ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಐಟಿಎಂ; ಅಣಕು ಸಿಇಟಿ ಪರೀಕ್ಷೆ 16ರಂದು

Published 13 ಏಪ್ರಿಲ್ 2024, 14:18 IST
Last Updated 13 ಏಪ್ರಿಲ್ 2024, 14:18 IST
ಅಕ್ಷರ ಗಾತ್ರ

ಮೈಸೂರು: ಬೆಳವಾಡಿಯ ಮಹಾರಾಜ ತಾಂತ್ರಿಕ ಮಹಾವಿದ್ಯಾಲಯ ಮೈಸೂರು (ಎಂಐಟಿಎಂ) ಸಂಸ್ಥೆಯಿಂದ ಕಾಲೇಜು ಆವರಣದಲ್ಲಿ ಏ.16ರಂದು ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಅಣಕು ಸಿಇಟಿ ಪರೀಕ್ಷೆ ಆಯೋಜಿಸಲಾಗಿದೆ.

ಅಣಕು ಪರೀಕ್ಷೆಯನ್ನು ಮೂಲ ಪರೀಕ್ಷೆಯಂತೆಯೇ ನಡೆಸಲಾಗುವುದು. ಬೆಳಿಗ್ಗೆ 10ಕ್ಕೆ ಉದ್ಘಾಟನೆ, ಬಳಿಕ ಗಣಿತ, ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರದ ಪರೀಕ್ಷೆಗಳು ಹಾಗೂ ಮಧ್ಯಾಹ್ನ ಜೀವಶಾಸ್ತ್ರ ಪರೀಕ್ಷೆ ನಡೆಯಲಿದೆ. ಪರೀಕ್ಷೆಯಲ್ಲಿ ಮೊದಲ 3 ರ್‍ಯಾಂಕ್ ಪಡೆದವರಿಗೆ ಕ್ರಮವಾಗಿ ₹15 ಸಾವಿರ, ₹10 ಸಾವಿರ ಹಾಗೂ ₹5 ಸಾವಿರ ನಗದು ಬಹುಮಾನ ನೀಡಲಾಗುವುದು. ಜೀವಶಾಸ್ತ್ರದಲ್ಲಿನ ಟಾಪರ್‌ಗೆ ಪ್ರತ್ಯೇಕ ಬಹುಮಾನವಾಗಿ ₹5 ಸಾವಿರ ನೀಡಲಾಗುವುದು.

ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳಿಂದ ಕಾಲೇಜಿಗೆ ಬರಲು ಬಸ್ ವ್ಯವಸ್ಥೆ ಹಾಗೂ ಮಧ್ಯಾಹ್ನಕ್ಕೆ ಭೋಜನ ವ್ಯವಸ್ಥೆ ಮಾಡಲಾಗಿದೆ. ಆಸಕ್ತ ವಿದ್ಯಾರ್ಥಿಗಳು ನೋಂದಣಿಗೆ https://forms.gle/Zimbw1KEypBZ22jCA ಲಿಂಕ್‌ ಬಳಸಬಹುದು. ಮಾಹಿತಿಗೆ ಮೊ.ಸಂ. 96202 28022, 96202 28021 ಸಂಪರ್ಕಿಸಬಹುದು ಎಂದು ಸಂಸ್ಥೆ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT