ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಂಗಳಾಂತ್ಯಕ್ಕೆ ಕ್ಷಯ ರೋಗಿಗಳಿಗೆ ಹಣ ಬಿಡುಗಡೆ

Published 6 ಫೆಬ್ರುವರಿ 2024, 19:05 IST
Last Updated 6 ಫೆಬ್ರುವರಿ 2024, 19:05 IST
ಅಕ್ಷರ ಗಾತ್ರ

ಮೈಸೂರು: ‘ನಿಕ್ಷಯ್ ಪೋಷಣ್‌’ ಯೋಜನೆಯ ಅಡಿ ರಾಜ್ಯದ ಕ್ಷಯ ರೋಗಿಗಳಿಗೆ ಪ್ರತಿ ತಿಂಗಳು ₹500 ಹಣ ಬಿಡುಗಡೆಗೆ ಕ್ರಮ ಕೈಗೊಂಡಿದ್ದು, ಈ ತಿಂಗಳ ಅಂತ್ಯಕ್ಕೆ ಎಲ್ಲರ ಬ್ಯಾಂಕ್‌ ಖಾತೆಗೆ ನೇರವಾಗಿ ಹಣ ವರ್ಗಾವಣೆಯಾಗಲಿದೆ ಎಂದು ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಸದ್ಯ ಜಾರಿಯಲ್ಲಿರುವ ಖಜಾನೆ–2 ತಂತ್ರಾಂಶಕ್ಕೆ ಆಧಾರ್ ಲಿಂಕ್‌ ಹೊಂದಿರುವ ಬ್ಯಾಂಕ್‌ ಖಾತೆ ಕಡ್ಡಾಯ. ರೋಗಿಯ ಬ್ಯಾಂಕ್‌ ಖಾತೆ ಸಂಖ್ಯೆಯಲ್ಲಿ ವ್ಯತ್ಯಾಸ, ಆಧಾರ್ ಲಿಂಕ್‌ ಆಗದ ಖಾತೆಗಳಿಗೆ ಹಣ ವರ್ಗಾವಣೆಯಾಗಿಲ್ಲ. ಆಧಾರ್‌ ಸೇವಾ ಸಿಂಧು ಪೋರ್ಟಲ್‌ ಮೂಲಕ ರಾಜ್ಯದ 30 ಸಾವಿರಕ್ಕೂ ಅಧಿಕ ರೋಗಿಗಳಿಗೆ ₹30 ಕೋಟಿಗೂ ಅಧಿಕ ಹಣ ವರ್ಗಾಯಿಸಲಾಗಿದೆ. ಉಳಿದವರ ಖಾತೆಗಳಿಗೂ ಹಣ ವರ್ಗಾವಣೆಗೆ ಕ್ರಮ ಕೈಗೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

ರಾಜ್ಯದ 81,585 ಕ್ಷಯ ರೋಗಿಗಳಿಗೆ ನಿಕ್ಷಯ್‌ ಪೋಷಣ್‌ ಯೋಜನೆ ಅಡಿ ಒಂದು ವರ್ಷದಿಂದ ಆರ್ಥಿಕ ನೆರವು ಸಿಗದ ಕುರಿತು ‘ಪ್ರಜಾವಾಣಿ’ಯು ಫೆ.2ರ ಸಂಚಿಕೆಯಲ್ಲಿ ವರದಿ ಪ್ರಕಟಿಸಿ ಗಮನ ಸೆಳೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT