ಮೈಸೂರು: ‘ಕಳೆದ ಲೋಕಸಭಾ ಚುನಾವಣೆಯಲ್ಲಿ ಮೈಸೂರು– ಕೊಡಗು ಕ್ಷೇತ್ರದಲ್ಲಿಯೂ ಮತ ಕಳವು ಮಾಡಲಾಗಿದೆ’ ಎಂದು ಕಾಂಗ್ರೆಸ್ ಅಭ್ಯರ್ಥಿಯೂ ಆಗಿದ್ದ, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಆರೋಪಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಆ.8ರಂದು ಬೆಂಗಳೂರಿನಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ನಡೆಸುವ ಸಭೆಯಲ್ಲಿ ಪ್ರಸ್ತಾಪಿಸಿ, ನಂತರ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು’ ಎಂದರು.

‘ಮೈಸೂರು– ಕೊಡಗು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 8 ವಿಧಾನಸಭಾ ಕ್ಷೇತ್ರಗಳಿದ್ದು, 23 ಲಕ್ಷ ಮತದಾರರಿದ್ದಾರೆ. ಚಾಮರಾಜ, ಕೃಷ್ಣರಾಜ, ಮಡಿಕೇರಿ, ವಿರಾಜಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ 1,100 ಮತಗಟ್ಟೆಗಳಿದ್ದು, ಅವುಗಳಲ್ಲಿ 292 ಮತಗಟ್ಟೆಗಳ ಪರಿಶೀಲನೆ ಮಾಡಲಾಗಿದೆ. ಇಲ್ಲಿ ಇವಿಎಂಗಳನ್ನು ರಿಗ್ಗಿಂಗ್ ಮಾಡಿರುವ ಬಗ್ಗೆ ದಾಖಲೆಗಳನ್ನು ತಯಾರಿ ಮಾಡಲಾಗಿದೆ’ ಎಂದು ಹೇಳಿದರು.

‘ಈ ನಾಲ್ಕೂ ಕ್ಷೇತ್ರದಲ್ಲಿ 1,45,616 ಮತ ಚಲಾವಣೆಯಾಗಿದ್ದು, ಕಾಂಗ್ರೆಸ್ಗೆ 27,522 ಹಾಗೂ ಬಿಜೆಪಿಗೆ 1,18,094 ಬಂದಿವೆ. 2018, 2023ರ ವಿಧಾನಸಭಾ ಚುನಾವಣೆ ಹಾಗೂ 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಶೇ 40ಕ್ಕಿಂತ ಕಡಿಮೆ ಮತಗಳು ಬಂದಿಲ್ಲ. ಆದರೆ, 2024ರ ಚುನಾವಣೆಯಲ್ಲಿ ಶೇ 10ಕ್ಕಿಂತಲೂ ಕಡಿಮೆ ಮತ ಸಿಕ್ಕಿರುವುದು ಮತಗಳುವು ಆಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ’ ಎಂದು ಆರೋಪಿಸಿದರು.

‘ಗ್ರಾಮವೊಂದರ ಬೂತ್ನಲ್ಲಿ 750 ಮತ ಚಲಾವಣೆಯಾಗಿದ್ದು, 15 ಮನೆ ಕಾಂಗ್ರೆಸ್ ಕಾರ್ಯಕರ್ತರದ್ದಾಗಿವೆ. ಕಡಿಮೆ ಎಂದರೂ 50 ಮತ ಬರಬೇಕು. ಆದರೆ ಬಂದಿದ್ದು 7 ಮತ. ನರಸಿಂಹರಾಜ ಕ್ಷೇತ್ರದ ಶಾಂತಿನಗರದಲ್ಲಿ ಒಂದೇ ಸಮುದಾಯ ಮಾತ್ರವೇ ಇದೆ. 700 ಮತಗಳಲ್ಲಿ 500 ಕಾಂಗ್ರೆಸ್ಗೆ ಬಂದಿದ್ದು, ಬಿಜೆಪಿಗೆ 200 ಮತ ಹೋಗಿವೆ. ಒಂದು ಮತ ಸಿಗುವ ಅವಕಾಶ ಬಿಜೆಪಿಗೆ ಇಲ್ಲ. ಅಲ್ಲದೇ, ಒಂದು ಕಡೆ ಮತದಾರರೇ 700 ಮಂದಿ ಇದ್ದರೂ, 750 ಮತಗಳು ಚಲಾವಣೆಯಾಗಿವೆ. ಇದು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.