ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹುಮಾನದ ಆಮಿಷ: ₹65 ಲಕ್ಷ ವಂಚನೆ

Published 8 ಫೆಬ್ರುವರಿ 2024, 16:35 IST
Last Updated 8 ಫೆಬ್ರುವರಿ 2024, 16:35 IST
ಅಕ್ಷರ ಗಾತ್ರ

ಮೈಸೂರು: ಗೂಗಲ್‌ನಿಂದ ₹5.17 ಕೋಟಿ ಬಹುಮಾನ ಬಂದಿದೆ ಎಂದು ನಗರದ ಬೋಗಾದಿ ನಿವಾಸಿ ಪ್ರೊ.ಜಿ.ಗೀತಾ ನಾಯರ್‌ ಅವರನ್ನು ನಂಬಿಸಿದ ಅಪರಿಚಿತ ವ್ಯಕ್ತಿ ₹65 ಲಕ್ಷ ವಂಚಿಸಿದ್ದಾನೆ.

ಕೆಲ ದಿನಗಳ ಹಿಂದೆ ಅವರ ಮೊಬೈಲ್‌ಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ‘ನಿಮಗೆ ಗೂಗಲ್‌ನಿಂದ 5,16,98,663 ಬಹುಮಾನ ಬಂದಿದೆ. ಆ ಹಣ ಪಡೆಯಲು ₹65,72,376 ಶುಲ್ಕ ಪಾವತಿಸಬೇಕು’ ಎಂದಿದ್ದರು. ಅವರ ನಯವಾದ ಮಾತನ್ನು ನಂಬಿ ಗೀತಾ ಹಣ ಪಾವತಿಸಿದ್ದರು. ನಂತರ ವ್ಯಕ್ತಿಯಿಂದ ಯಾವುದೇ ಪ್ರತ್ಯುತ್ತರ ದೊರಕಿಲ್ಲ. ಸೆನ್‌ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT