ಭಾನುವಾರ, ಫೆಬ್ರವರಿ 5, 2023
21 °C

ಮೈಸೂರು: 8ರಿಂದ ಬಹುರೂ‍ಪಿ ರಾಷ್ಟ್ರೀಯ ರಂಗೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ರಂಗಾಯಣವು ಡಿ.8 ರಿಂದ 15ರ ವರೆಗೆ ‘ಬಹುರೂಪಿ ರಾಷ್ಟ್ರೀಯ ರಂಗೋತ್ಸವ’ ಆಯೋಜಿಸಿದ್ದು, ವಿವಿಧ ಭಾಷೆಗಳ ನಾಟಕ ಪ್ರದರ್ಶನ ನಡೆಯಲಿದೆ. 

‘ಡಿ.10ರಂದು ಸಂಜೆ 5.30ಕ್ಕೆ ಉತ್ಸವವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ. ಭಾರತೀಯ ರಾಷ್ಟ್ರೀಯ ನಾಟಕ ಶಾಲೆ (ಎನ್‌ಎಸ್‌ಡಿ) ಅಧ್ಯಕ್ಷ ಪರೇಶ್‌ ರಾವಲ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ’ ಎಂದು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಈ ಬಾರಿ ‘ಭಾರತೀಯತೆ’ ಎಂಬ ಪರಿಕಲ್ಪನೆಯಲ್ಲಿ ಉತ್ಸವ ನಡೆಯಲಿದೆ. 7 ರಾಜ್ಯಗಳ 7 ವಿವಿಧ ಭಾಷೆಗಳ ನಾಟಕ, 12 ಕನ್ನಡ ನಾಟಕ ಹಾಗೂ ಒಂದು ತುಳು ನಾಟಕ ಸೇರಿದಂತೆ ಒಟ್ಟು 20 ನಾಟಕಗಳು ಭೂಮಿಗೀತ, ಕಿರುರಂಗಮಂದಿರ ಹಾಗೂ ಕಲಾಮಂದಿರದಲ್ಲಿ ಪ್ರದರ್ಶನಗೊಳ್ಳಲಿವೆ’ ಎಂದರು. 

‘ಡಿ.8ರಿಂದ ವನರಂಗದಲ್ಲಿ ಜಾನಪದೋತ್ಸವ, 9ರಿಂದ ರಾಷ್ಟ್ರೀಯ ಚಲನಚಿತ್ರೋತ್ಸವವು ರಂಗಾಯಣದ ಡಾ.ಪುನೀತ್‌ ರಾಜ್‌ಕುಮಾರ್ ಚಿತ್ರಮಂದಿರದಲ್ಲಿ ನಡೆಯಲಿದೆ. 10ರಿಂದ ರಾಷ್ಟ್ರೀಯ ವಿಚಾರ ಸಂಕಿರಣ ಆರಂಭವಾಗಲಿದ್ದು, ಕರಕುಶಲ ವಸ್ತುಪ್ರದರ್ಶನವೂ ಇರಲಿದೆ. ಸರ್ಕಾರ ₹ 25 ಲಕ್ಷ ಅನುದಾನ ನೀಡಿದೆ. ನಾಟಕ ಪ್ರದರ್ಶನದ ಟಿಕೆಟ್‌ ಬೆಲೆ ₹ 100 ಆಗಿದೆ’ ಎಂದು ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು