ಮೈಸೂರು: ‘ಕಾಂಗ್ರೆಸ್ ನಡೆಯ ಕಾರಣದಿಂದಾಗಿ ನಾವು ಮೇಯರ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಿದೆವು’ ಎಂದು ಶಾಸಕ ಜಿ.ಟಿ.ದೇವೇಗೌಡ ತಿಳಿಸಿದರು.

ಇಲ್ಲಿ ಪತ್ರಕರ್ತರೊಂದಿಗೆ ಮಂಗಳವಾರ ಮಾತನಾಡಿದ ಅವರು, ‘ಮೇಯರ್–ಉಪ ಮೇಯರ್ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಿರ್ದೇಶನದಂತೆ ಸ್ವತಂತ್ರ ಸ್ಪರ್ಧೆಗೆ ನಿರ್ಧರಿಸಲಾಗಿತ್ತು. ನನ್ನ ಕ್ಷೇತ್ರದವರೇ ಆದ ನಿರ್ಮಲಾ ಅವರನ್ನು ಅಪಹರಿಸಿ ಉಪ ಮೇಯರ್ ಅಭ್ಯರ್ಥಿ ಮಾಡಿದರು. ಆಗ ನಮ್ಮ ಪಕ್ಷದ ಪಾಲಿಕೆ ಸದಸ್ಯರೆಲ್ಲರೂ ಒಗ್ಗೂಡಿ ಬಿಜೆಪಿಯ ಮೇಯರ್ ಅಭ್ಯರ್ಥಿಗೆ ಮತ ಹಾಕುವ ತೀರ್ಮಾನ ಕೈಗೊಂಡೆವು’ ಎಂದು ಹೇಳಿದರು.

‘ಜಾತಿ ಪ್ರಮಾಣಪತ್ರ ಕೊಡದ ಸ್ವಯಂಕೃತ ಅಪರಾಧದಿಂದ ಅನಿವಾರ್ಯವಾಗಿ ಎರಡೂ ಸ್ಥಾನ ಬಿಜೆಪಿಗೆ ದೊರೆತಿದೆ. ನಾವು ಯಾರಿಗೂ ‘ಎ’ ಅಥವಾ ‘ಬಿ’ ಟೀಂ ಅಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.