ಹುಣಸೂರು: ‘ಕೃಷಿ ಮಾರಾಟ ಕೇಂದ್ರದಲ್ಲಿ ಸರ್ಕಾರ ನಿಗದಿಗೊಳಿಸಿದಂತೆ ಬುಧವಾರದಿಂದ ರೈತರಿಂದ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ ಕೇಂದ್ರ ಆರಂಭವಾಗಲಿದೆ’ ಎಂದು ಖರೀದಿ ಕೇಂದ್ರದ ಅಧಿಕಾರಿ ಸುರೇಶ್ ಬಾಬು ತಿಳಿಸಿದರು.

‘ನಗರದ ಎಪಿಎಂಸಿ ಮಾರಾಟ ಕೇಂದ್ರದಲ್ಲಿ ರೈತರಿಂದ ರಾಗಿ ಖರೀದಿಸಲು ಈಗಾಗಲೇ ಸಕಲ ಸಿದ್ದತೆ ಮಾಡಿಕೊಂಡಿದ್ದು, ಹುಣಸೂರು ತಾಲ್ಲೂಕಿನಲ್ಲಿ 5331 ರೈತರು ನೋಂದಣಿ ಮಾಡಿಕೊಂಡು 86872 ಕ್ವಿಂಟಾಲ್ ರಾಗಿ ಬೆಂಬಲ ಬೆಲೆ ಪ್ರತಿ ಕ್ವಿಂಟಾಲ್ಗೆ ₹4290ರಂತೆ ಮಾರಾಟ ಮಾಡಲು ಸಮ್ಮತಿಸಿದ್ದಾರೆ’ ಎಂದರು.

‘ರೈತರು ಮಾರುಕಟ್ಟೆಗೆ ತರುವ ರಾಗಿ ಸಂಬಂಧ ಫ್ರೂಟ್ಸ್ ಐ.ಡಿಯಲ್ಲಿ ನೋಂದಣಿ ಮಾಡಿಸಿರಬೇಕು. ಆಧಾರ್ ಜೋಡಣೆ ಮತ್ತು ಎನ್.ಪಿ.ಸಿ.ಐ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ ಸಂಖ್ಯೆ, ಎಫ್ಎಕ್ಯೂ ಗುಣಮಟ್ಟದಿಂದ ರಾಗಿ ಕೂಡಿರಬೇಕು. ರೈತರಿಂದ ಖರೀದಿಸಿದ ರಾಗಿಯ ಹಣವನ್ನು ರೈತರ ಬ್ಯಾಂಕ್ ಖಾತೆಗೆ ನೇರ ಸಂದಾಯ ಮಾಡಲಾಗುವುದು. ಮಧ್ಯವರ್ತಿಗಳಿಂದ ಸಂಗ್ರಹಿಸಿದ ರಾಗಿ ಮಾರಾಟ ಮಾಡುವ ಪ್ರಯತ್ನ ರೈತರಿಂದ ನಡೆದಲ್ಲಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ತಿಳಿಸಿದರು.

ಟೋಕನ್: ಬುಧವಾರದಿಂದ ಆರಂಭವಾಗುವ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಲು ರೈತರಿಗೆ ನಿಗದಿಯಂತೆ ಟೋಕನ್ ವಿತರಿಸುವ ಪ್ರಕ್ರಿಯೆ ಸೋಮವಾರದಿಂದ ಆರಂಭವಾಗಿದೆ. ಈವರೆಗೆ 50 ರೈತರಿಗೆ ಟೋಕನ್ ವಿತರಿಸಲಾಗಿದೆ. ರೈತರು ನಿಗದಿತ ದಿನಾಂಕಕ್ಕೆ ರಾಗಿ ಕೇಂದ್ರಕ್ಕೆ ತಂದು ಮಾರಾಟ ಮಾಡಲು ಎಲ್ಲಾ ಅವಕಾಶ ಕಲ್ಪಿಸಿದೆ ಎಂದರು.

ರೈತರು ಮಾರುಕಟ್ಟೆ ಸಂಬಂಧ ಹೆಚ್ಚಿನ ಮಾಹಿತಿಗಾಗಿ 1800 425 1552ಕ್ಕೆ ಉಚಿತ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.