‘ಎಸ್.ಎಸ್.ಶಿವಯೋಗಿ, ಮಹಮ್ಮದ್ ಇದ್ರಿಸ್, ಸಿ.ವೆಂಕಟೇಶ್ ಮತ್ತು ವಾಹನ ಚಾಲಕ ಎನ್.ಮಂಜು ಎಂಬುವವರು ಈ ಕೃತ್ಯದಲ್ಲಿ ಭಾಗಿಯಾಗಿರುವುದು ತಿಳಿದು ಬಂದಿದೆ. ಲಾರಿಯನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಇವರೆಲ್ಲರ ಮೇಲೆ ಅರಣ್ಯ ಇಲಾಖೆ ದೂರು ದಾಖಲಿಸಿದ್ದು, ಡಿಸಿಎಫ್ ಬಸವರಾಜ್ ಹಾಗೂ ಎಸಿಎಫ್ ಲಕ್ಷ್ಮಿಕಾಂತ್ ಮಾರ್ಗದರ್ಶನದ ಮೇರೆಗೆ ಲಾರಿ ವಶಪಡಿಸಿಕೊಂಡಿದ್ದೇವೆ’ ಎಂದು ಆರ್‌ಎಪ್ಓ ಪ್ರಸನ್ನ ಕುಮಾರ್ ತಿಳಿಸಿದ್ದಾರೆ.