ಕೆ.ಆರ್.ನಗರ: ವಿದ್ಯಾರ್ಥಿಗಳಿಗೆ ಅಗತ್ಯವಾದ ಎಲ್ಲ ಸೌಲಭ್ಯ ಕೊಡಲು ಸರ್ಕಾರ ಬದ್ಧವಾಗಿದ್ದು, ಉಪಯೋಗಿಸಿಕೊಂಡು ಉತ್ತಮ ವ್ಯಕ್ತಿಗಳಾಗಿ ಹೊರ ಹೊಮ್ಮಬೇಕು ಎಂದು ಶಾಸಕ ಡಿ.ರವಿಶಂಕರ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಗುರುವಾರ ಆಯೋಜಿಸಿದ್ದ ಸಾಂಸ್ಕೃತಿಕ, ಕ್ರೀಡೆ, ಎನ್.ಎಸ್.ಎಸ್., ಎನ್ ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್, ಯುವ ರೆಡ್ಕ್ರಾಸ್ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಭಾರತ ಬಲಿಷ್ಠ ರಾಷ್ಟ್ರವಾಗಿ ಹೊರ ಹೊಮ್ಮಲು ಎಲ್ಲರೂ ಶ್ರಮಿಸಬೇಕು ಎಂದರು.

ಪ್ರಸಕ್ತ ಸಾಲಿನಿಂದ ಕೆಎಸ್ಒಯು ಅಧ್ಯಯನ ಕೇಂದ್ರ ಪ್ರಾರಂಭಿಸಲಾಗುತ್ತದೆ ಎಂದು ಹೇಳಿದ ಅವರು, ಕಾಲೇಜಿಗೆ 4 ಅಂತಸ್ತಿನ ಸುಸಜ್ಜಿತ ಕಟ್ಟಡ ಕಾಮಗಾರಿಗೆ ₹15.70 ಕೋಟಿ ಮಂಜೂರಾಗಿದ್ದು, ₹5.70 ಕೋಟಿ ಬಿಡುಗಡೆಯಾಗಿದೆ. ಟೆಂಡರ್ ಕರೆದು ಹಂತ ಹಂತವಾಗಿ ಕಾಮಗಾರಿಯ ಅಭಿವೃದ್ಧಿ ಪಡಿಸಲಾಗುತ್ತದೆ. ಶೌಚಾಲಯದ ದುರಸ್ತಿಗೆ ₹2ಲಕ್ಷ ಶಾಸಕರ ಅನುದಾನ ನೀಡಲಾಗುತ್ತದೆ. ಪ್ರಾಂಶುಪಾಲರ ಬೇಡಿಕೆಯಂತೆ ಕಾಲೇಜಿಗೆ ಕಾಯಂ ಕಾವಲುಗಾರ, ಕ್ಯಾಂಟೀನ್ ಪ್ರಾರಂಭಿಸಲಾಗುತ್ತದೆ. ಕಾಲೇಜು ಮೈದಾನ ಅಭಿವೃದ್ಧಿಗೊಳಿಸಲಾಗುತ್ತದೆ ಎಂದರು.

ಪ್ರಾಂಶುಪಾಲ ಬಿ.ಎಸ್.ಜಯ, ತಿ.ನರಸೀಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕಿ ರೇಷ್ಮಾ ಚಂಗಪ್ಪ, ದೈಹಿಕ ಶಿಕ್ಷಣ ನಿರ್ದೇಶಕ ಸಿ.ಆರ್.ನಿಸಾರ್ ಖಾನ್, ಎನ್ ಸಿಸಿ ಅಧಿಕಾರಿ ಎನ್.ವರದರಾಜು ಮಾತನಾಡಿದರು.

ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಕಾರ್ಯದರ್ಶಿ ಪ್ರಶಾಂತ್ ಜೈನ್, ಪುರಸಭೆ ಸದಸ್ಯ ಎಂ.ನಟರಾಜ್, ರಾಜಯ್ಯ, ಹೆಬ್ಬಾಳು ವೇಣುಗೋಪಾಲ್, ಬೆಟ್ಟನಾಯಕ, ಸನಾ ಉಲ್ಲಾ ಖಾನ್, ಎಸ್.ಪ್ರಸಾದ್, ತಿಮ್ಮಯ್ಯ, ರಾಜೇಶ್, ಜಯರಾಮೇಗೌಡ, ಶಂಕರ್, ರಾಮೇಗೌಡ, ಅಶ್ವಿನಿ ಪುಟ್ಟರಾಜು, ವಕ್ತಾರ ಸಯ್ಯದ್ ಜಾಬೀರ್, ಪ್ರಸನ್ನಕುಮಾರ್, ಸಾಂಸ್ಕೃತಿಕ ಸಮಿತಿ ಸಂಚಾಲಕ ಕೆ.ಆರ್.ದೀಕ್ಷಿತ್, ಸಹ ಸಂಚಾಲಕಿ ಎ.ಸುಮಾ, ಐಕ್ಯೂಎಸಿ ಸಂಚಾಲಕ ಜಿ.ಬಿ.ತಿಪ್ಪೇಸ್ವಾಮಿ, ಅಧ್ಯಾಪಕ ಕಾರ್ಯದರ್ಶಿ ಎಲ್.ಮಹೇಶ್, ಪತ್ರಾಂಕಿತ ವ್ಯವಸ್ಥಾಪಕ ಎಂ.ರಘು, ಡಿ.ಎಸ್.ಯೋಗೇಶ್ ಕುಮಾರ್, ಕೆ.ವಿ.ಕಿರಣಕುಮಾರ್, ಎಂ.ವಿ.ರಾಘವೇಂದ್ರ, ಎಂ.ಮಮತಾ, ಸಿ.ಸುಪ್ರಿತಾ, ಎಂ.ಎಸ್. ಮಹದೇವ್, ಎಚ್.ಡಿ.ರಾಘವೇಂದ್ರ , ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.