ಮೈಸೂರು: ಇಲ್ಲಿನ ‘ಮೈಸೂರು ನಗರ ಗೋಪಾಲಕರ ಸಂಘ’ದಿಂದ ಡಿ.23ರಿಂದ 25ರವರೆಗೆ ನಗರದ ಜೆ.ಕೆ. ಮೈದಾನದಲ್ಲಿ ಅಧಿಕ ಹಾಲು ಕರೆಯುವ ಸ್ಪರ್ಧೆ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.

ಅಧ್ಯಕ್ಷ, ನಗರಪಾಲಿಕೆ ಮಾಜಿ ಸದಸ್ಯ ಡಿ.ನಾಗಭೂಷಣ್ ಅಧ್ಯಕ್ಷತೆಯಲ್ಲಿ ಈಚೆಗೆ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಚಲನಚಿತ್ರ ನಟ ತೂಗುದೀಪ ಶ್ರೀನಿವಾಸ್ ಹಾಗೂ ಗೋಪಾಲಕರ ಸಂಘದ ಹಿರಿಯ ಸದಸ್ಯರ ಸ್ಮರಣೆಯಲ್ಲಿ ಹಮ್ಮಿಕೊಳ್ಳಲಾಗುವುದು.

ವಿಜೇತರಿಗೆ ಕ್ರಮವಾಗಿ ಮೊದಲ ಐದು ಬಹುಮಾನವಾಗಿ ₹ 1.50 ಲಕ್ಷ, ₹ 1 ಲಕ್ಷ, ₹ 75ಸಾವಿರ, ₹ 50ಸಾವಿರ ಹಾಗೂ ₹25ಸಾವಿರ ನಗದು ಬಹುಮಾನ ಮತ್ತು ಟ್ರೋಫಿಗಳನ್ನು ನೀಡಲಾಗುವುದು. ಪಾಲ್ಗೊಳ್ಳುವ ಸ್ಪರ್ಧಿಗಳಿಗೆ ಸಮಾಧಾನಕರ ಬಹುಮಾನ ವಿತರಿಸಲು ನಿರ್ಧರಿಸಲಾಯಿತು.

ಉಪಾಧ್ಯಕ್ಷರಾದ ಜೆ.ಗೋಪಿ, ಮೊಗಣ್ಣ, ನಾಗರಾಜು(ಜಾವಾ), ಮೋಹನ್ರಾಮು ಹಾಗೂ ಸದಸ್ಯರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.