ಮೈಸೂರು: ‘ದಸರಾ ಗಜಪಡೆಯಲ್ಲಿ ಪ್ರಮುಖ ಆಕರ್ಷಣೆಯಾಗಿದ್ದ ಗೋಪಾಲಸ್ವಾಮಿ ಆನೆಯು ಅಕಾಲಿಕ ಸಾವಿಗೀಡಾಗಿರುವುದು ತುಂಬಾ ದುಃಖವನ್ನುಂಟು ಮಾಡಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.

‘ಇನ್ನೂ 40ರ ಆಸುಪಾಸು ವಯಸ್ಸಿನ ಆಕರ್ಷಕ ಮೈಕಟ್ಟು ಹೊಂದಿದ್ದ ಗೋಪಾಲಸ್ವಾಮಿ ಅಪಾರ ಅಭಿಮಾನಿಗಳನ್ನು ಹೊಂದಿತ್ತು. ದಸರಾ ಗಜಪಡೆಯಲ್ಲಿ ಅತಿ ಎತ್ತರವಾದ ಹಾಗೂ 5,400 ಕೆ.ಜಿ. ತೂಕ ಹೊಂದಿದ್ದ ಅ ಆನೆಯು ಅಭಿಮನ್ಯುವಿನ ನಂತರ ದಸರಾ ಮೆರವಣಿಗೆಯಲ್ಲಿ ಅಂಬಾರಿ ಹೊರುವ ಭರವಸೆ ಮೂಡಿಸಿತ್ತು. 2012ರಿಂದ ಪ್ರತಿ ವರ್ಷ ದಸರಾ ವಿಜಯದಶಮಿಯ ಮೆರವಣಿಗೆಯಲ್ಲಿ ಭಾಗವಹಿಸಿ ನಿಶಾನೆ, ನೌಪತ್ ಆನೆ, ಸಾಲಾನೆ ಹಾಗೂ ಪಟ್ಟದ ಆನೆಯಾಗಿ ಹಲವು ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿ ಎಲ್ಲರ ಪ್ರೀತಿ ಗಳಿಸಿತ್ತು’ ಎಂದು ನೆನೆದಿದ್ದಾರೆ.

‘ದಸರಾ ಗಜಪಡೆಯಲ್ಲೇ ಎತ್ತರದ ಮೈಕಟ್ಟು ಹೊಂದಿದ್ದ ಗೋಪಾಲಸ್ವಾಮಿ ಇನ್ನಿಲ್ಲ ಎಂಬುದನ್ನು ಅರಗಿಸಿಕೊಳ್ಳುವುದು ತುಂಬಾ ಕಷ್ಟವಾಗುತ್ತಿದೆ’ ಎಂದು ಪ್ರಕಟಣೆಯಲ್ಲಿ ಕಂಬನಿ ಮಿಡಿದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.