀಡಿದ ಎಂ.ಎಸ್. ರಾಹುಲ್‌ 101 ಎಸೆತಗಳಲ್ಲಿ 156 ರನ್‌ ಸಿಡಿಸಿ ಅಜೇಯರಾಗಿ ಉಳಿದರು. ಪರಿಣಾಮವಾಗಿ ನ್ಯಾಷನಲ್‌ ಕ್ಲಬ್‌ ತಂಡವು ನಿಗದಿತ 50 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟಕ್ಕೆ 550 ರನ್‌ಗಳ ಬೃಹತ್‌ ಮೊತ್ತ ಪೇರಿಸಿತು.

ಗುರಿ ಬೆನ್ನು ಹತ್ತಿದ ಮೈಸೂರು ಅಂಡರ್ ರೈಟರ್ಸ್ ಸ್ಪೋರ್ಟ್ಸ್‌ ಕ್ಲಬ್‌ ತಂಡವು 27.4 ಓವರ್‌ಗಳಲ್ಲಿ ಕೇವಲ 74 ರನ್‌ಗಳಿಗೆ ಆಲೌಟ್‌ ಆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT