ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮರಿತಿಬ್ಬೇಗೌಡರ ಕುಟುಂಬದ ಆಸ್ತಿ ₹10.58 ಕೋಟಿ: ಪತ್ನಿ ಬಳಿ 1.8 ಕೆ.ಜಿ. ಚಿನ್ನ

Published 14 ಮೇ 2024, 15:42 IST
Last Updated 14 ಮೇ 2024, 15:42 IST
ಅಕ್ಷರ ಗಾತ್ರ

ಮೈಸೂರು: ವಿಧಾನ ಪರಿಷತ್‌ನ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಮರಿತಿಬ್ಬೇಗೌಡ ಕುಟುಂಬವು ಬರೋಬ್ಬರಿ ₹10.58 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದು, ಇವರ ಬಳಿ 3.2 ಕೆ.ಜಿ.ಯಷ್ಟು ಬಂಗಾರವಿದೆ.

ಮರಿತಿಬ್ಬೇಗೌಡ ಮಂಗಳವಾರ ನಾಮಪತ್ರ ಸಲ್ಲಿಕೆ ವೇಳೆ ತಮ್ಮ ಕುಟುಂಬದ ಆಸ್ತಿ ವಿವರದ ಅಫಿಡವಿಟ್‌ ಅನ್ನು ಚುನಾವಣಾ ಅಧಿಕಾರಿಗಳಿಗೆ ಸಲ್ಲಿಸಿದ್ದಾರೆ. ಅದರಂತೆ ಅವರ ಬಳಿ ₹8.28 ಕೋಟಿ ಮೌಲ್ಯದ ಸ್ಥಿರಾಸ್ತಿ ಹಾಗೂ ₹2.30 ಕೋಟಿ ಚರಾಸ್ತಿ ಇದೆ. ಎಂ.ಎ ಸ್ನಾತಕೋತ್ತರ ಪದವೀಧರರಾದ ಅವರು ವೃತ್ತಿಯಲ್ಲಿ ಪರಿಷತ್‌ ಸದಸ್ಯನ ಜೊತೆಗೆ ಕೃಷಿಕರೂ ಆಗಿದ್ದಾರೆ. ಇವರ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣ ದಾಖಲಾಗಿಲ್ಲ.

ಚರಾಸ್ತಿ ವಿವರ: ಮರಿತಿಬ್ಬೇಗೌಡರು ₹28.98 ಲಕ್ಷ , ಅವರ ಪತ್ನಿ ಎಂ.ಎಸ್. ವಿಜಯಾ ₹1.32 ಕೋಟಿ, ಪುತ್ರ ಆರ್ಯನ್‌ ರಾಜೀವ್‌ ಗೌಡ ₹29.47 ಲಕ್ಷ ಹಾಗೂ ಪುತ್ರಿ ವೈಭವಾ ₹40.50 ಲಕ್ಷ ಚರಾಸ್ತಿ ಹೊಂದಿದ್ದಾರೆ.

ಮರಿತಿಬ್ಬೇಗೌಡರ ಬಳಿ ₹1.70 ಲಕ್ಷ ನಗದು, ಅವರ ಮಡದಿ ಬಳಿ ₹40 ಸಾವಿರ ನಗದು ಹಾಗೂ ಮಕ್ಕಳಿಬ್ಬರ ಬಳಿ ಒಟ್ಟು ₹65 ಸಾವಿರ ನಗದು ಇದೆ. ಅಭ್ಯರ್ಥಿ ಬಳಿ ₹10.75 ಲಕ್ಷ ಮೌಲ್ಯದ ಇನೋವಾ ಕಾರ್‌, ಒಂದು ಮಾರುತಿ ಕಾರ್ ಹಾಗೂ ಹೀರೊ ಹೊಂಡಾ ಕರಿಷ್ಮಾ ಬೈಕ್‌ ಇದ್ದರೆ, ಅವರ ಮಡದಿ ಬಳಿ ಮಾರುತಿ ಆಲ್ಟೊ ಕಾರ್ ಇದೆ.

ಮರಿತಿಬ್ಬೇಗೌಡ ಕುಟುಂಬವು ಒಟ್ಟು 3.2 ಕೆ.ಜಿ.ಯಷ್ಟು ಬಂಗಾರ ಹೊಂದಿದೆ. ಇದರಲ್ಲಿ ಮರಿತಿಬ್ಬೇಗೌಡರ ಬಳಿ 100 ಗ್ರಾಂ ಬಂಗಾರವಿದ್ದರೆ, ಅವರ ಮಡದಿ ಬಳಿ ₹93.60 ಲಕ್ಷ ಮೌಲ್ಯದ 1.8 ಕೆ.ಜಿ. ಚಿನ್ನ ಹಾಗೂ ₹.2.8 ಲಕ್ಷ ಮೌಲ್ಯದ 4 ಕೆ.ಜಿ. ಬೆಳ್ಳಿ ಇದೆ. ಮಗನ ಬಳಿ 550 ಗ್ರಾಂ ಚಿನ್ನವಿದ್ದರೆ, ಮಗಳ ಬಳಿ 750 ಗ್ರಾಂ ಚಿನ್ನ ಹಾಗೂ 1.5 ಕೆ.ಜಿ. ಬೆಳ್ಳಿ ಇದೆ.

ಸ್ಥಿರಾಸ್ತಿ:

ಅಭ್ಯರ್ಥಿ ಹೆಸರಿನಲ್ಲಿ ₹4 ಕೋಟಿ ಮೌಲ್ಯದ ಜಮೀನು, ನಿವೇಶನಗಳಿವೆ. ತವರೂರಾದ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಅಂಚೆದೊಡ್ಡಿಯಲ್ಲಿ 2 ಮನೆ, 2 ಎಕರೆ 25 ಗುಂಟೆಯಷ್ಟು ಜಮೀನು ಹಾಗೂ ಮೈಸೂರಿನ ಲಿಂಗಾಂಬುದಿ ಪ್ರದೇಶದಲ್ಲಿ ನಿವೇಶನವಿದೆ. ಮಡದಿ ಮೈಸೂರಿನ ವಿಜಯನಗರ ಮೂರನೇ ಹಂತದಲ್ಲಿ ₹3.25 ಕೋಟಿ ಮೌಲ್ಯದ ಮನೆ ಹೊಂದಿದ್ದಾರೆ. ಪುತ್ರನ ಹೆಸರಿನಲ್ಲಿ ವಿಜಯನಗರದಲ್ಲಿ ನಿವೇಶನ ಸೇರಿದಂತೆ ₹1.03 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ.

ಸಾಲವೆಷ್ಟು?: ಮರಿತಿಬ್ಬೇಗೌಡರು ₹1.2 ಲಕ್ಷ ಹಾಗೂ ಅವರ ಪತ್ನಿ ₹20 ಲಕ್ಷ ಸಾಲ ಹೊಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT