ಮೈಸೂರು: ‘ರಾಜ್ಯ ಸರ್ಕಾರವು ಟಿಪ್ಪು ಜಯಂತಿ ಮಾದರಿ ಯಲ್ಲಿಯೇ ಮಹಿಷ ದಸರಾ ಆಚರಣೆಗೆ ಕುಮ್ಮಕ್ಕು ನೀಡು ತ್ತಿದೆ’ ಎಂದು ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದರು.
ಇಲ್ಲಿ ಭಾನುವಾರ ಮಾತನಾಡಿದ ಅವರು, ‘ಕಾಂಗ್ರೆಸ್ ಈ ಹಿಂದೆ ಅಧಿಕಾರದಲ್ಲಿ ಇದ್ದಾಗ ಟಿಪ್ಪು ಜಯಂತಿ ಆಚರಣೆ ಮೂಲಕ ಧರ್ಮಗಳ ನಡುವೆ ಸಂಘರ್ಷ ತಂದಿಟ್ಟಿತ್ತು. ಈಗ ವಿವಿಧೆಡೆ ಮಹಿಷ ದಸರಾಕ್ಕೆ ಅನುಮತಿ ನೀಡುವ ಮೂಲಕ ಜಾತಿಗಳ ನಡುವೆ ತಂದಿಡುವ ಕೆಲಸ ಮಾಡುತ್ತಿದೆ. ಇದನ್ನು ಆರಂಭದಲ್ಲಿಯೇ ಚಿವುಟಿ ಹಾಕುವುದನ್ನು ಬಿಟ್ಟು ಅನುಮತಿ ಮತ್ತು ಭದ್ರತೆ ನೀಡುತ್ತಿದೆ. ವಿಕೃತ ಮನಸ್ಸುಗಳು ಹುಟ್ಟಲು ಸರ್ಕಾರವೇ ಪ್ರಚೋದನೆ ನೀಡುತ್ತಿದೆ’ ಎಂದು ದೂರಿದರು.