ಹುಣಸೂರು: ‘ಮಹನೀಯರ ಜೀವನವೇ ನಮ್ಮ ಭವಿಷ್ಯದ ಬದುಕಿಗೆ ಮಾರ್ಗಸೂಚಿಯಾಗಿದೆ’ ಎಂದು ಶಾಸಕ ಜಿ.ಡಿ.ಹರೀಶ್ ಗೌಡ ಹೇಳಿದರು.

ತಾಲ್ಲೂಕಿನ ಗಾವಡಗೆರೆ ಹೋಬಳಿ ಶಿರೇನಹಳ್ಳಿಯಲ್ಲಿ ಭಾನುವಾರ ಸಂಗೊಳ್ಳಿ ರಾಯಣ್ಣ ಕಂಚಿನ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದರು.

‘ಸಮಾಜದ ಒಳಿತಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಮಹನೀಯರ ಜೀವನಾದರ್ಶವನ್ನು ಅಳವಡಿಸಿಕೊಂಡು ಪಾಲಿಸುವುದರಿಂದ ಯುವ ಸಮುದಾಯಕ್ಕೆ ಆದರ್ಶ ಮಾರ್ಗ ತೋರಿಸಲು ಸಾಧ್ಯ’ ಎಂದರು.

ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಮಾತನಾಡಿದರು.

‘ಗ್ರಾಮಗಳಲ್ಲಿ ಯುವಸಮುದಾಯದ ಒಗ್ಗಟ್ಟು, ಪ್ರೀತಿ ವಿಶ್ವಾಸದಿಂದ ಗ್ರಾಮದ ಪ್ರತಿಯೊಂದು ಅಭಿವೃದ್ಧಿಗೆ ಸ್ಪಂದಿಸುವ ದಿಕ್ಕಿನಲ್ಲಿ ಸೌಹಾರ್ದ, ಬಾಂಧವ್ಯ ಕಟ್ಟಿಕೊಳ್ಳುವುದರಿಂದ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಸಹಕಾರವಾಗಲಿದೆ’ ಎಂದರು.

ಕಾವೇರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸಂಸ್ಥಾಪಕ ಡಾ. ಲೋಹಿತ್ ಮಾತನಾಡಿದರು.

ಗಾವಡಗೆರೆ ಗುರುಲಿಂಗ ಜಂಗಮ ಮಠದ ನಟರಾಜ ಸ್ವಾಮೀಜಿ, ಉಕ್ಕಿನಕಂತೆ ಮಠದ ಸಾಂಬಸದಾಶಿವ ಸ್ವಾಮೀಜಿ ಆಶೀರ್ವಚನ ನೀಡಿದರು.

ವೇದಿಕೆಯಲ್ಲಿ ಸಂಗೊಳ್ಳಿ ರಾಯಣ್ಣ ಯುವ ಗರ್ಜನೆ ಅಧ್ಯಕ್ಷ ರಾಜಶೇಖರ್, ದೊಡ್ಡಣ್ಣ ಮೌರ್ಯ, ಅಮಿತ್ ದೇವರಹಟ್ಟಿ, ಸುರೇಂದ್ರ, ಹರವೆ ಶ್ರೀಧರ್, ಶಿವಶೇಖರ್, ಜಿಲ್ಲಾ ಕುರುಬ ಸಂಘದ ಉಪಾಧ್ಯಕ್ಷ ಬಸವರಾಜೇಗೌಡ, ಎ.ಪಿ.ಸ್ವಾಮಿ, ಸಣ್ಣೇಗೌಡ, ಮಹೇಶ್ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.